Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದರ್ಶನ್ ಭೇಟಿಯಾದ ರಕ್ಷಿತಾ-ಪ್ರೇಮ್ ಹೇಳಿದ್ದೇನು..?

---Advertisement---

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅಂಡ್ ಗ್ಯಾಂಗ್ ಜೈಲುಪಾಲಾಗಿದ್ದಾರೆ. ಈ ಪ್ರಕರಣ ಸಂಬಂಧ ಆರಂಭದಲ್ಲಿ ಇಂಡಸ್ಟ್ರಿಯವರು ಯಾರೂ ಕೂಡ ಮಾತನಾಡುತ್ತಿರಲಿಲ್ಲ. ಈಗ ಒಬ್ಬೊಬ್ಬರೇ ಮಾತನಾಡುವುದಕ್ಕೆ ಶುರು ಮಾಡಿದ್ದಾರೆ. ದರ್ಶನ್ ಪರ ಮಾತನಾಡುವುದು, ದರ್ಶನ್ ಪರ ಧ್ವನಿ ಎತ್ತುವುದನ್ನು ಮಾಡುತ್ತಿದ್ದಾರೆ. ಆ ಸಾಲಿಗೆ ನಟಿ ರಕ್ಷಿತಾ, ನಿರ್ದೇಶಕ ಪ್ರೇಮ್ ಕೂಡ ಸೇರಿದ್ದಾರೆ.

ನಟಿ ರಕ್ಷಿತಾ ಹಾಗೂ ದರ್ಶನ್ ಜೋಡಿಯಲ್ಲಿ ಬಂದ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿದ್ದವು. ಇಬ್ಬರ ನಡುವೆ ಒಳ್ಳೆಯ ಫ್ರೆಂಡ್ಶಿಪ್ ಕೂಡ ಇದೆ. ಪ್ರೇಮ್ ಜೊತೆಗೂ ದರ್ಶನ್ ಒಡನಾಟ ಇಟ್ಟುಕೊಂಡಿದ್ದಾರೆ. ಮುಂದೆ ಸಿನಿಮಾ ಮಾಡುವುದಾಗಿಯೂ ಘೋಷಣೆ ಮಾಡಿಕೊಂಡಿದ್ದರು. ಸದ್ಯಕ್ಕೆ ನಿರ್ದೇಶಕ ಪ್ರೇಮ್ ಕೆಡಿ ಸಿನಿಮಾವನ್ನು ಮಾಡುತ್ತಿದ್ದಾರೆ. ಕೆಡಿ ಸಿನಿಮಾದ ಸೆಟ್ ಗೂ ದರ್ಶನ್ ಒಮ್ಮೆ ಭೇಟಿ ನೀಡಿದ್ದರು. ಇದೀಗ ದರ್ಶನ್ ಕೊಲೆ ಕೇಸಿನಲ್ಲಿ ಜೈಲಿನಲ್ಲಿರುವಾಗ ಪ್ರೇಮ್ ಹಾಗೂ ರಕ್ಷಿತಾ ಜೈಲಿಗೆ ಭೇಟಿ ನೀಡಿ ಬಂದಿದ್ದಾರೆ.

 

ದರ್ಶನ್ ಭೇಟಿ ಬಳಿಕ ಮಾತನಾಡಿದ ನಟಿ ರಕ್ಷಿತಾ, ಹದಿನೈದು ಇಪ್ಪತ್ತು ದಿನದಿಂದ ಆಗಿರುವುದು ದುರದೃಷ್ಟಕರ. ನಮಗೆ ಈ ಪ್ರಕರಣದ ಬಗ್ಗೆ ಬೇಜಾರು ಇದೆ ಎಂದರು. ಬಳಿಕ ಮಾತನಾಡಿದ ಪ್ರೇಮ್, ಪ್ರಕರಣ ನ್ಯಾಯಾಲಯದಲ್ಲಿದೆ. ಈ ಸಮಯದಲ್ಲಿ ನಾವೂ ಮಾತನಾಡುವುದು ಸರಿಯಲ್ಲ. ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ ಕಾನೂನಿಗಿಂತ ದೊಡ್ಡವರು ಯಾರು ಇಲ್ಲ ಎಂದರು.

ಇನ್ನು ಕೊಲೆಯಾದ ರೇಣುಕಾಸ್ವಾಮಿ ಮದುವೆಯಾಗಿ ಇತ್ತಿಚೆಗಷ್ಟೇ ವರ್ಷ ತುಂಬಿದೆ. ಅಶ್ಲೀಲ ಮೆಸೇಜುಗಳ ಗೀಳಿಗೆ ಬೀಳದೆ ಇದ್ದಿದ್ದರೆ ರೇಣುಕಾಸ್ವಾಮಿ ತನ್ನ ಮುದ್ದಾದ ಹೆಂಡತಿಯೊಂದಿಗೆ ಇಂದು ಸುಖ ಸಂಸಾರ ಮಾಡುತ್ತಿದ್ದ. ಮುಂದೆ ಹುಟ್ಟುವ ಮಗುವಿನ ಮುಖವನ್ನು ನೋಡದಂತೆ ಆಗಿ ಹೋಯ್ತು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment