Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶ್ರೀ ಕನ್ಯಕಾಪರಮೇಶ್ವರಿ ಸೌಹಾರ್ದ ಸಹಕಾರಿಗೆ 1.37 ನಿವ್ವಳ ವರಮಾನ : ಎಂ.ಹೆಚ್. ಪ್ರಾಣೇಶ್

---Advertisement---

ಸುದ್ದಿಒನ್, ಚಿತ್ರದುರ್ಗ, (ಆ.15) : ನಗರದ ಪ್ರತಿಷ್ಠಿತ ಶ್ರೀ ಕನ್ಯಕಾಪರಮೇಶ್ವರಿ ಸೌಹಾರ್ದ ಸಹಕಾರಿ ಸಂಘ ನಿಯಮಿತವು 2022-23 ನೇ ಸಾಲಿನಲ್ಲಿ ಸಹಕಾರಿಯ ಲಾಭಾಂಶ ರೂ. 1,37,83,226.82 ಗಳಷ್ಟು ಬಂದಿದೆ ಎಂದು ಅಧ್ಯಕ್ಷರಾದ ಎಂ. ಹೆಚ್. ಪ್ರಾಣೇಶ್ ರವರು ತಿಳಿಸಿದರು.

2022-23ನೇ ಸಾಲಿನ 90 ನೇ  ಸರ್ವಸದಸ್ಯರ ಸಭೆಯನ್ನು ದಿನಾಂಕ 13-08-2023ರ ಭಾನುವಾರ ನಗರದ ವಾಸವಿ ಮಹಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಅದ್ಯಕ್ಷರು ಮಾತನಾಡಿ, ಇದು ತುಂಬಾ ಸಂತೋಷದ ಸಂಗತಿಯಾಗಿದ್ದು, ಇದಕ್ಕೆ ಸಹಕಾರಿಯ ಸದಸ್ಯರೇ ಕಾರಣ ನಿಮ್ಮ ಸಹಕಾರ ಸದಾ ಹೀಗೆ ಇರಲಿ ಎಂದು ಎಂ. ಹೆಚ್. ಪ್ರಾಣೇಶ್ ತಿಳಿಸಿದರು.

ಉಪಾಧ್ಯಕ್ಷ ಟಿ. ಬದರಿನಾಥ್ ಅವರು 2022-23 ನೇ ಸಾಲಿನ ವಾರ್ಷಿಕ ವರದಿಯನ್ನು ಸಭೆಗೆ ತಿಳಿಸಿದರು. 2023 ರ ಮಾರ್ಚ್ ಅಂತ್ಯಕ್ಕೆ 38 ಕೋಟಿ ರೂ. ಠೇವಣಿ, ಸಾಲ ಮತ್ತು ಮುಂಗಡಗಳು ರೂ. 35ಕೋಟಿ ಇದೆ. ಸಹಕಾರಿಯ ಶೇರುದಾರರಿಗೆ ಶೇ. 20ರ ದರದಲ್ಲಿ ಲಾಭಾಂಶವನ್ನು ಪಾವತಿಸಲಾಗಿದೆ. ಈ ಬಾರಿಯೂ ಶೇ. 20 ಲಾಭಾಂಶ ವಿತರಿಸುತ್ತಿರುವುದಾಗಿ ಹೇಳಿದಾಗ ಸಭೆಯಲ್ಲಿದ್ದ ಸದಸ್ಯರು ಕರತಾಡನದ ಮೂಲಕ ಹರ್ಷ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ 2023-24ನೇ ಸಾಲಿನ ಆಯವ್ಯಯವನ್ನು ಸದಸ್ಯರ ಅನುಮೋದನೆಗಾಗಿ ಮಂಡಿಸಿದಾಗ ಉಪಸ್ಥಿತರಿದ್ದ ಸದಸ್ಯರು ಚಪ್ಪಾಳೆ ಮೂಲಕ ಅನುಮೋದನೆ ನೀಡಿದರು.

ಸಹಕಾರಿಯ ಹಿರಿಯ ಸದಸ್ಯರುಗಳಿಗೆ, ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ನಗದು, ಪ್ರಶಸ್ತಿ ಪತ್ರ ಸೇರಿದಂತೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

ಹಿಂದಿನ ಸಾಲಿನ ಮಹಾಸಭೆಯ ನಡವಳಿಕೆಗಳನ್ನು ಸಹಕಾರಿಯ ಮುಖ್ಯಕಾರ್ಯನಿರ್ವಾಹಕರು ಓದಿದರು, ಸಹಕಾರಿಯ ನಿರ್ದೇಶಕರಾದ ಕೆ.ವಿ.ಮಂಜು ಪ್ರಸಾದ್ ಸ್ವಾಗತಿಸಿದರು.

ಕಳೆದ ಸರ್ವ ಸದಸ್ಯರ ಸಭೆಯ ದಿನಾಂಕದಿಂದ ಇಲ್ಲಿಯವರೆಗೂ ದೈವಾಧೀನರಾದ ಸದಸ್ಯರಿಗೆ ಎರಡು ನಿಮಿಷ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮೃತ ಸದಸ್ಯರ ಹೆಸರುಗಳನ್ನು ನಿರ್ದೇಶಕಿ ಕೆ. ದೀಪ ವಾಚಿಸಿದರು. ಸಹಕಾರಿಯ ನಿರ್ದೇಶಕರಾದ ಎಲ್.ಎನ್.ರಾಜ್ ಕುಮಾರ್ ರವರು 2022-23ನೇ ಮಹಾಸಭೆಯ ನೋಟೀಸನ್ನು ವಾಚಿಸಿದರು ಮುಖ್ಯಕಾರ್ಯನಿರ್ವಾಹಕರು ಕಾರ್ಯಕ್ರಮ ನಿರೂಪಿಸಿದರು. ಸರ್ವ ಸದಸ್ಯರ ಸಭೆ ಯಶಸ್ವಿಗೆ ಶ್ರಮಿಸಿದ ಸಹಕಾರಿಯ ಎಲ್ಲಾ ಸಿಬ್ಬಂದಿ ವರ್ಗ ಸದಸ್ಯರ ಮೆಚ್ಚುಗೆಗೆ ಪಾತ್ರರಾದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...