ಸುದ್ದಿಒನ್, ಚಳ್ಳಕೆರೆ, ಅಕ್ಟೋಬರ್. 30 : ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಗುರುವಾರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ 5 ನೆಯ ವರ್ಷದ ಪುಣ್ಯಸ್ಮರಣೆ ಇವರ ಅಭಿಮಾನಿಗಳಿಂದ ಅಂತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಂತರ ಯುವಕರು, ಮಕ್ಕಳು,ಮುಖಂಡರು ಹಾಗೂ ಗ್ರಾಮಸ್ಥರು ಸೇರಿ ಶ್ರೀ ದುರ್ಗಾಂಬಿಕ ದೇವಸ್ಥಾನದ ಬಳಿ ಪುನೀತ್ ರಾಜ್ ಕುಮಾರ್ ರವರ ಭಾವಚಿತ್ರಕ್ಕೆ ಮೇಣದ ಬತ್ತಿ ಹಚ್ಚಿ ಭಕ್ತಿಯಿಂದ ಪೂಜೆ ಸಲ್ಲಿಸಿದರು ಮತ್ತು ಎಲ್ಲರೂ ಪುಷ್ಪಾರ್ಚನೆ ಮಾಡಿ ಎಲ್ಲರೂ ಭಾವಪೂರ್ಣ ನಮನ ಸಲ್ಲಿಸಲಾಯಿತು.
ನೆಚ್ಚಿನ ನಟನ ಸಾಧನೆಗಳನ್ನು ಹಾಗೂ ಜನಪರ ಕಾರ್ಯಗಳನ್ನು ನೆನೆದು ಭಾವುಕರಾದರು ಇಷ್ಟು ಬೇಗ ನಮ್ಮ ಅಪ್ಪುವನ್ನು ಕಳೆದುಕೊಂಡು 5 ವರ್ಷವಾಯಿತು ಎಂದು ಭಾವುಕರಾದರು..
ಈ ವೇಳೆ ಗ್ರಾಮದ ಜನರಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗದ ವತಿಯಿಂದ ಅನ್ನಸಂತರ್ಪಣೆ ಮಾಡುವ ಮೂಲಕ ಅಪ್ಪುವಿನ ಸನ್ಮಾರ್ಗದಲ್ಲಿ ಎಲ್ಲರೂ ನಡೆಯೋಣ ಎನ್ನುವ ಸಂದೇಶದೊಂದಿಗೆ ಈ ಕಾರ್ಯಕ್ರಮಕ್ಕೆ ಯುವಕರು,ಮಕ್ಕಳು, ಮುಖಂಡರು ,ಮಹಿಳೆಯರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.











