Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಿಗ್ ಬಾಸ್, ಪ್ರಪಂಚವೇನು ಅಂಗಡಿಯಲ್ಲಿ ಸಿಗುವ ಚಡ್ಡಿಯಾ..? ಜಗದೀಶ್ ಗೆ ಧನರಾಜ್ ಟಾಂಗ್..!

---Advertisement---

ಬಿಗ್ ಬಾಸ್ ಸೀಸನ್ 11 ಶುರುವಾಗಿ ವಾರವಾಗಿದೆ. ಇಂದು ಕಿಚ್ಚನ ಪಂಚಾಯ್ತಿಯಲ್ಲಿ ಮೊದಲ ವಾರವೇ ಒಬ್ಬರು ಮನೆಯಿಂದ ಹೊರಗೆ ಬರಲಿದ್ದಾರೆ. ಟಾಸ್ಕ್ ನಲ್ಲಿ ಸರಿಯಾಗಿ ಆಡದಿರುವವರೋ, ಜನಗಳಿಂದ ಮತಗಳನ್ನು ಪಡೆಯದೆ ಇರುವವರೋ ಹೊರಗೆ ಬರಲಿದ್ದಾರೆ. ಆದರೆ ಅದಕ್ಕೂ ಮುನ್ನ ಕಿಚ್ಚನ ಪಂಚಾಯ್ತಿಯಲ್ಲಿ ಒಂದಷ್ಟು ಸರಿ ತಪ್ಪುಗಳ ಮಾತುಕತೆ ನಡೆದು, ಮನರಂಜನೆಯೂ ಸಿಗಲಿದೆ.

ಸೂಪರ್ ಸಂಡೇ ವಿತ್ ಸುದೀಪ ಕಾರ್ಯಕ್ರಮ ನಡೆಯುತ್ತಿದ್ದು, ಎಲ್ಲರೂ ಸೋಫಾದಲ್ಲಿ ಆಸೀನರಾಗಿದ್ದಾರೆ. ಆದರೆ ನರಕವಾಸಿಗಳು ಮಾತ್ರ ನಿಂತುಕೊಂಡೆ ಪಂಚಾಯ್ತಿ ಕೇಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಎಲ್ಲರೂ ನಿಂತುಕೊಂಡೆ ಪಂಚಾಯ್ತಿ ಕೇಳುತ್ತಿದ್ದಾರೆ. ಈ ವಾರ ಧನರಾಜ್ ಸಿಕ್ಕಾಪಟ್ಟೆ ಕಾಮಿಡಿ ಮಾಡಿದ್ದಾರೆ.

ಧನರಾಜ್ ಆಚಾರ್ಯ ಸೋಷಿಯಲ್ ಮೀಡಿಯಾದಲ್ಲೂ ತಮ್ಮದೇ ಸ್ಟೈಲ್ ನಲ್ಲಿ ಕಾಮಿಡಿ ಮಾಡಿಕೊಂಡು ಫೇಮಸ್ ಆದವರು. ಕಾಮಿಡಿ ಜೊತೆಗೆ ಅವರ ಹಾವಭಾವ ನೋಡುವುದಕ್ಕೇನೆ ಚೆಂದ. ಇದೀಗ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಯಾರ್ಯಾರನ್ನು ಯಾವ ಪ್ರಾಣಿಗೆ ಹೋಲಿಕೆ ಮಾಡ್ತೀರಾ ಎಂದು ಕೇಳಿದ್ದಾರೆ. ಅದಕ್ಕೆ ಧನರಾಜ್, ಐಶ್ಚರ್ಯಾ ಅವರನ್ನು ಆನೆಗೆ, ಭವ್ಯಾ ಅವರನ್ನು ಜಿಂಕೆಗೆ ಹೋಲಿಸಿದ್ದಾರೆ. ನಾನು ಜಿಂಕೆ ಅಲ್ವಾ, ಅದಕ್ಕೆ ಅಣ್ಣ ತಂಗಿ ಜಿಂಕೆ ಎಂದಿದ್ದಾರೆ. ಬಳಿಕ ನನ್ನ ಹೆಂಡತಿ ಮನೆಯಲ್ಲಿ ನೋಡ್ತಾ ಇರ್ತಾರೆ ಸರ್ ಎಂದು ನುಳುಚಿಕೊಂಡಿದ್ದಾರೆ‌. ಆಮೇಲೆ ಜಗದೀಶ್ ಹತ್ತಿರ ಬಂದ ಧನರಾಜ್, ಊಸರವಳ್ಳಿಗೆ ಹೋಲಿಕೆ ಮಾಡಿದ್ದಾರೆ. ಒಮ್ಮೆ ಬಿಗ್ ಬಾಸ್ ಕೊಳ್ಳುತ್ತೇನೆ ಅಂತಾರೆ. ಮತ್ತೊಮ್ಮೆ ಪ್ರಪಂಚವನ್ನೆ ತೆಗೆದುಕೊಳ್ಳುತ್ತೇನೆ ಎನ್ನುತ್ತಾರೆ‌‌. ಅದೆಲ್ಲ ಏನು ಬಟ್ಟೆ ಶಾಪ್ ನಲ್ಲಿ ಸಿಗುವ ಚಡ್ಡಿಯ.. ಬಟ್ಟೆಯ ಎಂದಿದ್ದಾರೆ. ಈ ಮಾತು ಕೇಳಿ ಮನೆಯವರೆಲ್ಲಾ ಬಿದ್ದು ಬಿದ್ದು ನಕ್ಕಿದ್ದಾರೆ. ಕಿಚ್ಚ ಸುದೀಪ್ ಕೂಡ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment