Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಿಎಂ ಪತ್ನಿ ಪಾರ್ವತಿ ಅವರ ಕೊರಳಿಗೆ ಸುತ್ತಿಕೊಳ್ತು ಇನ್ನೊಂದು ಹಗರಣ..!

---Advertisement---

 

ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೂ ಮೂಡಾ ಹಗರಣಕ್ಕೂ ಅದ್ಯಾಕೋ ಸಂಬಂಧವೇ ಕಳೆದುಹೋಗುತ್ತಿಲ್ಲ. ಈಗಾಗಲೇ ಮೂಡಾದಿಂದ ಪಡೆದ ನಿವೇಶನಗಳನ್ನು ವಾಪಾಸ್ ಪಡೆದಿದ್ದಾರೆ. ಆದರೂ ಈಗ ಸಾಮಾಜಿಕ ಕಾರ್ಯಕರ್ತ ಗಂಗರಾಜು ಎಂಬಾತ ಮತ್ತೊಂದು ಹಗರಣದ ಬಗ್ಗೆ ಮಾತನಾಡಿದ್ದಾರೆ. ಆದರೆ ಆ ಜಮೀನನ್ನು ಈಗಾಗಲೇ ಹಿಂತಿರುಗಿಸಿದ್ದಾರೆ.

 

ಮಾಹಿತಿ ನೀಡಿರುವ ಗಂಗರಾಜು, 20-9-2023ರಲ್ಲಿ ಪಾರ್ವತಿ ಅವರು ಎಸ್ ಎಸ್ ಪಿ ಎಂಟರ್ಪ್ರೈಸ್ ಮಾಲೀಕರಾದ ಗಣೇಶ ಅವರಿಂದ 20 ಗುಂಟೆ ಜಮೀನು ಖರೀದಿ ಮಾಡ್ತಾರೆ. ಈ 20 ಗುಂಟೆ ಜಮೀನು ಇದಕ್ಕೂ ಮುಂಚೆ ಮೂಡಾ ಜಾಗವಾಗಿತ್ತು. ರಸ್ತೆಗಾಗಿಯಿದ್ದಂತ ಜಾಗ. ಪೈಪ್ ಲೈನ್ ಹೋಗಿದೆ ಇಲ್ಲಿಂದ. ಪ್ರಾಧಿಕಾರದಿಂದ ಏಕನಿವೇಶನ ಮಾಡಿರುತ್ತಾರೆ. ಆದರೆ ಅದೇ ಜಾಗವನ್ನು, ಪ್ರಾಧಿಕಾರದ ಆಸ್ತಿಯನ್ನ ಪಾರ್ವತಿ ಅವರ ಹೆಸರಿಗೆ ಬರೆದು ಕೊಡುತ್ತಾರೆ‌.

 

ಆ ಜಾಗವನ್ನು ಬಿಟ್ಟುಕೊಟ್ಟ ಮೇಲೆ 1 ಕೋಟಿ 85 ಲಕ್ಷಕ್ಕೆ ಪಾರ್ವತಿಯವರು ರಿಜಿಸ್ಟರ್ ಮಾಡಿಕೊಳ್ಳುತ್ತಾರೆ. ಚೆಕ್ ಮುಖಾಂತರ ಹಣ ಹೋಗಿದೆ. ಈ ಮಾಹಿತಿ ನನಗೆ ಗೊತ್ತಾದ ಮೇಲೆ ದಾಖಲೆಗಳನ್ನು ಕ್ರೂಡೀಕರಿಸಲು ಶುರು ಮಾಡಿದೆ. ಅದಾದ ಮೇಲೆ ಇಲ್ಲಿರುವ ಅವರ ಕಡೆಯವರು, ಇಂಥವರು ನಿಮ್ಮ ಮಾಹಿತಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಲೀಕ್ ಮಾಡುತ್ತಾರೆ. 3-8-2024ರಲ್ಲಿ ಪಾರ್ವತಿ ಅವರು, ಆ ಭೂ ಮಾಲೀಕನನ್ನು ಕರೆದುಕೊಂಡು ಬಂದು ತಿದ್ದುಪಡಿ ಮಾಡಿಕೊಳ್ಳುತ್ತಾರೆ. 21 ಸಾವಿರ ಚದುರಡಿಗೆ ಇದ್ದ ಭೂಮಿಯನ್ನು 13 ಸಾವಿರಕ್ಕೆ ತಿದ್ದುಪಡಿ ಮಾಡಿಕೊಂಡಿದ್ದಾರೆ. ಅದಾದ ಮೇಲೂ ಮತ್ತೆ ವ್ಯತ್ಯಾಸ ಆಗಿದೆ ಎಂಬುದು ಗಮನಕ್ಕೆ ಬರುತ್ತದೆ. ಅದಾದ ಮೇಲೆ ಮತ್ತೊಮ್ಮೆ ತಿದ್ದುಪಡಿ ಮಾಡಿಕೊಳ್ಳುತ್ತಾರೆ. ಈಗ ಆ ಆಸ್ತಿಯನ್ನು ಪ್ರಾಧಿಕಾರಕ್ಕೆ ನೀಡಿದ್ದಾರೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...