Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗಕ್ಕೆ ಹರಿದುಬಂದ ಭದ್ರಾ ನೀರು: ಸೆಪ್ಟೆಂಬರ್ 10ರಂದು ಜಿಲ್ಲಾ ನೀರಾವರಿ ಹೋರಾಟ ಸಮಿತಿಯಿಂದ ಸಂಭ್ರಮೋತ್ಸವ

---Advertisement---

 

ಸುದ್ದಿಒನ್, ಚಿತ್ರದುರ್ಗ, ಸೆ. 06: ಭದ್ರಾ ನೀರು ಪ್ರಾಯೋಗಿಕ ಪರೀಕ್ಷೆ ಮೂಲಕ ಚಿತ್ರದುರ್ಗ ಶಾಖಾ ಕಾಲುವೆಗೆ ಹರಿಸುವ ಸರ್ಕಾರದ ನಿರ್ಧಾರ ಸ್ವಾಗತರ್ಹವಾಗಿದ್ದು, ಈ ಕ್ಷಣವನ್ನು
ಸಂಭ್ರಮಿಸಲು ಐಮಂಗಲ ಸಮೀಪದ ಭರಂಪುರದ ಬಳಿ ಸೆ.10ರಂದು ಸಮಾರಂಭ ಹಮ್ಮಿಕೊಳ್ಳಲಾಗುವುದು
ಎಂದು ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ತಿಳಿಸಿದೆ.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿ ಮುಖಂಡರು, ರೈತರು, ಕಾರ್ಮಿಕ ಸಂಘಟನೆ ಪದಾಧಿಕಾರಿಗಳು, ವಿವಿ ಸಾಗರದ ಜಲಾಶಯದ ಫೋಟೋ ಸ್ವೀಕರಿಸಿದ ಬಳಿಕ ಮಾತನಾಡಿದರು.

ಚಿಂತಕ ಜೆ.ಯಾದವರೆಡ್ಡಿ ಮಾತನಾಡಿ, ಭದ್ರಾ ಯೋಜನೆ ಸಾಧ್ಯವೇ ಇಲ್ಲವೆಂಬ ಸ್ಥಿತಿಯಲ್ಲಿ ನೀರು ಹರಿದುಬರುತ್ತಿರುವುದು ನಮ್ಮಲ್ಲಿ ಸಂಭ್ರಮವನ್ನುAಟು ಮಾಡಿದೆ. ಸಂಭ್ರಮೋತ್ಸವದ ಜೊತೆಗೆ ನಾವೆಲ್ಲರೂ ಮತ್ತೊಂದು ಹೋರಾಟಕ್ಕೆ ಸಜ್ಜಾಗಬೇಕಾಗಿದೆ ಎಂದರು.
ರಾಷ್ಟಿçÃಯ ಯೋಜನೆ ಘೋಷಣೆ, 6,200 ಕೋಟಿ ರೂ. ಬಿಡುಗಡೆಗೆ ಕೇಂದ್ರದ ಮೇಲೆ ಒತ್ತಡ ತರಬೇಕಿದೆ. ಜೊತೆಗೆ ಜಿಲ್ಲೆಯ ಯಾವುದೇ ಕೆರೆ-ಕಟ್ಟೆಗಳು ಯೋಜನೆ ವ್ಯಾಪ್ತಿಯಿಂದ
ಕೈಬಿಟ್ಟು ಹೋಗದಂತೆ ರಾಜ್ಯ ಸರ್ಕಾರ ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಎರಡನೇ ಹಂತದ ಹೋರಾಟಕ್ಕೆ ಸಜ್ಜಾಗಬೇಕಾಗಿದೆ ಎಂದು ತಿಳಿಸಿದರು.

ಚಳವಳಿ ಹಾದಿಯಲ್ಲಿ ನಿಸ್ವಾರ್ಥವಾಗಿ ಹೆಜ್ಜೆ ಹಾಕಿದ ಪಿ.ಕೋದಂಡರಾಮಯ್ಯ, ಎಂ.ಜಯಣ್ಣ,
ಮುರುಘ ರಾಜೇಂದ್ರ ಒಡೆಯರ್, ಎಚ್.ಹನುಮಂತಪ್ಪ, ಸೋಮುಗುದ್ದು ರಂಗಸ್ವಾಮಿ, ಬಂಜಗೆರೆ
ಜಯಪ್ರಕಾಶ್ ಹೀಗೆ ಸಾವಿರಾರು ಮಂದಿಯ ಸ್ಮರಣೆ ಅಗತ್ಯ ಎಂದರು.

ರೈತಸಂಘ ರಾಜ್ಯಾ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ ಮಾತನಾಡಿ, ನೀರು ಬರುತ್ತಿರುವ ದೃಶ್ಯ ಕಣ್ತುಂಬಿಕೊಳ್ಳುವ ಭಾಗ್ಯ ದೊರೆಯುತ್ತಿರುವುದು ಸಂತಸ ತಂದಿದೆ. ಭದ್ರೆಯನ್ನು
ಸ್ವಾಗತಿಸುವ ಜೊತೆಗೆ ನೀರಾವರಿ ವಿಷಯದಲ್ಲಿ ಸರ್ಕಾರದ ತಾರತಮ್ಯ ನೀತಿ ಖಂಡಿಸಬೇಕಿದೆ ಎಂದು ಹೇಳಿದರು.
ನಾಲೆ ಮೂಲಕ ಜಮೀನುಗಳಿಗೆ ನೀರು ಹರಿಸುತ್ತಿಲ್ಲ. ಆದ್ದರಿಂದ ಎತ್ತರದ ಪ್ರದೇಶದ ಜಮೀನುಗಳಿಗೂ ಡ್ರಿಪ್ ಮೂಲಕ ನೀರಾವರಿ ಸೌಲಭ್ಯ ಕೊಡಬಹುದು. ಈ ವಿಷಯದಲ್ಲಿ ನೀತಿ ಬದಲಾಯಿಸಿಕೊಳ್ಳಬೇಕು. ಸಮಗ್ರ ನೀರಾವರಿ ಯೋಜನೆಗೆ ಆದ್ಯತೆ ನೀಡಬೇಕು ಎಂದು
ಆಗ್ರಹಿಸಿದರು.

ಕಾರ್ಮಿಕ ಮುಖಂಡ ಜಿ.ಸಿ.ಸುರೇಶಬಾಬು ಮಾತನಾಡಿ, ಯಾವುದೇ ಸಣ್ಣ ಕೆರೆಯೂ ಯೋಜನೆಯಿಂದ
ಕೈಬಿಟ್ಟು ಹೋಗಬಾರದು. ಜೊತೆಗೆ ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಎಥೆನಾಲ್ ಬಳಕೆ ಹೆಚ್ಚಾಗಲಿದ್ದು, ಬಂಗಾರದ ನಾಡು ಆಗಲಿದೆ. ಆದ್ದರಿಂದ ಯಾರೊಬ್ಬರೂ ಭೂಮಿ ಮಾರಾಟ ಮಾಡಬಾರದೆಂದು ತಿಳಿಸಿದರು.

ಭೂಮಿ ಮಾರಾಟ ಮಾಡದಿರಿ :
ಜಿಲ್ಲೆಯ ರೈತರು ನೀರಿನ ಸಂಕಷ್ಟಕ್ಕೆ ಸಿಲುಕಿ ಸೋಲಾರ್ ಇತರೆ ಚಟುವಟಿಕೆಗಳಿಗೆ ಭೂಮಿ ಮಾರಾಟ ಮಾಡಲು ಮುಂದಾಗಬಾರದೆAದು ಹೋರಾಟ ಸಮಿತಿಯ ಮುಖಂಡ ಬೇಡರರೆಡ್ಡಿಹಳ್ಳಿ ಬಸವರೆಡ್ಡಿ ತಿಳಿಸಿದರು. ಈಗಾಗಲೇ ಭದ್ರಾ ನೀರು ಜಿಲ್ಲೆಗೆ ಪ್ರವೇಶಿಸಿದ್ದು, ಯೋಜನೆಯಂತೆ ಅನೇಕ ಹಳ್ಳಿಗಳಿಗೆ ನೀರು ಬರಲಿದೆ. ಬಳಿಕ ಕೃಷಿ ಚಟುವಟಿಕೆಗೆ ಜೀವ ಬರಲಿದೆ ಎಂದರು. ಜನರೇ ಅಧ್ಯಯನ ನಡೆಸಿ, ನೀರಿನ ಲಭ್ಯತೆ ಮಾಹಿತಿಯನ್ನು ಸರ್ಕಾರದ ಮುಂದಿಟ್ಟು
ಹೋರಾಟದೊಂದಿಗೆ ಯೋಜನೆ ಜಾರಿಗೆ ಶ್ರಮಿಸಿದ ರೀತಿ ನಾಡಿನಲ್ಲಿಯೇ ಅಪರೂಪ ಎಂದು ಬಣ್ಣಿಸಿದರು.

ಕಾಮಗಾರಿಕ್ಕೆ ಬೇಕು ವೇಗ :
ವಾಸ್ತವವಾಗಿ ನಮಗೆ 53 ಟಿಎಂಸಿ ಅಡಿ ನೀರು ದೊರೆಯಬೇಕಾಗಿತ್ತು. ಅದರೆ, ಎ ಮತ್ತು ಬಿ
ಸ್ಕೀಂ ಒಗ್ಗೂಡಿಸಿ 29.5 ನೀಡಿದ್ದು, ಚಿತ್ರದುರ್ಗ ಜಿಲ್ಲೆಗೆ 21.5 ಟಿಎಂಸಿ ಅಡಿ ನೀರು ನಿಗದಿ ಆಗಿದೆ. ಈಗ 3 ಟಿಎಂಸಿ ಅಡಿ ನೀರು ಪ್ರಾಯೋಗಿಕವಾಗಿ ಹರಿಸಲಾಗುತ್ತಿದೆ
ಎಂದು ಸಂಚಾಲಕ ಚಳ್ಳಕೆರೆ ಬಸವರಾಜ್ ಹೇಳಿದರು.

ಪ್ರತಿವರ್ಷ ಪೂರ್ಣ ಪ್ರಮಾಣದ ನೀರು ಹರಿಸುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಕಾಮಗಾರಿ ವೇಗ ಪಡೆದುಕೊಳ್ಳಬೇಕು, ಹೇರಳವಾಗಿ ಅನುದಾನ ನೀಡಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಇಚ್ಛಾಶಕ್ತಿ
ಪ್ರದರ್ಶಿಸಬೇಕಿದೆ. ಅವರ ಮೇಲೆ ಒತ್ತಡ ತರುವ ಕೆಲಸ ಹೋರಾಟ ಸಮಿತಿ ನೇತೃತ್ವದಲ್ಲಿ ಎಲ್ಲರೂ ಮಾಡಬೇಕಿದೆ ಎಂದರು.

10ರಂದು ಸಂಭ್ರಮೋತ್ಸವ :
ಭದ್ರಾ ನೀರು ಐಮಂಗಲ ಸಮೀಪದ ಭರಮಪುರ ಕೆರೆಗೆ ಸೆ.10 ಗುರುವಾರ ಬರಲಿದೆ ಎಂಬ ಮಾಹಿತಿಯಿದ್ದು, ಅಂದು ಅಲ್ಲಿನ ಹೋರಾಟ ಸಮಿತಿ ಮುಖಂಡರು, ರೈತರು, ಸ್ಥಳೀಯರು ಸಂಭ್ರಮೋತ್ಸವವನ್ನು ಪಿ.ಕೋದಂಡರಾಮಯ್ಯ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದಾರೆ. ಕಾರ್ಯಕ್ರಮ ನಿಗದಿ ಖಚಿತಗೊಳ್ಳುತ್ತಿದ್ದಂತೆ ಜಿಲ್ಲೆಯ ಎಲ್ಲ ಜನರು,
ಜನಪ್ರತಿನಿಧಿಗಳು, ಮಠಾಧೀಶರು, ಸಂಘಟನೆಗಳ ಪದಾಧಿಕಾರಿಗಳನ್ನು ಆಹ್ವಾನಿಸಲಾಗುವುದು
ಎಂದು ಸಂಚಾಲಕ ನರೇನಹಳ್ಳಿ ಅರುಣ್‌ಕುಮಾರ್ ತಿಳಿಸಿದರು.

ಡಿ.ಸಿ.ನಾಗರಾಜ್, ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ದಸಂಸ ರಾಜ್ಯ ನಾಯಕ ಡಿ.ದುರುಗೇಶಪ್ಪ ಮಾತನಾಡಿ, ಹೊಳಲ್ಕೆರೆ-ಮೊಳಕಾಲ್ಮೂರು ತಾಲ್ಲೂಕುಗಳಿಗೆ ಆಗುತ್ತಿರುವ
ಅನ್ಯಾಯ ಸರಿಪಡಿಸುವ ಕೆಲಸ ಆಗಬೇಕೆಂದು ಒತ್ತಾಯಿಸಿದರು. ಸಂಚಾಲಕ ಜೋಗಿಮಟ್ಟಿ ಈ.ಮಹೇಶಬಾಬು, ಮುಖಂಡರಾದ ರ‍್ಲಹಳ್ಳಿ ರವಿಕುಮಾರ್, ಪುರುಷೋತ್ತಮ್ ತೋರಣಗಟ್ಟೆ, ರಾಜು ಕೆಳಗೋಟೆ, ಕುಂಚಿಗನಾಳ್ ಮಹಾಲಿಂಗಪ್ಪ, ಟಿ.ಮಂಜಣ್ಣ,
ಪಿ.ಆರ್.ತಿಪ್ಪೇಸ್ವಾಮಿ, ಕೆ.ರುದ್ರಮುನಿ, ಕಣಿವೆಮಾರಮ್ಮ ತಿಪ್ಪೇಸ್ವಾಮಿ, ಮಾಲತೇಶ್ ಅರಸ್, ಲಕ್ಷ್ಮೀ ಕಾಂತ್, ಬಸವರೆಡ್ಡಿ ಇತರರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಚಿತ್ರದುರ್ಗ ಜಿಲ್ಲೆಯಲ್ಲಿ ಯುವ ಕಾಂಗ್ರೆಸ್‍ನ್ನು ತಳಮಟ್ಟದಿಂದ ಸಂಘಟಿಸುತ್ತೇನೆ : ಎಂ.ನಿಶ್ಚಿತ್

ಜಗಳೂರು, ಮೊಳಕಾಲ್ಮೂರಿಗೆ ಭದ್ರೆ ಹರಿದ ನಂತರವೇ ಸಂಭ್ರಮ ಬಯಲು ಸೀಮೆ ಬಾಗಿನ ಸಮರ್ಪಣೆ ನಂತರ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರತಿಜ್ಞೆ ಸ್ವೀಕಾರ

ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಗೆ ₹22.11 ಲಕ್ಷ ನಿವ್ವಳ ಲಾಭ: ಅಧ್ಯಕ್ಷ ಎಂ. ನಿಶಾನಿ ಜಯಣ್ಣ

ಯುವಪೀಳಿಗೆ ಮೊಬೈಲ್ ದಾಸರಾಗದೆ ಶರಣರ ಕಾಯಕ ಸಿದ್ಧಾಂತ ಮೈಗೂಡಿಸಿಕೊಳ್ಳಲಿ: ಬಸವಲಿಂಗ ಶ್ರೀಗಳ ಕರೆ

ಪೌರಕಾರ್ಮಿಕರಿಗೆ ಸಚಿವ ಕೃಷ್ಣ ಬೈರೇಗೌಡ ಬಹಿರಂಗ ಕ್ಷಮೆಯಾಚಿಸದಿದ್ದರೆ ಕಪ್ಪು ಬಟ್ಟೆ ಪ್ರದರ್ಶನ : ಬಿಜೆಪಿ ಮುಖಂಡ ಜಿ.ಎಚ್. ಮೋಹನ್ ಕುಮಾರ್ ಎಚ್ಚರಿಕೆ

ಚಿತ್ರದುರ್ಗ: ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಯೂತ್ ಕಾಂಗ್ರೆಸ್ ಬಲವರ್ಧನೆ : ಕಾರೆಹಳ್ಳಿ ಉಲ್ಲಾಸ್