Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಾರ್ಲಿ ಬಿಗ್ ಬಾಸ್ ಮನೆಗೆ ಬರದಿರಲು ಕಾರಣವೇನು ಗೊತ್ತಾ..? ಆ ಪ್ರೊಸಿಜರ್ ಮುಗಿದ ಕೂಡಲೇ ಬಂದೇ ಬರ್ತಾನೆ..!

---Advertisement---

ಬೆಂಗಳೂರು : ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಆರಂಭವಾಗಿದೆ. ಇಂದಿಗೆ ಎರಡು ದಿನ. ಕಂಟೆಸ್ಟೆಂಟ್ ಗಳ ಆಟ ನೋಡುತ್ತಾ, ಪ್ರೇಕ್ಷಕರು ಮನರಂಜನೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರ ನಡುವೆ ಬಿಗ್ ಬಾಸ್ ಬಹುನಿರೀಕ್ಷುತ ಸ್ಪರ್ಧೆಯೊಬ್ಬರು ಮನೆಯೊಳಗೆ ಬರಲೇ ಇಲ್ಲ. ಇದು ಎಲ್ಲರ ಚಿತ್ತ ಕೆಡಿಸಿತ್ತು. ಅಷ್ಟಕ್ಕೂ ಚಾರ್ಲಿ ಯಾವಾಗ ಬರ್ತಾನಪ್ಪ ಎಂದೇ ಕಾಯುತ್ತಿದ್ದರು. ಚಾರ್ಲಿ ಬರ್ತಾನೆ ಅಂತ ಅವತ್ತು ಅನುಬಂಧ ಅವಾರ್ಡ್ ನಲ್ಲೂ ಘೋಷಣೆ ಮಾಡಿತ್ತು.

ಬಿಗ್ ಬಾಸ್ ಆರಂಭಕ್ಕೂ ಮುನ್ನ ಸ್ಪರ್ಧಿಗಳನ್ನು ಮನೆಗೆ ಕಳುಹಿಸುವಾಗ, ಈಗ ಬರ್ತಾನೆ, ಆಗ ಬರ್ತಾನೆ ಅಂತಾನೇ ಎಲ್ಲರೂ ಕಾಯುತ್ತಾ ಇದ್ದರು. ಆದರೆ ಚಾರ್ಲಿ ಬರಲಿಲ್ಲ, ಚಾರ್ಲಿಯ ಹೀರೋಹಿನ್ ಬಂದರು. ಬಳಿಕ ಓ ಇವರನ್ನೇ ಚಾರ್ಲಿ ಅಂತ ಯಾಮಾರಿಸಿದರಾ ಎಂದೆಲ್ಲಾ ಮಾತುಗಳು ಶುರುವಾಯಿತು. ಆದರೆ ಖಂಡಿತ ನಿಮ್ಮ ನಿರೀಕ್ಷೆ ಸುಳ್ಳಾಗುವುದಿಲ್ಲ. ಚಾರ್ಲಿ ಬಂದೇ ಬರುತ್ತಾನೆ. ಆ ದಿನಕ್ಕಾಗಿ ಬಿಗ್ ಬಾಸ್ ತಂಡ ಕೂಡ ಓಡಾಡುತ್ತಿದೆ.

ಬಿಗ್ ಬಾಸ್ ಮನೆಗೆ ಚಾರ್ಲಿ ಎಂಟ್ರಿ ಆಗಬೇಕು ಅಂದರೆ ಮಾಮೂಲಿ ಸ್ಪರ್ಧಿಗಳು ಎಂಟ್ರಿಯಾದಂತೆ ಆಗುವುದಕ್ಕೆ ಸಾಧ್ಯವಿಲ್ಲ. ಅದಕ್ಕೆ ಸಾಕಷ್ಟು ನಿಯಮಗಳನ್ನು ಫಾಲೋ ಮಾಡಬೇಕಾಗುತ್ತದೆ. ಅದರಲ್ಲಿ ಅನಿಮಲ್ ಬೋರ್ಡ್ ಗೆ ಈಗಾಗಲೇ ಚಾರ್ಲಿ ತಂಡ ಮನವಿಯನ್ನು ಕಳುಹಿಸಿದೆ. ಅನಿಮಲ್ ಬೋರ್ಡ್ ನಿಂದ ಇನ್ನು ಯಾವುದೇ ಒಪ್ಪಿಗೆ ಸಿಕ್ಕಿಲ್ಲ. ಅನುಮತಿ ಸಿಕ್ಕ ದಿನವೇ ಚಾರ್ಲಿ ಬಿಗ್ ಬಾಸ್ ಮನೆಯ ಒಳಗೆ ಇರಲಿದ್ದಾನೆ. ಮೊದಲ ಸ್ಪರ್ಧಿಯಾಗುತ್ತಾನೆ ಎಂದುಕೊಂಡಿದ್ದರು, ಆದತೆ ನಿರೀಕ್ಷೆ ಸುಳ್ಳು ಮಾಡದೆ ಖಂಡಿತ ಚಾರ್ಲಿಯನ್ನು ಒಳಗೆ ಕರೆದುಕೊಂಡು ಹೋಗಲಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment