ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ಬಿಗ್ ಬಾಸ್ ಸೀಸನ್ 11 ಶುರುವಾಗಿ ವಾರವಾಗಿದೆ. ಇಂದು ಕಿಚ್ಚನ ಪಂಚಾಯ್ತಿಯಲ್ಲಿ ಮೊದಲ ವಾರವೇ ಒಬ್ಬರು ಮನೆಯಿಂದ ಹೊರಗೆ ಬರಲಿದ್ದಾರೆ. ಟಾಸ್ಕ್ ನಲ್ಲಿ ಸರಿಯಾಗಿ ಆಡದಿರುವವರೋ, ಜನಗಳಿಂದ ಮತಗಳನ್ನು ಪಡೆಯದೆ ಇರುವವರೋ ಹೊರಗೆ ಬರಲಿದ್ದಾರೆ. ಆದರೆ ಅದಕ್ಕೂ ಮುನ್ನ ಕಿಚ್ಚನ ಪಂಚಾಯ್ತಿಯಲ್ಲಿ ಒಂದಷ್ಟು ಸರಿ ತಪ್ಪುಗಳ ಮಾತುಕತೆ ನಡೆದು, ಮನರಂಜನೆಯೂ ಸಿಗಲಿದೆ.
ಸೂಪರ್ ಸಂಡೇ ವಿತ್ ಸುದೀಪ ಕಾರ್ಯಕ್ರಮ ನಡೆಯುತ್ತಿದ್ದು, ಎಲ್ಲರೂ ಸೋಫಾದಲ್ಲಿ ಆಸೀನರಾಗಿದ್ದಾರೆ. ಆದರೆ ನರಕವಾಸಿಗಳು ಮಾತ್ರ ನಿಂತುಕೊಂಡೆ ಪಂಚಾಯ್ತಿ ಕೇಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಎಲ್ಲರೂ ನಿಂತುಕೊಂಡೆ ಪಂಚಾಯ್ತಿ ಕೇಳುತ್ತಿದ್ದಾರೆ. ಈ ವಾರ ಧನರಾಜ್ ಸಿಕ್ಕಾಪಟ್ಟೆ ಕಾಮಿಡಿ ಮಾಡಿದ್ದಾರೆ.
ಧನರಾಜ್ ಆಚಾರ್ಯ ಸೋಷಿಯಲ್ ಮೀಡಿಯಾದಲ್ಲೂ ತಮ್ಮದೇ ಸ್ಟೈಲ್ ನಲ್ಲಿ ಕಾಮಿಡಿ ಮಾಡಿಕೊಂಡು ಫೇಮಸ್ ಆದವರು. ಕಾಮಿಡಿ ಜೊತೆಗೆ ಅವರ ಹಾವಭಾವ ನೋಡುವುದಕ್ಕೇನೆ ಚೆಂದ. ಇದೀಗ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಯಾರ್ಯಾರನ್ನು ಯಾವ ಪ್ರಾಣಿಗೆ ಹೋಲಿಕೆ ಮಾಡ್ತೀರಾ ಎಂದು ಕೇಳಿದ್ದಾರೆ. ಅದಕ್ಕೆ ಧನರಾಜ್, ಐಶ್ಚರ್ಯಾ ಅವರನ್ನು ಆನೆಗೆ, ಭವ್ಯಾ ಅವರನ್ನು ಜಿಂಕೆಗೆ ಹೋಲಿಸಿದ್ದಾರೆ. ನಾನು ಜಿಂಕೆ ಅಲ್ವಾ, ಅದಕ್ಕೆ ಅಣ್ಣ ತಂಗಿ ಜಿಂಕೆ ಎಂದಿದ್ದಾರೆ. ಬಳಿಕ ನನ್ನ ಹೆಂಡತಿ ಮನೆಯಲ್ಲಿ ನೋಡ್ತಾ ಇರ್ತಾರೆ ಸರ್ ಎಂದು ನುಳುಚಿಕೊಂಡಿದ್ದಾರೆ. ಆಮೇಲೆ ಜಗದೀಶ್ ಹತ್ತಿರ ಬಂದ ಧನರಾಜ್, ಊಸರವಳ್ಳಿಗೆ ಹೋಲಿಕೆ ಮಾಡಿದ್ದಾರೆ. ಒಮ್ಮೆ ಬಿಗ್ ಬಾಸ್ ಕೊಳ್ಳುತ್ತೇನೆ ಅಂತಾರೆ. ಮತ್ತೊಮ್ಮೆ ಪ್ರಪಂಚವನ್ನೆ ತೆಗೆದುಕೊಳ್ಳುತ್ತೇನೆ ಎನ್ನುತ್ತಾರೆ. ಅದೆಲ್ಲ ಏನು ಬಟ್ಟೆ ಶಾಪ್ ನಲ್ಲಿ ಸಿಗುವ ಚಡ್ಡಿಯ.. ಬಟ್ಟೆಯ ಎಂದಿದ್ದಾರೆ. ಈ ಮಾತು ಕೇಳಿ ಮನೆಯವರೆಲ್ಲಾ ಬಿದ್ದು ಬಿದ್ದು ನಕ್ಕಿದ್ದಾರೆ. ಕಿಚ್ಚ ಸುದೀಪ್ ಕೂಡ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್