ದಾವಣಗೆರೆ,ಸೆಪ್ಟೆಂಬರ್.21: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ನಡೆಯುತ್ತಿದ್ದು ದಾಖಲೆ ಒದಗಿಸದ 7086 ಮತದಾರರಿಗೆ ನೋಟಿಸ್ ನೀಡಲಾಗಿದೆ. ಇದರಲ್ಲಿ ಶೇ 50 ರಷ್ಟು ವಿಚಾರಣೆಯನ್ನು ಪೂರ್ಣಗೊಳಿಸಲಾಗಿದೆ. ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಸೆಪ್ಟೆಂಬರ್ 23 ರ ವರೆಗೆ ಅವಕಾಶ ಇದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗAಗಾಧರಸ್ವಾಮಿ ತಿಳಿಸಿದರು.
ಕರಡು ಮತದಾರರ ಪಟ್ಟಿಯನ್ವಯ 1808 ಮತಗಟ್ಟೆಗಳ ವ್ಯಾಪ್ತಿಯಲ್ಲಿ 1298219 ಮತದಾರರಿದ್ದಾರೆ. ಎಸ್.ಐ.ಆರ್.ವೇಳೆ ದಾಖಲೆಗಳನ್ನು ಒದಗಿಸದ 7086 ಮತದಾರರಿಗೆ ಪರಿಶೀಲನೆಗಾಗಿ ನೋಟಿಸ್ಗಳನ್ನು ಜಾರಿ ಮಾಡಲಾಗಿದ್ದು, ಶೇ. 100ರಷ್ಟು ನೋಟಿಸ್ಗಳು ಸಂಬAಧಪಟ್ಟವರಿಗೆ ತಲುಪಿವೆ. ಇದರಲ್ಲಿ ಈವರೆಗೆ 5,461 ಜನರಿಗೆ ವಿಚಾರಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ಅರ್ಹರಿಗೆ ದಾಖಲೆಗಳನ್ನು ಸಲ್ಲಿಸಲು ಮತದಾರರಿಗೆ ಮೊದಲ ಮತ್ತು ಎರಡನೇ ವಿಚಾರಣೆಯ ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದರು.
ಈವರೆಗೆ ಕರಡು ಪಟ್ಟಿನಂತರ 15 ಜನರು ಮೃತರಾಗಿದ್ದು ಒಟ್ಟು 18 ಜನರ ಹೆಸರುಗಳು ಮಾತ್ರ ತಿರಸ್ಕಾರಿಸಲಾಗಿದೆ. ಒಬ್ಬರು ವಿದೇಶದಲ್ಲಿದ್ದು ಅವರು ಬರಲು ಸಾಧ್ಯವಾಗದೇ ಇರುವುದರಿಂದ ಮತ್ತು ಒಬ್ಬರು ಕಾರಾಗೃಹದಲ್ಲಿರುವುದರಿಂದ ಈ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತಿರಸ್ಕಾರ ಮಾಡಲಾಗಿದೆ. ಆದರೆ ಚುನಾವನಾ ಆಯೋಗ ಮತದಾರರು ವಿದೇಶದಲ್ಲಿದ್ದರೆ, ಅನಾರೋಗ್ಯ, ವಯೋವೃದ್ದರಾಗಿದ್ದಲ್ಲಿ ಅವರ ಕುಟುಂಬದ ಸದಸ್ಯರು ವಿಚಾರಣೆಗೆ ಹಾಜರಾಗಿ ದಾಖಲೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿದೆ. ಇದರಿಂದ ವಿಚಾರಣೆಗೆ ಹಾಜರಾಗಲು ಸಡಿಲಿಕೆ ಮತ್ತು ಅವಕಾಶಗಳು ಸಿಕ್ಕಿವೆ. ಆದರೆ ಯಾವುದೇ ಅರ್ಹ ಮತದಾರರನ್ನು ಯಾವುದೇ ಕಾರಣಗಳಿಲ್ಲದೇ ಪಟ್ಟಿಯಿಂದ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದರು.
ನೇಪಾಳಿ ಪ್ರಜೆಗಳ ಪತ್ತೆ – ಸರ್ಕಾರದ ಗಮನಕ್ಕೆ: ಜಿಲ್ಲೆಯಲ್ಲಿ ಮತದಾರರ ಪರಿಶೀಲನೆ ವೇಳೆ 5 ಜನ ನೇಪಾಳಿ ಪ್ರಜೆಗಳು ಕಂಡುಬAದಿದ್ದು, ಅವರ ವಿವರಗಳನ್ನು ಚುನಾವಣಾ ಆಯೋಗ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಒಳಾಡಳಿತ ಇಲಾಖೆಗೆ ಅಗತ್ಯ ಕ್ರಮಕ್ಕಾಗಿ ರವಾನಿಸಲಾಗಿದೆ ಎಂದ ಅವರು ಇನ್ನೊಂದು ವಾರದಲ್ಲಿ ಶೇ 90 ರಷ್ಟು ವಿಚಾರಣೆ ಪೂರ್ಣಗೊಳ್ಳಲಿದೆ ಎಂದರು.
ಸ್ವಯಂಪ್ರೇರಿತವಾಗಿ ಮತದಾರರ ಹೆಸರು ಡಿಲೀಟ್ ಮಾಡಲು ಅವಕಾಶವಿಲ್ಲ: ದಾವಣಗೆರೆ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಸಾವಿರಾರು ಮತದಾರರ ಹೆಸರುಗಳನ್ನು ಕೈಬಿಡಬೇಕೆಂದು ರಾಜಕೀಯ ಪಕ್ಷಗಳ ಮುಖಂಡರು ಒತ್ತಾಯಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಕರಡು ಪಟ್ಟಿಯನ್ನು ಎಲ್ಲ ಬೂತ್ ಮಟ್ಟದ ಏಜೆಂಟರಿಗೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಸ್ವಯಂಪ್ರೇರಿತವಾಗಿ ಮತದಾರರನ್ನು ಪಟ್ಟಿಯಿಂದ ಡಿಲೀಟ್ ಮಾಡುವ ಅಧಿಕಾರ ಅಧಿಕಾರಿಗಳಿಗೆ ಇರುವುದಿಲ್ಲ. ಕೇವಲ ಮೃತಪಟ್ಟವರು ಮತ್ತು ದ್ವಿಪ್ರತಿಯಾಗಿರುವ ಹೆಸರುಗಳನ್ನು ಪರಿಶೀಲಿಸಿ ಕೈಬಿಡಬಹುದು. ಮತದಾರರು ಬೇರೆಡೆ ವಾಸವಿದ್ದಾರೆ ಎಂಬ ಕಾರಣಕ್ಕೆ ಅಧಿಕಾರಿಗಳೇ ತಾವಾಗಿ ಹೆಸರು ರದ್ದುಪಡಿಸಲು ಬರುವುದಿಲ್ಲ, ಅದಕ್ಕೆ ಮತದಾರರಿಂದಲೇ ‘ನಮೂನೆ-7’ ಸಲ್ಲಿಕೆಯಾಗುವುದು ಕಡ್ಡಾಯ,” ಎಂದು ಸ್ಪಷ್ಟಪಡಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಸಂಪೂರ್ಣ ನಿಯಮಾನುಸಾರ, ನಿಷ್ಪಕ್ಷಪಾತವಾಗಿ ಹಾಗೂ ಪಾರದರ್ಶಕವಾಗಿ ನಡೆಸಲಾಗುತ್ತಿದ್ದು, ಸಾರ್ವಜನಿಕರು ಹಾಗೂ ರಾಜಕೀಯ ಮುಖಂಡರು ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಕೋರಿದರು.
ಪದವೀಧರ ಕ್ಷೇತ್ರದ ಮತದಾರರ ನೋಂದಣಿಗೆ ಇನ್ನೂ ಅವಕಾಶ
ಆಗ್ನೇಯ ಪದವೀಧರ ಮತಕ್ಷೇತ್ರದ ಕರಡು ಮತದಾರರ ಪಟ್ಟಿಯಲ್ಲಿ ಜಿಲ್ಲೆಯಲ್ಲಿ 24,281 ಮತದಾರರಿದ್ದರು. ಸದ್ಯ ಈ ಸಂಖ್ಯೆ 29,739 ಕ್ಕೆ ಏರಿಕೆಯಾಗಿದೆ. ಇದಲ್ಲದೆ ಇನ್ನೂ 401 ಹೊಸ ಅರ್ಜಿಗಳು ಪರಿಶೀಲನೆಗೆ ಬಾಕಿ ಇವೆ. ಮತದಾರರ ಪಟ್ಟಿ ಸೇರ್ಪಡೆಯು ನಿರಂತರ ಪ್ರಕ್ರಿಯೆಯಾಗಿದ್ದು, ಅರ್ಹ ಪದವೀಧರರು ತಕ್ಷಣವೇ ಅರ್ಜಿ ಸಲ್ಲಿಸಿ ಮತದಾರರಾಗಿ ನೋಂದಾಯಿಸಿಕೊಳ್ಳುವAತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.











