Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗದ ಎಸ್‍ಆರ್ ಎಸ್ ಹೆರಿಟೇಜ್‌ ಶಾಲೆಯಲ್ಲಿ ಸಂಭ್ರಮದಿಂದ ನೆರವೇರಿದ ಗುರುಪೂರ್ಣಿಮಾ ಕಾರ್ಯಕ್ರಮ

---Advertisement---

ಸುದ್ದಿಒನ್, ಚಿತ್ರದುರ್ಗ,(ಜು.03) :  ನಗರದ ಎಸ್‍ಆರ್ ಎಸ್ ಹೆರಿಟೇಜ್ ಶಾಲೆಯ “ಅನಂತಕೃಷ್ಣ ಬೃಹತ್ ಸಭಾಂಗಣದಲ್ಲಿ” ಗುರುಪೂರ್ಣಿಮಾ  ಕಾರ್ಯಕ್ರಮ ನಡೆಯಿತು.

“ಎಸ್‍ಆರ್‍ಎಸ್ ಶಿಕ್ಷಣ ಸಮೂಹ ಸಂಸ್ಥೆಯ”ಕಾರ್ಯದರ್ಶಿ ಶ್ರೀಮತಿ ಸುಜಾತ ಲಿಂಗಾರೆಡ್ಡಿಯವರು ಹಾಗೂ “ಎಸ್‍ಆರ್‍ಎಸ್ ಶಿಕ್ಷಣ ಸಮೂಹ ಸಂಸ್ಥೆಯ” ಮಾರ್ಗದರ್ಶಕರಾದ ಶ್ರೀಮತಿ ಲಿಖಿತ ಅಮೋಘ್‍ರವರು ಗಣಪತಿ ಮತ್ತು ಶಾರದ ಪೂಜೆಯನ್ನು ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಎಸ್‍ಆರ್‍ಎಸ್ ಶಿಕ್ಷಣ ಸಮೂಹ ಸಂಸ್ಥೆಯ” ಮಾರ್ಗದರ್ಶಕರಾದ ಶ್ರೀಮತಿ ಲಿಖಿತ ಅಮೋಘ್‍ರವರು ಮಾತನಾಡಿ ಮನುಷ್ಯನ ಜೀವನದಲ್ಲಿ ಗುರುವು ಮಹತ್ವದ ಪಾತ್ರ ವಹಿಸುತ್ತಾರೆ. ಹಿಂದೂ ಧರ್ಮದಲ್ಲಿ ಗುರುಪೂರ್ಣಿಮೆಗೆ ಬಹಳ ಪ್ರಾಮುಖ್ಯತೆ ಇದೆ. ಆಷಾಢ ಮಾಸದ ಹುಣ್ಣಿಮೆಯಂದು ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಗುರುವನ್ನು ದೇವರಂತೆ ಪೂಜಿಸುವ ಸಂಸ್ಕøತಿ ನಮ್ಮ ದೇಶದಲ್ಲಿದೆ ಹಾಗಾಗಿ ಗುರುಪೂರ್ಣಿಮೆ ಬಹಳ ಮಹತ್ವದ ದಿನವಾಗಿದೆ ಎಂದು ಗುರುವಿನ ಮಹತ್ವ ತಿಳಿಸಿದರು.

ಎಸ್‍ಆರ್‍ಎಸ್ ಶಿಕ್ಷಣ ಸಮೂಹ ಸಂಸ್ಥೆಯ” ಉಪಾಧ್ಯಕ್ಷ ಅಮೋಘ್ ಬಿ ಎಲ್ ಕಾರ್ಯಕ್ರವನ್ನು ಕುರಿತು ಪ್ರಶಂಶಿಸಿದ್ದಾರೆ.

ಶಾಲೆಯ ಪ್ರಾಂಶುಪಾಲ ಪ್ರಭಾಕರ್ ಎಂ.ಎಸ್ ಕಾರ್ಯಕ್ರಮ ಕುರಿತು ಮಾತನಾಡಿ ಓಂ ಶ್ರೀ ಗುರುಭ್ಯೋ ನಮಃ, ಗುರುಬ್ರಹ್ಮ ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮೈ ಶ್ರೀ ಗುರುವೇ ನಮಃ ಸರ್ವರಿಗೂ ಗುರುಪೂರ್ಣಿಮೆಯ ಶುಭಾಷಯಗಳನ್ನು ಹೇಳುತ್ತಾ ಈ ದಿನ ಗುರು ಸೂತ್ರದ ಪ್ರಭಾವ ಇತರ ದಿನಗಳಿಗಿಂತ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ ಎನ್ನುವ ನಂಬಿಕೆ ಇದೆ. ಗುರು ಅಂದರೆ ಅಜ್ಞಾನ ದೂರ ಮಾಡುವವರು ಎಂದರ್ಥ.

ಬಹುತೇಕ ಜನರು ಗುರುವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸುತ್ತಾರೆ. ಈ ದಿನ ಹಲವರು ತಮ್ಮ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ದಿನವಾಗಿದೆ. ಗುರು ಪೂರ್ಣಿಮೆಗೆ ಧಾರ್ಮಿಕ ಪ್ರಾಮುಖ್ಯತೆ ಅಲ್ಲದೆ ಶೈಕ್ಷಣಿಕ ಮತ್ತು ವಿದ್ವಾಂಸರ ವೃಂದದಲ್ಲೂ ಮಹತ್ವ ಇದೆ ಎಂದು ನೆರೆದ ವಿದ್ಯಾರ್ಥಿಗಳಿಗೆ ತಿಳಿಸಿದರು.

ಪ್ರತಿ ವರ್ಷ ಆಷಾಡ ಮಾಸದ ಶುಕ್ಲಪಕ್ಷದ ಹುಣ್ಣಿಮೆಯ ದಿನ ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಈ  ಕಾರ್ಯಕ್ರಮದಲ್ಲಿ ಶಾಲೆಯ 3 ರಿಂದ 6ನೆ ತರಗತಿಯ ಸರಿಸುಮಾರು 1000 ಕ್ಕೂ ಹೆಚ್ಚು ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸರಿಸುಮಾರು 1000 ಕ್ಕೂ ಹೆಚ್ಚು ಮಕ್ಕಳು ಉತ್ಸಾಹಭರಿತವಾಗಿ ತಮ್ಮ ಪೋಷಕರ ಪಾದಪೂಜೆ ಮಾಡುವ ಮೂಲಕ ಅವರ ಆಶೀರ್ವಾದಕ್ಕೆ ಪಾತ್ರರಾದರು. ಹಾಗೂ ಮಕ್ಕಳು ತಮ್ಮ ಗುರುಗಳ ಆಶೀರ್ವಾದವನ್ನು  ಪಡೆದರು. ಗುರುಗಳ ಸ್ಥಾನವು ದೇವರಿಗೆ ಸಮಾನ ಎಂದು ಹೇಳಲಾಗುತ್ತದೆ. ಜೀವನದ ನಿಜವಾದ ಮಾರ್ಗತೋರಿಸಲು ಗುರುಗಳು ಸಹಾಯ ಮಾಡುತ್ತಾರೆ. ಈ ದಿನ ಜನಿಸಿದ ವೇದವ್ಯಾಸರು ವೇದಗಳನ್ನು ರಚಿಸಿದ ಪವಿತ್ರ ದಿನ ಈ ಮೂಲಕ  ಜಗತ್ತಿಗೆ ಜ್ಞಾನವನ್ನು ಹರಡಿದರು.

ಈ ಕಾರ್ಯಕ್ರಮ ಆಚರಣೆಯ ಮೂಲಕ ಭಾರತೀಯ ಸಂಸ್ಕೃತಿ, ಪರಂಪರೆ, ಸಂಸ್ಕಾರ ಮತ್ತು ಹಿಂದಿನ ಗುರುಕುಲ ಶಿಕ್ಷಣವನ್ನು ಮರುಕಳಿಸುವುದು ಹಾಗೂ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮತ್ತು ಮೌಲ್ಯಗಳನ್ನು ಬೆಳಸುವುದಾಗಿದೆ. ಸಂಸ್ಕೃತ ಶ್ಲೋಕಗಳನ್ನು ಮಕ್ಕಳಿಗೆ ಪರಾಯಣ ಮಾಡಿಸಿದರು.

ಕಾರ್ಯಕ್ರಮದಲ್ಲಿ ಪೋಷಕರು ಭಾಗವಹಿಸಿ ತಮ್ಮ ಮಕ್ಕಳಿಗೆ ಆಶೀರ್ವದಿಸಿದರು. ಈ ದಿನದ ವಿಶೇಷತೆ ಬಗ್ಗೆ ಪೋಷಕರು ತಮ್ಮ ಭಾವನೆಗಳನ್ನು ಹಾಗೂ ಅನುಭವವನ್ನು ಅಭಿಪ್ರಾಯಗಳೊಂದಿಗೆ  ಹಂಚಿಕೊಂಡರು.

ಶೈಕಣಿಕ ಸಂಯೋಜಕಿ ಶ್ರೀಮತಿ ರೋಹಿನ ಟಿ. ಮತ್ತು ಜಗದೀಶ್, ಸಿಸಿಎ ಸಂಯೋಜಕರಾದ ಸುನೀಲ್ ಭಟ್, ಲುಬ್ನಾ ಕೌಸರ್ ಸಂಸ್ಕøತ ಗುರುವೃಂದ, ಬೋಧಕ ವರ್ಗ ಹಾಗೂ ಬೋಧಕೇತರ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...