ಸುದ್ದಿಒನ್, ಹೊಳಲ್ಕೆರೆ, ಅಕ್ಟೋಬರ್. 30 : ತಾಲ್ಲೂಕಿನ ಅರೆನಹಳ್ಳಿ ಗ್ರಾಮದಲ್ಲಿ ಆಸ್ತಿ ವಿಚಾರಕ್ಕೆ ನಡೆದಿದ್ದ ಗಲಾಟೆಗೆ ಸಂಬಂಧಿಸಿದಂತೆ ಪ್ರಕರಣದ ಆರೋಪಿಗಳಿಗೆ ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ ಒಂದು ಸಾವಿರ ದಂಡ ವಿಧಿಸಿ
ಹೊಳಲ್ಕೆರೆ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ತಾಲ್ಲೂಕಿನ ಅರೆನಹಳ್ಳಿ ಗ್ರಾಮದ ನಾಗೇಂದ್ರಪ್ಪ ಮತ್ತು ಅನುಸೂಯಮ್ಮ ನವರ ಮನೆಯ ಮುಂಭಾಗದಲ್ಲಿರುವ ಆಸ್ತಿಯ ವಿಚಾರವಾಗಿ ಗಿರೀಶ್ ಮತ್ತು ಸವಿತ ಇವರು ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹೊಡೆದು ಜಗಳ ಮಾಡಿದ ಆರೋಪದ ಮೇಲೆ 02.06.2026 ರಂದು ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಪ್ರಕರಣದ ತನಿಖೆಯನ್ನು ಪೂರೈಸಿ ಹೆಡ್ ಕಾನ್ಸ್ ಸ್ಟೇಬಲ್ ಪ್ರದೀಪ್ ಹೊಳಲ್ಕೆರೆ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಈ ಕುರಿತು ಹೊಳಲ್ಕೆರೆ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಆರೋಪಿಗಳಾದ ಗಿರೀಶ್ ಮತ್ತು ಸವಿತ ಇವರ ಮೇಲೆ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ದಿನಾಂಕ:29.10.2026 ರಂದು ನ್ಯಾಧೀಶರಾದ ಅರ್ಶದ ಅನ್ಸಾರಿ ರವರು ಅಂತಿಮ ತೀರ್ಪನ್ನು ನೀಡಿ ಆರೋಪಿತರಿಗೆ ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ ಒಂದು ಸಾವಿರ ದಂಡ ವಿಧಿಸಿ ಆದೇಶಿಸಿರುತ್ತಾರೆ. ಈ ವಿಚಾರವಾಗಿ
ಸರ್ಕಾರಿ ಅಭೀಯೊಜಕರಾದ ಶ್ರೀಮತಿ ಮಂಜುಳ ರವರು ಸರ್ಕಾರದ ಪರವಾಗಿ ವಾದ ಮಂಡಿಸಿರುತ್ತಾರೆ.
ಪ್ರಕರಣವನ್ನು ಉತ್ತಮ ರೀತಿಯಲ್ಲಿ ತನಿಖೆ ಕೈಗೊಂಡು ಆರೋಪಿತರಿಗೆ ಶಿಕ್ಷೆ ಆಗುವಂತೆ ಕಾರ್ಯನಿರ್ವಹಿಸಿದ ಚಿಕ್ಕಜಾಜೂರು ಪೊಲೀಸ್ ಠಾಣೆಯ ತನಿಖಾಧಿಕಾರಿಯಾದ ಪ್ರದೀಪ್, ತನಿಖಾ ಸಹಾಯಕರು ಕೋರ್ಟ್ ಪೊಲೀಸ್ ಹಾಗೂ ಕೋರ್ಟ್ ಮಾನಿಟರಿಂಗ್ ಸೇಲ್ ವಿಭಾಗದವರು ಕಾರ್ಯವನ್ನು ಪೊಲೀಸ್ ಅಧೀಕ್ಷಕರಾದ ಕುಶಲ್ ಚೌಕ್ಸೆ ರವರು ಪ್ರಶಂಶಿಸಿರುತ್ತಾರೆ.











