Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕಾಂತಾರ ಸಿನಿಮಾ ಸಮಾಜದ ಮುಖ್ಯವಾಹಿನಿಗೆ ಬರಲು ನಾಡಿನ ಪ್ರೇಕ್ಷಕರ ಅಭಿಮಾನವೇ ಕಾರಣ : ನಟಿ ಮಾನಸಿ ಸುಧೀರ್

---Advertisement---

ಸುದ್ದಿಒನ್,  ಚಳ್ಳಕೆರೆ : ತುಳು ಜನಾಂಗದ ಧಾರ್ಮಿಕ ಆರಾಧ್ಯ ದೇವರ ಮಹತ್ವ ಸಾರುವ ಕಾಂತಾರ ಸಿನಿಮಾ ಸಮಾಜದ ಮುಖ್ಯವಾಹಿನಿಗೆ ಬರಲು ನಾಡಿನ ಪ್ರೇಕ್ಷಕರ ಅಭಿಮಾನವೇ ಕಾರಣ ಎಂದು ಸಿನಿಮಾದ ನಾಯಕ ನಟ ರಿಷಭ್‍ಶೆಟ್ಟಿ ಅವರ ಅಮ್ಮನ ಪಾತ್ರ ಮಾಡಿರುವ ನಟಿ ಮಾನಸಿ ಸುಧೀರ್ ಹೇಳಿದ್ದಾರೆ.

ಚಿತ್ರದುರ್ಗದ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಪದಾಧಿಕಾರಿಗಳು ಉಡುಪಿಯಲ್ಲಿನ ತಮ್ಮ ನಿವಾಸದಲ್ಲಿ ಸೋಮವಾರ ಅಭಿನಂದಿಸಿದ ವೇಳೆ ಮಾತನಾಡಿದ್ದಾರೆ.
ತುಳು ಭಾಷೆ ಮತ್ತು ಇಲ್ಲಿನ ಸಂಸ್ಕøತಿ ಆಚರಣೆಯಲ್ಲಿನ ದೈವಭಕ್ತಿ ಕಾಂತಾರ ಸಿನಿಮಾದ ಪ್ರಧಾನ ವಸ್ತು ವಿಷಯವಾಗಿದೆ. ವಯಸ್ಸಿನಲ್ಲಿ ಚಿಕ್ಕವಳಾಗಿದ್ದರೂ ತಾಯಿ ಪಾತ್ರಕ್ಕೆ ನನ್ನ ನಟನಾ ಕೌಶಲ್ಯವನ್ನು ಗುರುತಿಸಿದ ರಿಷಭ್‍ಶೆಟ್ಟಿ ಒಪ್ಪಿಗೆಯಂತೆ ತಾಯಿ ಪಾತ್ರ ನಟಿಸಲು ಅವಕಾಶವಾಯಿತು.

ಯಾವುದೇ ಕ್ಷೇತ್ರದಲ್ಲಿ ಒಳ್ಳೆಯ ಅವಕಾಶ ಬಯಸುವುದಕ್ಕಿಂತ ಮೊದಲು ನಮ್ಮಲ್ಲಿ ಪರಿಶ್ರಮ ಮತ್ತು ಆಸಕ್ತಿ ಇರಬೇಕು. ಯೂಟ್ಯೂಬ್ ಪ್ರಸಾರಕ್ಕೆ ಸಣ್ಣ ಪ್ರಮಾಣದಲ್ಲೂ ತುಂಬಾ ಆಸಕ್ತಿಯಿಂದ ನಟನಾ ಕೌಶಲ್ಯ ರೂಢಿಸಿಕೊಂಡಿದ್ದರ ಫಲವಾಗಿ, ರಿಷಭ್‍ಶೆಟ್ಟಿಯಂತಹ ಮೇರು ನಟರು ಗುರುತಿಸಿ ನಟನೆಗೆ ಅವಕಾಶ ನೀಡಲಾಗಿದೆ. ಕಲಾವಿದರಿಗೆ ಯಾವುದೇ ಭಾಷೆ, ವರ್ಗ, ಗಡಿ ಇಲ್ಲ ಎನ್ನುವ ಭಾವನೆ ಇದೆ. ಈ ದಿಸೆಯಲ್ಲಿ ಮಧ್ಯ ಕರ್ನಾಟಕದ ಸಾಹಿತ್ಯ ಸಂಘಟನೆಯವರು ಬಂದು ಅಭಿನಂದಿಸಿರುವುದು ನನ್ನ ಕಲಾ ಬದುಕಿಗೆ ಸಾರ್ಥಕ ಅನಿಸುತ್ತದೆ ಎಂದು ಸ್ಮರಿಸಿದ್ದಾರೆ.

ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷೆ ಆರ್. ದಯಾವತಿ ಪುತ್ತೂರ್ಕರ್ ಮಾತನಾಡಿ, ಬದಲಾಗುತ್ತಿರುವ ಸಮಾಜದಲ್ಲಿ ಸಿನಿಮಾ ಕತೆಗಳು ಜನರಿಗೆ ಒಪ್ಪುವುದಿಲ್ಲ. ಇಂತಹ ಕಾಲಘಟ್ಟದಲ್ಲೂ ಕಾಂತಾರ ಸಿನಿಮಾ ಕೌಟುಂಬಿಕವಾಗಿ ನೋಡುವಂತಹ ಕತೆ ಆಧಾರಿತವಾಗಿದೆ. ತಾಯಿ ಪಾತ್ರ ನಿರ್ವಹಣೆಯಲ್ಲಿ ನಿಮ್ಮ ಕಲಾ ಕೌಶಲ್ಯತೆ ಮಹಿಳಾ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಪದಾಧಿಕಾರಿಗಳಾದ ಸತ್ಯಭಾಮ, ರಂಗಲಕ್ಷ್ಮಿ, ಉಷಾರಾಣಿ, ರಶ್ಮಿ, ಪದ್ಮರಾಣಿ, ಸೌಮ್ಯಪುತ್ರನ್, ಡಾ. ಗೌರಮ್ಮ, ಶೋಭಾ, ಮಹೇಶ್ವರಿ, ಸವಿತಾ, ಟಿ. ಗೀತಾ  ಮತ್ತಿತರರು ಇದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment