Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬೆಂಗಳೂರಿನಲ್ಲಿ 3 ದಿನ ಸಾಧಾರಣ ಮಳೆ‌: ಉಳಿದಂತೆ ಎಲ್ಲೆಲ್ಲಿ ಎಷ್ಟು ಮಳೆ ಸಾಧ್ಯತೆ..?

---Advertisement---

ಬೆಂಗಳೂರು: ಬಿಸಿಬಿಸಿ ಎನ್ನುತ್ತಿದ್ದ ಬೆಂಗಳೂರು ಮಂದಿಗೆ ನಿನ್ನೆ ವರುಣರಾಯ ತಂಪೆರೆದಿದ್ದ. ಮಧ್ಯಾಹ್ನವೇ‌ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಕತ್ತಲು ಕವಿದಿತ್ತು. 3 ಗಂಟೆಯ ವೇಳೆಗೆ ಎಲ್ಲೆಲ್ಲೂ ಜೋರು ಮಳೆಯಾಗಿತ್ತು. ಮಳೆ ಕಂಡು ಬೆಂಗಳೂರು ಮಂದಿ ಹರ್ಷ ವ್ಯಕ್ತಪಡಿಸಿದ್ದರು. ಇಂದು ಕೂಡ ಮಳೆ ಬೀಳಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಹವಮಾನ ಇಲಾಖೆ‌ನೀಡಿರುವ ಮಾಹಿತಿ ಪ್ರಕಾರ, ಮುಂದಿನ ಮೂರು ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂಬುದನ್ನು ತಿಳಿಸಿದೆ.

ಮೇ 7 ಮತ್ತು 8ರ ನಂತರ ಸಿಲಿಕಾನ್ ಸಿಟಿಯಲ್ಲಿ ಜೋರು ಮಳೆಯಾಗಲಿದೆ. ಆದರೆ ಅದಕ್ಕೂ ಮುನ್ನ ಮೂರು ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ‌ ಈ ಮೂರು ದಿನಗಳ ಕಾಲ ತಾಪಮಾನವೂ ಮುಂದುವರೆಯುವ ಸಾಧ್ಯತೆ ಇದೆ. ಉಷ್ಣಾಂಶ ಗರಿಷ್ಠ 38 ಡಿಗ್ರಿ ಇರಲಿದ್ದು, ಕನಿಷ್ಠ 24 ಡಿಗ್ರಿ ಮುಂದುವರೆಯುವ ಸಾಧ್ಯತೆ ಇದೆ.

ಇನ್ನು ದಕ್ಷಿಣ ಒಳನಾಡಿನ ಚಾಮರಾಜನಗರ, ಮೈಸೂರು, ಕೊಡಗು, ಮಂಡ್ಯ, ರಾಮನಗರ, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಹಗುರವಾದ ಮಳೆ ಸುರಿಯಲಿದೆ. ಮೇ 7ರ ಬಳಿಕ ದಕ್ಷಿಣ ಒಳನಾಡಿನಲ್ಲೂ ಜೋರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಸೂಚನೆಯನ್ನು ನೀಡಿದೆ. ಇನ್ನು ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಸದ್ಯ ಕೊಂಚ ಮಟ್ಟಿಗೆ ಉಷ್ಣಾಂಶ ತಗ್ಗಿದೆ. ಹೀಗಾಗಿ ಜನ ಬಿಸಿಲಿನ ಬೇಗೆಗೆ ಸುಸ್ತಾಗಿದ್ದವರು ಸುಧಾರಿಸಿಕೊಂಡಿದ್ದಾರೆ. ಇನ್ನು ಮೂರು ದಿನಗಳ ಬಳಿಕ ಉತ್ತಮ ಮಳೆಯಾಗಲಿದೆ ಎಂದು ಕೇಳಿನೇ ಸಂತಸಗೊಂಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment