ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ. ಸೆ. 21 : ನಗರದ ಹೂರ ವಲಯದ ಮಾಳಪ್ಪನಹಟ್ಟಿಯಲ್ಲಿ ನಿರ್ಮಾಣ ಮಾಡಲಾದ ಭಜರಂಗಿ ಬಾಯ್ಸ್ ಗಣಪತಿ ಮಹೋತ್ಸವದಲ್ಲಿ ಸೋಮವಾರ ನಡೆದ ಪೂಜಾ ಕಾರ್ಯಕ್ರಮದಲ್ಲಿ ಮಳೆಗಾಗಿ ಪ್ರಾರ್ಥನೆಯನ್ನು ಮಾಡಲಾ ಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಭಜರಂಗಿ ಬಾಯ್ಸ್ ಸಂಘಟನೆಯ ಸಂಚಾಲಕರಾದ ಭಾಗೇಶ್ ಉಗ್ರಾಣ ವರ್ಷದಂತೆ ಈ ಬಾರಿಯೂ ಗಣೇಶೋತ್ಸವವನ್ನು ಆಚರಿಸಲಾಗುತ್ತಿದ್ದು, ಪ್ರದೇಶದಲ್ಲಿ ಮಳೆಯ ಅಭಾವದಿಂದಾಗಿ ಎದುರಾಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿವರ್ಷ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಸಂದರ್ಭದಲ್ಲಿ ಮಳೆ ಬರುವ ವಾಡಿಕೆ ಇತ್ತು. ಆದರೆ ಈ ವರ್ಷ ಸೂಕ್ತ ಸಮಯಕ್ಕೆ ಮಳೆ ಬರದ ಕಾರಣ ರೈತರು ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ. ಹಾಗೂ ಊರಿನಲ್ಲಿ ಶಾಂತಿಯ ವಾತಾವರಣದ ಅಭಾವ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಬಜರಂಗಿ ಬಾಯ್ಸ್ ಯುವಕರು ಚರ್ಚೆ ನಡೆಸಿ, ಡಿಜೆ ಅಥವಾ ಅದ್ದೂರಿ ಕಾರ್ಯಕ್ರಮಗಳಿಗಿಂತ ಹೆಚ್ಚಾಗಿ, ಊರಿನ ಒಳಿತಿಗಾಗಿ ಮತ್ತು ಮಳೆ ಬರಲೆಂದು ದೇವತಾ ಆರಾಧನೆ ಹಾಗೂ ಶಾಂತಿ ಪೂಜೆಗಳನ್ನು ನೆರವೇರಿಸಲು ತೀರ್ಮಾನಿಸಲಾಯಿತು.
ಸೋಮವಾರವಾದ ಇಂದು ಮಳೆಗಾಗಿ ಗಣಪತಿಯ ಪೂಜೆಯೊಂದಿಗೆ ಬರಗೆರಮ್ಮ, ಮಲ್ಲಾಡ್ ಮತ್ತು ಚೌಡೇಶ್ವರಿ ತಾಯಿಯವರನ್ನು ಆಹ್ವಾನ ಮಾಡಿ ಅವರಿಗೆ ಪೂಜೆಯನ್ನು ಸಲ್ಲಿಸುವುದರ ಮೂಲಕ ಗ್ರಾಮದ ಮಹಿಳೆಯರಿಂದ ಮಳೆಗಾಗಿ ದೇವಿ ಪಾರಾಯಣಗಳನ್ನು ನೆರವೇರಿಸಲಾಗುತ್ತಿದೆ. ಇಂದಿನ ದಿನ ಮಳೆಗಾಗಿ ವಿಶೇಷ ಹೋಮ ಮತ್ತು ಪೂಜಾ ಕೈಂಕರ್ಯಗಳು ನೆರವೇರಲಿವೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಊರಿನ ಸುಮಾರು 1,000 ಜನರು ಭಾಗವಹಿಸಿದ್ದರು. ಆಡಂಬರಕ್ಕಿಂತ ಊರಿನ ಕಲ್ಯಾಣ ಹಾಗೂ ಮಳೆಯ ನಿರೀಕ್ಷೆಯೊಂದಿಗೆ ಧಾರ್ಮಿಕ ಮತ್ತು ಶಾಂತಿ ಕಾರ್ಯಕ್ರಮಗಳನ್ನು ನೆರವೇರಿಸುವುದೇ ಈ ಬಾರಿಯ ಗಣೇಶೋತ್ಸವದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದ ಅವರು. ನಾಳೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತದನಂತರದ ದಿನ ಗಣೇಶ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ ಎಂದರು. ಕಾರ್ಯಕ್ರಮದ ನಂತರ ಗ್ರಾಮಸ್ಥರಿಗೆ ಅನ್ನ ಸಂತರ್ಪಣೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾಳಪ್ಪನಹಟ್ಟಿಯ ಮುಖಂಡರಾದ ಭಜರಂಗಿ ಬಾಯ್ಸ್ ಸಂಘಟನೆಯ ಅಧ್ಯಕ್ಷರಾದ ಪವನ್, ಶಿವರಾಜ್, ಗುರುಸ್ವಾಮಿ, ಕಿರಣ್, ದರ್ಶನ್ ಮಂಜು ಸೇರಿದಂತೆ ಇತರರು ಭಾಗವಹಿಸಿದ್ದರು.










