ಕೋಡಿಮಠದ ಶ್ರೀಗಳು ನುಡಿಯುವ ಭವಿಷ್ಯದಲ್ಲಿ ಬಹಿತೇಕ ಭವಿಷ್ಯ ಸತ್ಯವಾಗಿದೆ. ಹೀಗಾಗಿ ಅವರು ಹೇಳುವ ಭವಿಷ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇದೀಗ ಮತ್ತೆ ಜಗತ್ತಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ. ದೇಶದಲ್ಲಿ ಇನ್ನಷ್ಟು ರೋಗ ರುಜಿನಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ದೇಶದ ಹಲವೆಡೆ ಪ್ರಾಕೃತಿಕ ವಿಕೋಪಗಳು ಸಂಭವಿಸಲಿವೆ. ಜೊತೆಗೆ ಮನುಷ್ಯರು ಮೃಗದಂತೆ ವರ್ತಿಸಿ, ವಿಕೋಪ ಸಂಭವಿಸಬಹುದು. ಸದ್ಯ ರಾಜ್ಯ ಸರ್ಕಾರಕ್ಕೆ ಯಾವುದೇ ಆತಂಕವಿಲ್ಲ. ಮಗು ಇನ್ನು ಈಗ ತಾನೇ ಹಾಲು ಕುಡಿಯಲು ಆರಂಭಿಸಿದೆ. ಮಗು ಚೆನ್ನಾಗಿ ಬೆಳೆಯಲಿ. ಯಾವುದೇ ಆತಂಕವಿಲ್ಲ ಎಂದಿದ್ದಾರೆ.
ಇನ್ನೂ ಜೈನ ಮುನಿಗಳ ಹತ್ಯೆ ನಡೆಯಬಾರದಿತ್ತು. ಆದರೆ ನಡೆದು ಹೋಯಿತು. ಮುಂದೆ ಆಗದಂತೆ ಎಚ್ಚರ ವಹಿಸಬೇಕು ಎಂದು ಎಚ್ಚರಿಕೆಯ ಮಾತುಗಳನ್ನಾಡಿದರು. ಈ ಘಟನೆಯಿಂದ ಸರ್ವಸಂಗ ಪರಿತ್ಯಾಗಿಗಳಿಗೂ ಕಂಟಕ ಇದೆಯೆಂದು ತಿಳಿದಿದೆ. ಅಂಥವರಿಗೇ ಕಂಟಕ ಇದ್ದರೆ ಯಾರನ್ನೂ ತಾನೇ ಬಿಡಬಹುದು? ಮನುಷ್ಯನ ಕ್ರೌರ್ಯಕ್ಕೆ ಜೈನಮುನಿಗಳ ಕೊಲೆಯೊದು ಉದಾಹರಣೆ ಎಂದು ತಿಳಿಸಿದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












