ಬೆಂಗಳೂರು: ಮಾಹಿತಿ ಹಕ್ಕು (ಆರ್ಟಿಐ) ಕಾಯ್ದೆಯನ್ನು ಸಾರ್ವಜನಿಕರು ಸುಲಭವಾಗಿ ಬಳಸಲು ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯಿರಿಸಿದೆ. ಅಂಚೆ ಮೂಲಕ ಅಥವಾ ಖುದ್ದಾಗಿ ಕಚೇರಿಗಳಿಗೆ ಸಲ್ಲಿಸುವ ಭೌತಿಕ ಆರ್ಟಿಐ ಅರ್ಜಿಗಳಿಗೂ ಆನ್ಲೈನ್ ನೋಂದಣಿ ಕಡ್ಡಾಯಗೊಳಿಸಲಾಗಿದ್ದು, ಅವುಗಳನ್ನು ‘ಸಕಾಲ’ ಸೇವೆಯ ವ್ಯಾಪ್ತಿಗೆ ತರಲಾಗಿದೆ.
2 ದಿನಗಳಲ್ಲಿ ಆನ್ಲೈನ್ ದಾಖಲಾತಿ: ನಾಗರಿಕರು ಅಂಚೆ ಮೂಲಕ ಅಥವಾ ಖುದ್ದಾಗಿ ಸಲ್ಲಿಸುವ ಭೌತಿಕ ಅರ್ಜಿಗಳನ್ನು ಸಂಬಂಧಪಟ್ಟ ಸಾರ್ವಜನಿಕ ಪ್ರಾಧಿಕಾರವು ಸ್ವೀಕರಿಸಿದ 2 ದಿನಗಳ ಒಳಗೆ ಆರ್ಟಿಐ ಆನ್ಲೈನ್ ಪೋರ್ಟಲ್ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು.
ಸಕಾಲ ಸೇವೆಗೆ ಒಳಪಟ್ಟಿರುವುದು: ಭೌತಿಕವಾಗಿ ಸಲ್ಲಿಕೆಯಾಗುವ ಅರ್ಜಿಗಳೂ ಇನ್ಮುಂದೆ ಕಾಲಮಿತಿಯ ‘ಸಕಾಲ’ ಸೇವೆಗಳ ವ್ಯಾಪ್ತಿಯಲ್ಲಿ ಇರಲಿವೆ.
ಆರ್ಟಿಐ ಸೇವೆಗಳಲ್ಲಿ ಮತ್ತಷ್ಟು ಪಾರದರ್ಶಕತೆ
ಅಂಚೆ ಮೂಲಕ ಅಥವಾ ಖುದ್ದಾಗಿ ಸಲ್ಲಿಸುವ ಭೌತಿಕ ಆರ್ಟಿಐ ಅರ್ಜಿಗಳಿಗೂ ಆನ್ಲೈನ್ ನೋಂದಣಿ ಕಡ್ಡಾಯಗೊಳಿಸಿ, ಅವುಗಳನ್ನು ಸಕಾಲ ಸೇವೆಯ ವ್ಯಾಪ್ತಿಗೆ ತರಲಾಗಿದೆ.
ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲೂ ಆರ್ಟಿಐ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸೇವೆಯಲ್ಲಿ… pic.twitter.com/P4iRAnq0UN
— DIPR Karnataka (@KarnatakaVarthe) October 26, 2026
ಗ್ರಾಮ ಒನ್, ಬೆಂಗಳೂರು ಒನ್ನಲ್ಲೂ ಅರ್ಜಿ ಸಲ್ಲಿಕೆ: ನಾಗರಿಕರ ಅನುಕೂಲಕ್ಕಾಗಿ ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲೂ ಆರ್ಟಿಐ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅಧಿಕಾರಿಗಳಿಂದಲೇ ₹1,500 ಪರಿಹಾರ: ಸೇವೆಯಲ್ಲಿ ಯಾವುದೇ ರೀತಿಯ ಲೋಪದೋಷಗಳು ಕಂಡುಬಂದರೆ ಅಥವಾ ಸೂಕ್ತ ಸಕಾರಣವಿಲ್ಲದೆ ಅರ್ಜಿಯನ್ನು ತಿರಸ್ಕರಿಸಿದರೆ ಸಂಬಂಧಪಟ್ಟ
ಈ ಹೊಸ ವ್ಯವಸ್ಥೆಯು ಅರ್ಜಿಗಳ ವಿಲೇವಾರಿಯಲ್ಲಿನ ವಿಳಂಬವನ್ನು ತಪ್ಪಿಸಿ, ಆಡಳಿತದಲ್ಲಿ ಉತ್ತರದಾಯಿತ್ವ ಹಾಗೂ ಜನಸ್ನೇಹಿ ವ್ಯವಸ್ಥೆಯನ್ನು ರೂಪಿಸಲು ಸಹಕಾರಿಯಾಗಲಿದೆ.












