Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿಶ್ವದ ವೇಗದ ಇಂಟರ್ನೆಟ್ ಹೊಂದಿರುವ ದೇಶಗಳ ಪಟ್ಟಿ ಬಿಡುಗಡೆ: ಸಿಂಗಾಪುರ ನಂ.1, ಅಮೆರಿಕ 10ನೇ ಸ್ಥಾನಕ್ಕೆ!

---Advertisement---

ದೆಹಲಿ.ಆಗಸ್ಟ್.1:  ವಿಶ್ವದಲ್ಲೇ ಅತ್ಯಂತ ವೇಗದ ಇಂಟರ್ನೆಟ್ ಸೇವೆ ಒದಗಿಸುವ ಟಾಪ್ 10 ದೇಶಗಳ ನೂತನ ಪಟ್ಟಿ ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ಸಿಂಗಾಪುರ ಮೊದಲ ಸ್ಥಾನವನ್ನು ಪಡೆದುಕೊಂಡು ವಿಶ್ವದ ಅತ್ಯಂತ ವೇಗದ ಇಂಟರ್ನೆಟ್ ಹೊಂದಿರುವ ದೇಶವಾಗಿ ಹೊರಹೊಮ್ಮಿದೆ. ತಂತ್ರಜ್ಞಾನದಲ್ಲಿ ಅತ್ಯಂತ ಮುಂಚೂಣಿಯಲ್ಲಿರುವ ಅಮೆರಿಕ (ಯುಎಸ್) ಈ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದುಕೊಂಡಿದೆ.

ಈ ಪಟ್ಟಿಯಲ್ಲಿರುವ ದೇಶಗಳು, ಅವುಗಳ ಇಂಟರ್ನೆಟ್ ವೇಗ (Mbps) ಮತ್ತು 1 GB ಸಾಮರ್ಥ್ಯದ ವೀಡಿಯೊ ಡೌನ್‌ಲೋಡ್ ಮಾಡಲು ತೆಗೆದುಕೊಳ್ಳುವ ಸಮಯದ ವಿವರ ಇಲ್ಲಿದೆ.

ಸಿಂಗಾಪುರ: 278.4 Mbps

(ಸರಾಸರಿ 1GB ವೀಡಿಯೊ ಡೌನ್‌ಲೋಡ್ ಮಾಡಲು ಕೇವಲ 29 ಸೆಕೆಂಡ್)

ಹಾಂಗ್ ಕಾಂಗ್: 273.0 Mbps

(ಸುಮಾರು 30 ಸೆಕೆಂಡ್)

ಮೊನಾಕೊ: 261.5 Mbps

(31 ಸೆಕೆಂಡ್)

ಸ್ವಿಟ್ಜರ್ಲ್ಯಾಂಡ್: 234.3 Mbps

(34 ಸೆಕೆಂಡ್)

ಡೆನ್ಮಾರ್ಕ್: 229.1 Mbps

(ಸುಮಾರು 35 ಸೆಕೆಂಡ್)

ದಕ್ಷಿಣ ಕೊರಿಯಾ: 224.7 Mbps

(36 ಸೆಕೆಂಡ್)

ರೊಮೇನಿಯಾ: 218.8 Mbps

(ಸುಮಾರು 37 ಸೆಕೆಂಡ್)

ಫ್ರಾನ್ಸ್: 213.6 Mbps

(38 ಸೆಕೆಂಡ್)

ಥೈಲ್ಯಾಂಡ್: 205.9 Mbps

(39 ಸೆಕೆಂಡ್)

ಅಮೆರಿಕ (USA): 201.3 Mbps

(41 ಸೆಕೆಂಡ್)

ಸಿಂಗಾಪುರದಲ್ಲಿ ಡೌನ್‌ಲೋಡಿಂಗ್ ವೇಗ ಅತ್ಯುನ್ನತ ಮಟ್ಟದಲ್ಲಿದ್ದು, ಡಿಜಿಟಲ್ ಮೂಲಸೌಕರ್ಯದಲ್ಲಿ ವಿಶ್ವದಲ್ಲೇ ಮೊದಲ ಸ್ಥಾನ ಕಾಯ್ದುಕೊಂಡಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now