ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಸೆ. 06 : ಮ್ಯಾನ್‍ಹೋಲ್ ಮತ್ತು ಸೆಪ್ಟಿಕ್ ಟ್ಯಾಂಕ್ ಸ್ವಚ್ಛತೆಯನ್ನು ಸಂಪೂರ್ಣ ಯಾಂತ್ರೀಕರಣಗೊಳಿಸಿ, ಮಾನವ ಜೀವವನ್ನು ಅಪಾಯಕ್ಕೆ ತಳ್ಳುವ ಪದ್ಧತಿಗೆ ಶಾಶ್ವತ ಅಂತ್ಯ ಹಾಡಬೇಕು. ಇಂತಹ ಗಂಭೀರ ಸಮಸ್ಯೆಗಳ ನಡುವೆ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮನವಿ ಮಾಡಲು ಬಂದ ಪೌರಕಾರ್ಮಿ ಕರನ್ನೇ “ಶೇ.30ರಷ್ಟು ಗೈರುಹಾಜರಾಗುತ್ತೀರಿ, ನಿಮ್ಮನ್ನು ಯಾಕೆ ಖಾಯಂ ಮಾಡಬೇಕು?” ಎಂಬ ರೀತಿಯಲ್ಲಿ ಸಚಿವ ಕೃಷ್ಣ ಬೈರೇಗೌಡರು ಪ್ರಶ್ನಿಸಿರುವುದು ಅತ್ಯಂತ ಖಂಡನೀಯ ಎಂದು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಿ. ಎಚ್. ಮೋಹನ್ ಕುಮಾರ್ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು ಕರ್ನಾಟಕದ ನಗರಗಳನ್ನು ಸ್ವಚ್ಛವಾಗಿಡುವ ಪೌರ ಕಾರ್ಮಿಕರು ಹಲವು ವರ್ಷಗಳಿಂದ ಉದ್ಯೋಗ ಭದ್ರತೆ, ಸಮರ್ಪಕ ವೇತನ ಪಿಎಫ್ ಮತ್ತು ಇಎಸ್‍ಐ ಆರೋಗ್ಯ ರಕ್ಷಣೆ ಹಾಗೂ ಸುರಕ್ಷತಾ ಸೌಲಭ್ಯಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಗುತ್ತಿಗೆ ಪದ್ಧತಿ, ವೇತನ ವಿಳಂಬ, ಸಾಮಾಜಿಕ ಭದ್ರತೆಯ ಕೊರತೆ, ಆರೋಗ್ಯ ಸಮಸ್ಯೆಗಳು ಹಾಗೂ ಕೆಲಸದ ವೇಳೆ ಎದುರಾಗುವ ಅಪಾಯಗಳು ಇನ್ನೂ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ. ಪ್ರತಿದಿನ ಕಸ, ಧೂಳು, ವಿಷಕಾರಿ ತ್ಯಾಜ್ಯ, ಒಳಚರಂಡಿ ಹಾಗೂ ಅಪಾಯಕಾರಿ ಪರಿಸ್ಥಿತಿಗಳ ನಡುವೆ ದುಡಿಯುವ ಪೌರಕಾರ್ಮಿಕರಿಗೆ ಗುಣಮಟ್ಟದ ಬ್ರೌಸ್, ಮಾಸ್ಕ್, ಗಮ್ಬಬೂಟ್, ಸುರಕ್ಷತಾ ಉಡುಪು, ಆರೋಗ್ಯ ತಪಾಸಣೆ ಮತ್ತು ವಿಮಾ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದಿದ್ದಾರೆ.
ಮ್ಯಾನ್‍ಹೋಲ್ ಮತ್ತು ಸೆಪ್ಟಿಕ್ ಟ್ಯಾಂಕ್ ಸ್ವಚ್ಛತೆಯನ್ನು ಸಂಪೂರ್ಣ ಯಾಂತ್ರೀಕರಣಗೊಳಿಸಿ, ಮಾನವ ಜೀವವನ್ನು ಅಪಾಯಕ್ಕೆ ತಳ್ಳುವ ಪದ್ಧತಿಗೆ ಶಾಶ್ವತ ಅಂತ್ಯ ಹಾಡಬೇಕು. ಇಂತಹ ಗಂಭೀರ ಸಮಸ್ಯೆಗಳ ನಡುವೆ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮನವಿ ಮಾಡಲು ಬಂದ ಪೌರಕಾರ್ಮಿಕರನ್ನೇ “ಶೇ.30ರಷ್ಟು ಗೈರುಹಾಜರಾಗುತ್ತೀರಿ, ನಿಮ್ಮನ್ನು ಯಾಕೆ ಖಾಯಂ ಮಾಡಬೇಕು?” ಎಂಬ ರೀತಿಯಲ್ಲಿ ಸಚಿವ ಕೃಷ್ಣ ಬೈರೇಗೌಡರು ಪ್ರಶ್ನಿಸಿರುವುದು ಅತ್ಯಂತ ಖಂಡನೀಯ. ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಬೇಕಾದ ಸಚಿವರು, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿದ ಕಾರ್ಮಿಕರನ್ನೇ ಅವಮಾನಿ ಸುವುದು ಅಧಿಕಾರದ ದರ್ಪವನ್ನು ತೋರಿಸುತ್ತದೆ ಎಂದು ದೂರಿದ್ದಾರೆ.
ಪೌರಕಾರ್ಮಿಕರು ಕೇವಲ ಕಸ ಎತ್ತುವ ಕಾರ್ಮಿಕರಲ್ಲ; ಅವರು ಸಾರ್ವಜನಿಕ ಆರೋಗ್ಯ ಮತ್ತು ಸ್ವಚ್ಛತೆಯ ಮುಂಚೂಣಿ ಸೇವಕರು. ಅವರ ಶ್ರಮದಿಂದಲೇ ನಮ್ಮ ನಗರಗಳು ಸ್ವಚ್ಛವಾಗಿರುತ್ತವೆ. ಆದ್ದರಿಂದ ಸಚಿವ ಕೃಷ್ಣ ಬೈರೇಗೌಡರು ತಮ್ಮ ಹೇಳಿಕೆಯನ್ನು ಹಿಂಪಡೆದು ಪೌರಕಾರ್ಮಿಕರಲ್ಲಿ ಬಹಿರಂಗ ಕ್ಷಮೆಯಾಚಿಸಬೇಕು. ಜೊತೆಗೆ ಉದ್ಯೋಗ ಖಾಯಂಯಾತಿ, ಸಮಯಕ್ಕೆ ಸರಿಯಾದ ವೇತನ, ಪಿಎಫ್ ಮತ್ತು ಇಎಸ್‍ಐ ಆರೋಗ್ಯ ರಕ್ಷಣೆ, ಸುರಕ್ಷತಾ ಸಾಧನಗಳು ಹಾಗೂ ಗೌರವಯುತ ಕೆಲಸದ ವಾತಾವರಣವನ್ನು ಸರ್ಕಾರ ಖಾತ್ರಿಪಡಿಸ ಬೇಕು. ಸಚಿವರು ಕ್ಷಮೆಯಾಚಿಸದಿದ್ದರೆ, ಪೌರಕಾರ್ಮಿಕರ ಆತ್ಮಗೌರವ ಮತ್ತು ನ್ಯಾಯಯುತ ಹಕ್ಕುಗಳಿಗೆ ಬೆಂಬಲವಾಗಿ ಕಪ್ಪು ಬಟ್ಟೆ ಪ್ರದರ್ಶನದ ಮೂಲಕ ಪ್ರತಿಭಟನೆಯ ಎಚ್ಚರಿಕೆಯನ್ನು ಜಿ.ಎಚ್ ಮೋಹನ್ ಕುಮಾರ್ ನೀಡಿದ್ದಾರೆ.










