Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿದ್ಯಾರ್ಥಿಗಳು ಸಂಶೋಧನೆಗೆ ಒತ್ತು ನೀಡಲಿ : ಎಸ್.ನಾಗಭೂಷಣ್

---Advertisement---

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.27 : ವಿದ್ಯಾರ್ಥಿಗಳು ಸಂಶೋಧನೆಗೆ ಮತ್ತು ಮೂಲವಿಜ್ಞಾನಕ್ಕೆ ಹೆಚ್ಚು ಗಮನ ಹರಿಸುವುದು ಸೂಕ್ತ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಸಲಹೆ ನೀಡಿದರು.

ನಗರದ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಮ್ಮಿಕೊಂಡಿದ್ದ 31ನೇ ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶವನ್ನು ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.

ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಹಾಗೂ ತಾರ್ಕಿಕ ಪ್ರವೃತ್ತಿ , ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವಂತೆ ಮಾಡುವುದು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ ” ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕ ರಾ ವಿ ಪ ರಾಜ್ಯ ಖಜಾಂಚಿ ಎಚ್.ಎಸ್.ಟಿ.ಸ್ವಾಮಿಯವರು ಮಾತನಾಡಿ, ವಿಜ್ಞಾನ ವಿಷಯವು ಕೇವಲ ಪರೀಕ್ಷೆಗೆ ಹಾಗೂ ಅಂಕಗಳಿಕೆಗೆ ಸೀಮಿತವಾಗದೆ, ತಮ್ಮ ಬದುಕನ್ನು ಕಟ್ಟಿಕೊಳ್ಳುವ ವೈಜ್ಞಾನಿಕ ಚಿಂತನೆಯ ಕಡೆ ಇರಬೇಕು” ಎಂದು ತಿಳಿಸಿದರು.

ಕ ರಾ ವಿ ಪ ಮಾಜಿ ಉಪಾಧ್ಯಕ್ಷ ಚಳ್ಳಕೆರೆ ಯರಿಸ್ವಾಮಿ ಮಾತನಾಡಿ, ಇಂತಹ ವಿಜ್ಞಾನ ಸಮಾವೇಶಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರ ಮೂಲಕ  ತಮ್ಮ ಹಿರಿಮೆಯನ್ನು ಮೆರೆಯಲಿ. ಎಂದರು.

ಕ.ರಾ.ವಿ.ಪ ಜಿಲ್ಲಾ ಅಧ್ಯಕ್ಷರಾದ ಲತೀಫ್ ಸಾಬ್ ಅಧ್ಯಕ್ಷತೆ ವಹಿಸಿದ್ದರು. ಡಿ. ಗೋಪಾಲನಾಯಕ, ಮುಖ್ಯ ಶಿಕ್ಷಕ ಕರಿಯಪ್ಪ, ಕರಾವಿಪ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್, ನಿವೃತ್ತ ಪ್ರಾಂಶುಪಾಲ ಈ.ರುದ್ರಮುನಿ, ಹಾಲೇಶ್, ಶ್ರೀನಿವಾಸಮೂರ್ತಿ, ಜಿಲ್ಲಾ ಸಂಯೋಜಕ ಮಂಜುನಾಥ್ ಉಪಸ್ಥಿತರಿದ್ದರು.

ಜಿಲ್ಲೆಯ ವಿವಿಧ ಶಾಲೆಗಳಿಂದ ಸುಮಾರು 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು. ಇದರಲ್ಲಿ ಅತ್ಯುತ್ತಮವಾದ 10 ಸಂಶೋಧನಾ ಪ್ರಬಂಧಗಳು ರಾಜ್ಯ ಮಟ್ಟಕ್ಕೆ ಆಯ್ಕಯಾಗಿವೆ. ರಾಜ್ಯಮಟ್ಟದ ಸಮಾವೇಶವು 2024 ರ ಜನವರಿ ತಿಂಗಳ ಎರಡನೇ ವಾರದಲ್ಲಿ ಕೊಪ್ಪಳದಲ್ಲಿ ನಡೆಯಲಿದೆ.

“ರಾಜ್ಯಮಟ್ಟಕ್ಕೆ ಆಯ್ಕೆ”

ಗ್ರಾಮೀಣ ಹಿರಿಯರ ವಿಭಾಗ

1. ಸೃಷ್ಟಿ ಕೆ.ಏನ್ D V S ಪ್ರೌಢಶಾಲೆ, ಭರಮಸಾಗರ ಚಿತ್ರದುರ್ಗ ತಾಲ್ಲೂಕು
2. ಮೌಲ್ಯಶ್ರೀ A ಯಜ್ಞಾವಲ್ಕ್ಯ ಪಬ್ಲಿಕ್ ಸ್ಕೂಲ್ ಭೀಮನಬಂಡೆ, ಹಿರಿಯೂರು ತಾಲ್ಲೂಕು
3. ಅನುಷ್ R ಇಂದಿರಾಗಾಂಧಿ ವಸತಿ ಶಾಲೆ, ಚಳ್ಳಕೆರೆ ತಾಲೂಕು

ಗ್ರಾಮೀಣ ಕಿರಿಯರ ವಿಭಾಗ

1. ತನುಜಾ  ಸರ್ಕಾರಿ ಪ್ರೌಢಶಾಲೆ ಚೌಳಿಹಳ್ಳಿ ಗೊಲ್ಲರಹಟ್ಟಿ ಚಿತ್ರದುರ್ಗ ತಾಲ್ಲೂಕು
2.ಸುಪ್ರೀತಾ, K N
D V S ಪ್ರೌಢಶಾಲೆ ಭರಮಸಾಗರ,  ಚಿತ್ರದುರ್ಗ ತಾಲ್ಲೂಕು

ನಗರ ಹಿರಿಯರ ವಿಭಾಗ
1. ಮೌನಿಶ್ S A ವಿದ್ಯಾವಿಕಾಸ ವಿದ್ಯಾ ಸಂಸ್ಥೆ ಚಿತ್ರದುರ್ಗ
2. ವಿಜಯಲಕ್ಷ್ಮಿ M V
S R S  ಶಾಲೆ ಚಿತ್ರದುರ್ಗ
3. ರುಮಾಂಡ್ಲ ಅಧಿತ್ರಿ  S R S ಹೆರಿಟೇಜ್ ಪ್ರೌಢಶಾಲೆ ಚಳ್ಳಕೆರೆ

ನಗರ ಕಿರಿಯರ ವಿಭಾಗ
1. ನಿಬೋಧ್ ಚಕ್ರವರ್ತಿ ಡಾನ್ ಬಾಸ್ಕೋ, ಚಿತ್ರದುರ್ಗ
2. ದಿಯಾ ಗಂಧವಿಡಿ ಸಹ್ಯಾದ್ರಿ ಪ್ರೌಢಶಾಲೆ, ಚಳ್ಳಕೆರೆ

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment