Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಗೆ ₹22.11 ಲಕ್ಷ ನಿವ್ವಳ ಲಾಭ: ಅಧ್ಯಕ್ಷ ಎಂ. ನಿಶಾನಿ ಜಯಣ್ಣ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ ಸೆ. 6 : ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯು 2025-26ನೇ ಸಾಲಿಗೆ ರೂ. 22,11,733.79 ನಿವ್ವಳ ಲಾಭಗಳಿಸಿದೆ ಎಂದು ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಲಿ.ನ ಅಧ್ಯಕ್ಷರಾದ ಎಂ. ನಿಶಾನಿ ಜಯಣ್ಣ ತಿಳಿಸಿದರು.

ಚಿತ್ರದುರ್ಗ ಶ್ರೀ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಲಿನ 2025-26 ನೇ ಸಾಲಿನ 109 ನೇ ವರ್ಷದ ವಾರ್ಷಿಕ ಸಾಮಾನ್ಯ ಮಹಾಸಭೆ ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘವು ದಿನಾಂಕ 22-08-1912ರಂದು ನೊಂದಣೆಯಾಗಿದ್ದು ಅಲ್ಲಿಂದ ಇಲ್ಲಿಯವರೆಗೆ ಸೇವೆ ಸಲ್ಲಿಸುತ್ತಾ ಬಂದಿದ್ದು, ಸದಸ್ಯರುಗಳ ಸಹಕಾರ ಮತ್ತು ಸೂಚನೆಗಳ ನೆರವಿ ನಿಂದ ಸಂಘವು ಪ್ರಗತಿದಾಯಕವಾಗಿ ಬೆಳೆದು ಬಂದಿದ್ದು, ಇದರ ಆಡಳಿತ ವ್ಯಾಪ್ತಿಯು ಚಿತ್ರದುರ್ಗ ನಗರಾ ಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಎಲ್ಲ ಪ್ರದೇಶಗಳು ಹಾಗೂ ಚಿತ್ರದುರ್ಗ ತಾಲ್ಲೂಕಿನ ತರಳಬಾಳು ನಗರ, ಎಂ.ಕೆ.ಹಟ್ಟಿ, ಕವಾಡಿಗರಹಟ್ಟಿ, ಮದಕರಿಪುರ, ಮಾಳಪ್ಪನಹಟ್ಟಿ, ಪಿಳ್ಳೇಕೆರೆನಹಳ್ಳಿ, ವಿದ್ಯಾನಗರ ಮತ್ತು ಬಸವೇಶ್ವರ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದರು.

ಸಂಘವು ದಿನಾಂಕ 31-03-2026ರ ಅಂತ್ಯಕ್ಕೆ ಒಟ್ಟು ರೂ. 66,13,000ಗಳ ಪಾವತಿಯಾದ ಷೇರು ಬಂಡವಾಳವಿದ್ದು 2601 ಜನ ಸದಸ್ಯರನ್ನು ಹೊಂದಿರುತ್ತದೆ. ಸಂಘದಲ್ಲಿ 31-03-2026ರ ಅಂತ್ಯಕ್ಕೆ ಆಪದ್ಧನ ನಿಧಿ ರೂ. 25,92,259.ಗಳು ಹಾಗೂ ಇತರೆ ನಿಧಿಗಳ ಬಾಬ್ತು 80,06,119ರೂ.ಆಗಿದೆ. ಕಳೆದ ಸಾಲಿನಲ್ಲಿ ಸಂಘದಲ್ಲಿ ಒಟ್ಟು 5,02,75,406/- ಠೇವಣಿಗಳಿದ್ದು 31-03-2026ರ ಅಂತ್ಯಕ್ಕೆ ರೂ. 5,30,34,408.ಗಳ ಠೇವಣಿ ಹೊಂದಿರುತ್ತದೆ. ಸದರಿ ಸಾಲಿಗೆ ರೂ. 27,59,002ಗಳ ಠೇವಣಿ ಹೆಚ್ಚಿಗೆಯಾಗಿರುತ್ತದೆ. ಹಾಗೂ ಹಿರಿಯ ಸದಸ್ಯರಿಗೆ ಠೇವಣಿ ಮೇಲೆ ಶೇಕಡ 0.50 ರಂತೆ ಹೆಚ್ಚಿನ ಬಡ್ಡಿಯನ್ನು ನೀಡಲಾಗುತ್ತಿದೆ. 31-03-2026ರ ಅಂತ್ಯಕ್ಕೆ ಒಟ್ಟು ರೂ. 23,92,797.ಗಳನ್ನು ವಿವಿಧ ಬ್ಯಾಂಕು ಹಾಗೂ ಸಂಸ್ಥೆಗಳಲ್ಲಿ ತೊಡಗಿಸಲಾಗಿದೆ. ದಿನಾಂಕ 31-03-2025ರ ಅಂತ್ಯಕ್ಕೆ ಸದಸ್ಯರಿಂದ ಬರಬೇಕಾದ ಒಟ್ಟು ಸಾಲದ ಬಾಕಿ ರೂ. 3,07,25,750-ಗಳಿದ್ದು, ದಿನಾಂಕ 31-03-2026ರ ಅಂತ್ಯಕ್ಕೆ ರೂ. 4,19,49,730. ಬರಬೇಕಾಗಿರುತ್ತದೆ. ಸದರಿ ಸಾಲಿಗೆ ರೂ. 1,12,23,980ಗಳ ಸಾಲ ವೃದ್ಧಿಯಾಗಿ ರುತ್ತದೆ. ಈ ಪೈಕಿ ರೂ. 7,45,298.00ಗಳು ಸಾಲ ಶೇಕಡ 1.78 ರಷ್ಟು ಸುಸ್ತಿಯಲ್ಲಿರುತ್ತದೆ ಎಂದು ತಿಳಿಸಿದರು.

2025-26ನೇ ಸಾಲಿಗೆ ನಿವ್ವಳ ಲಾಭ ರೂ. 22,11,733.79 ಗಳಿಸಿರುತ್ತದೆ. ನಿವ್ವಳ ಲಾಭವನ್ನು ಸಹಕಾರಿ ಕಾಯ್ದೆ, ಕಾನೂನು ಹಾಗೂ ಸಂಘದ ಬೈಲಾ ಸಂಖ್ಯೆ 87 ರನ್ವಯ ವಿಲೇವಾರಿ ಮಾಡಲು ಆಡಳಿತ ಮಂಡಳಿಯವರು ಶಿಫಾರಸ್ಸು ಮಾಡಲಾಗಿದೆ. ಕಳೆದ ವಾರ್ಷಿಕ ಮಹಾಸಭೆ ತೀರ್ಮಾನದಂತೆ ಒಂದು ಷೇರಿನ ಬೆಲೆ ರೂ. 5,000.ಗಳಿಗೆ ಹೆಚ್ಚಿಸಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಚಿತ್ರದುರ್ಗ ಉಪ ವಿಭಾಗ, ಚಿತ್ರದುರ್ಗ ಇವರು ಅನುಮತಿ ನೀಡಿರುತ್ತಾರೆ. ಸದಸ್ಯರು ವ್ಯತ್ಯಾಸ ಷೇರು ಹಣ ಜಮಾ ಮಾಡಲು ದಿನಾಂಕ 31-12-2026 ರವರಿಗೆ ಕಾಲಾವಕಾಶ ನೀಡಿದೆ. ನೂತನವಾಗಿ ನಿರ್ಮಾಣ ವಾಗುತ್ತಿರುವ ಹೈಟೆಕ್ ಸಹಕಾರ ಸಮುದಾಯ ಭವನ ಕಾಮಕಾರಿ ಬಗ್ಗೆ ಮಾಹಿತಿ ಹಂಚಿಕೊಂಡು ಈಗಾಗಲೇ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ಯಿಂದ 1ಕೋಟಿ ಸಾಲ ಪಡೆದಿದ್ದು ಇನ್ನು ಹೆಚ್ಚಿನ ಹೈಟೆಕ್ ಸಹಕಾರ ಸಮುದಾಯ ಭವನ ನಿರ್ಮಾಣ ಮಾಡಲು ಹೆಚ್ಚಿಗೆ 2ಕೋಟಿ ಅವಶ್ಯಕತೆ ಇರುವುದರಿಂದ ಸದ್ಯಸರಿಂದ ಅನುಮೋದನೆ ಪಡೆದರು ಸಮುದಾಯ ಭಾವನಕ್ಕೆ ಲಿಫ್ಟ್, ಸೆಂಟ್ರಲ್ ಂಅ, ಹಾಗು ಸಂಘದ ಆದಾಯದ ದೃಷ್ಠಿಯಿಂದ ಸೋಲಾರ್ ಅಳವಡಿಸಿಕೊಳ್ಳುವುದಾಗಿ ಸಭೆಯೆಲ್ಲಿ ಪ್ರಸ್ತಾಪಿಸಿದರು ಇದರ ಜೊತೆಗೆ ಸಂಘದ ಸದ್ಯಸರು ತಮ್ಮ ಷೇರು ಡಿವಿಡೆಂಟ್ ಮೊತ್ತವನ್ನು ಹೈಟೆಕ್ ಸಹಕಾರ ಸಮುದಾಯ ಭವನ ನಿರ್ಮಣದ ಕಾಮಗಾರಿಗೆ ಕೊಡುವುದಾಗಿ ಸಭೆಯೆಲ್ಲಿ ಒಪ್ಪಿದರು, ಅಧ್ಯಕ್ಷರು ಸಂಘದ ಬೆಳವಣಿಗೆ ಮತ್ತು ಅಭಿವೃದ್ದಿಗೆ ಆಡಳಿತ ಮಂಡಳಿ ಸದ್ಯಸರು ಶ್ರಮಿಸುವುದಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಸಂಘವನ್ನು ಇನ್ನು ಹೆಚ್ಚು ಲಾಭದಾಯಕವಾಗಿ ಮುನ್ನೆಡೆಸುವುದೇ ನಮ್ಮ ಮುಖ್ಯ ಗುರಿ. ಸಂಘದ ಎಲ್ಲಾ ಸದಸ್ಯರು ಕನಿಷ್ಠ ವ್ಯವಹಾರ ನಡೆಸಲು ಅಗತ್ಯ ಕ್ರಮ ತೆಗೆದುಕೊಳ್ಳಲು ಸೂಚಿಸಲಾಯಿತು.2025-26ನೇ ಸಾಲಿನಲ್ಲಿ 19 ಸದಸ್ಯರು ಮೃತಪಟ್ಟಿದ್ದು, ಈ ಖಾತೆಯಿಂದ ಒಟ್ಟು ರೂ.57,000.ಗಳನ್ನು ಸದಸ್ಯರ ಕುಟುಂಬ ವರ್ಗದವರಿಗೆ ಪಾವತಿಸ ಲಾಗಿದೆ. ಎಂದು ಸಭೆಗೆ ಮಾಹಿತಿಯನ್ನು ನೀಡಿದರು.

ಇದೆ ಸಂದರ್ಭದಲ್ಲಿ ಸಂಘದ 75 ವರ್ಷ ಮೇಲ್ಪಟ ಹಿರಿಯ ಸದ್ಯಸರುಗಳಿಗೆ, ಸಂಘದ ಸದ್ಯಸರ ಮಕ್ಕಳಿಗೆ ಎಸ್.ಎಸ್.ಎಲ್.ಸಿ.ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿ ಸನ್ಮಾನಿ ಸಲಾಯಿತು

ಈ ಸಂದರ್ಭದಲ್ಲಿ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಲಿನ ಉಪಾಧ್ಯಕ್ಷರಾದ ಶ್ರೀಮತಿ ಎನ್. ಎಂ. ಪುಷ್ಪವಲ್ಲಿ, ನಿರ್ದೇಶಕರುಗಳಾದ ಸಿ,ಹೆಚ್.ಸೂರ್ಯಪ್ರಕಾಶ್, ಬಿ.ವಿ.ಶ್ರೀನಿವಾಸ್ ಮೂರ್ತಿ, ಲಿಯಾಕತ್ ಆಲಿಖಾನ್, ಸಾಧಿಕ್ ಭಾಷಾ, ಜಿ.ಸುರೇಶ್ ಕುಮಾರ್ ಭಾಫ್ನಾ, ಜೆ.ಆರ್,ಹರೀಶ್ ಬಾಬು, ನಿಶಾನಿ ಧಶರತ್, ಓ.ತಿಪ್ಪೇಸ್ವಾಮಿ, ಚಂದ್ರಪ್ಪ, ಶ್ರೀಮತಿ ಎ.ಚಂಪಕ, ಸರ್ಕಾರಿ ನಾಮ ನಿದೇಶಕರಾದ ಪಿ.ಷಬ್ಬೀರ್, ವೃತ್ತಿ ಪರ ನಿರ್ದೇಶಕರಾದ ಕೆ.ದೊರೆಸ್ವಾಮಿ ಹಾಗೂ ಸಿ.ಕೆ.ಸತ್ಯಮೂರ್ತಿ ಅರ್ಥಿಕ ಸಲಹೆಗಾರರಾದ ಮೊಹಮ್ಮದ್ ನಯೀಮ್, ಪ್ರಬಾರೆ ವ್ಯವಸ್ಥಾಪಕರಾದ ಮಂಜುನಾಥ್ ಗೌಡ ಎಂ.ಪ್ರಕಾಶ್ ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಚಿತ್ರದುರ್ಗ ಜಿಲ್ಲೆಯಲ್ಲಿ ಯುವ ಕಾಂಗ್ರೆಸ್‍ನ್ನು ತಳಮಟ್ಟದಿಂದ ಸಂಘಟಿಸುತ್ತೇನೆ : ಎಂ.ನಿಶ್ಚಿತ್

ಜಗಳೂರು, ಮೊಳಕಾಲ್ಮೂರಿಗೆ ಭದ್ರೆ ಹರಿದ ನಂತರವೇ ಸಂಭ್ರಮ ಬಯಲು ಸೀಮೆ ಬಾಗಿನ ಸಮರ್ಪಣೆ ನಂತರ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರತಿಜ್ಞೆ ಸ್ವೀಕಾರ

ಯುವಪೀಳಿಗೆ ಮೊಬೈಲ್ ದಾಸರಾಗದೆ ಶರಣರ ಕಾಯಕ ಸಿದ್ಧಾಂತ ಮೈಗೂಡಿಸಿಕೊಳ್ಳಲಿ: ಬಸವಲಿಂಗ ಶ್ರೀಗಳ ಕರೆ

ಚಿತ್ರದುರ್ಗಕ್ಕೆ ಹರಿದುಬಂದ ಭದ್ರಾ ನೀರು: ಸೆಪ್ಟೆಂಬರ್ 10ರಂದು ಜಿಲ್ಲಾ ನೀರಾವರಿ ಹೋರಾಟ ಸಮಿತಿಯಿಂದ ಸಂಭ್ರಮೋತ್ಸವ

ಪೌರಕಾರ್ಮಿಕರಿಗೆ ಸಚಿವ ಕೃಷ್ಣ ಬೈರೇಗೌಡ ಬಹಿರಂಗ ಕ್ಷಮೆಯಾಚಿಸದಿದ್ದರೆ ಕಪ್ಪು ಬಟ್ಟೆ ಪ್ರದರ್ಶನ : ಬಿಜೆಪಿ ಮುಖಂಡ ಜಿ.ಎಚ್. ಮೋಹನ್ ಕುಮಾರ್ ಎಚ್ಚರಿಕೆ

ಚಿತ್ರದುರ್ಗ: ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಯೂತ್ ಕಾಂಗ್ರೆಸ್ ಬಲವರ್ಧನೆ : ಕಾರೆಹಳ್ಳಿ ಉಲ್ಲಾಸ್