ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 01 : ಆಧುನಿಕ ಜಗತ್ತಿಗೆ ಮೌಲ್ಯಯುತ ಬದುಕು ಅಗತ್ಯವಾಗಿದೆ. ಕವಿಕಲ್ಪಿತ ಭಾವಗೀತೆಗಳು ಮನುಷ್ಯನ ಭಾವನೆಗಳನ್ನು ಅರಳಿಸುತ್ತವೆ ಅದೇ ರೀತಿ ಶರಣರ ವಚನಗಳು ಭಾವದ ಜೊತೆಗೆ ಮನುಷ್ಯನನ್ನು ಜಾಗೃತಗೊಳಿಸುತ್ತವೆ. ಸಹಬಾಳ್ವೆ, ಸಹಕಾರ, ಸೇವಾಮನೋಭಾವ ಬೆಳಸಿಕೊಳ್ಳಲು ವಚನ ಸಾಹಿತ್ಯ ಮತ್ತು ಭಾವಗೀತೆಗಳು ಸಹಕಾರಿಯಾಗಿವೆ ಎಂದು ಹಿರಿಯ ರಂಗಕರ್ಮಿ ಕೆ.ಪಿ.ಎಂ.ಗಣೇಶಯ್ಯ ಅಭಿಪ್ರಾಯಪಟ್ಟರು.
ನಗರದ ಕಬೀರಾನಂದ ಆಶ್ರಮದ ಪ್ರೌಢಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳಿಗಾಗಿ ಶನಿವಾರ ಬಾದರದಿನ್ನಿ ಆರ್ಟ್ಸ್ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ “ಗಾನ-ಲಹರಿ” ವಚನ ಹಾಗೂ ಭಾವಗೀತೆಗಳ ತರಬೇತಿ ಕಾರ್ಯಗಾರ ಉದ್ಧಾಟಿಸಿ ಮಾತನಾಡಿದರು.

ಪಠ್ಯಾಧಾರಿತ ವಿಷಯ ವಸ್ತುಗಳನ್ನು ಮಕ್ಕಳ ಅರಿವಿಗೆ ತರುವ ಪ್ರಯತ್ನ ಕಾರ್ಯಗತವಾಗಬೇಕು. ಗದ್ಯ ಮತ್ತು ಪದ್ಯಗಳಿಗೆ ಸಾಂಸ್ಕೃತಿಕವಾಗಿ ಸ್ಪರ್ಶಿಸಿದರೆ ಹೆಚ್ಚು ಪರಿಣಾಮಕಾರಿ ಬೀರುತ್ತದೆ. ಮಕ್ಕಳಿಗೆ ಪ್ರಾಯೋಗಿಕವಾಗಿ ದೈನಂದಿನ ಚಟುವಟಿಕೆಗಳಲ್ಲಿ ಸಾಂಸ್ಕೃತಿಕ ತರಗತಿಗಳನ್ನು ನಡೆಸುವುದರಿಂದ ಮಕ್ಕಳಲ್ಲಿ ಭೌದ್ಧಿಕ ಮಟ್ಟ ಹೆಚ್ಚುತ್ತದೆ ಎಂದರು.
ಬಾದರದಿನ್ನಿ ಆರ್ಟ್ಸ್ ಅಕಾಡೆಮಿ ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ ಮಾತನಾಡಿ, ವಚನ ಸಾಹಿತ್ಯಕ್ಕೆ ಪ್ರಾಚೀನ ಪರಂಪರೆ ಇದೆ. 11ನೇ ಶತಮಾನದ ಉತ್ತರಾರ್ಧದಲ್ಲಿ ಉದಯಿಸಿ 12ನೇ ಶತಮಾನದ ಕಡೆಯವರೆಗೂ ಬಸವಣ್ಣನವರ ಹಾಗೂ ಜನಸಾಮಾನ್ಯರ ಆಂದೋಲನದ ಭಾಗವಾಗಿ ಬೆಳೆದು ಬಂತು. ಹಾಡಿದರೆ ಹಾಡಾಗುವ ಓದಿದರೆ ಗದ್ಯವಾಗುವ ವಿಶೇಷ ಪ್ರಕಾರವಾಗಿದೆ ವಚನ ಸಾಹಿತ್ಯ ಎಂದು ತಿಳಿಸಿದರು.
ಮುಖ್ಯ ಶಿಕ್ಷಕ ಹೆಚ್.ಟಿ ಬಸವರಾಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹಶಿಕ್ಷಕರಾದ ಬಿ.ಎಸ್.ಜ್ಯೋತಿ, ರಶ್ಮಿ, ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ನವೀನ್, ಪರಮೇಶ್ವರಪ್ಪ, ಕರಿಬಸಪ್ಪ, ಕವಿತ, ಕಲಾವಿದ ಗುರುಕಿರಣ ಮುಂತಾದವರು ಉಪಸ್ಥಿತರಿದ್ದರು.
ಸಂಗೀತ ಶಿಕ್ಷಕ ಕೆ.ಗಂಗಾಧರ್ ಮಕ್ಕಳಿಗೆ ಪ್ರಾಯೋಗಿಕವಾಗಿ ವಚನ ಹಾಗೂ ಭಾವಗೀತೆಗಳನ್ನು ಹೇಳಿಕೊಟ್ಟರು. ವಿದ್ಯಾರ್ಥಿನಿ ಸಾನ್ವಿ ಮತ್ತು ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











