ಸುದ್ದಿಒನ್, ಚಿತ್ರದುರ್ಗ, ಜುಲೈ. 21 : ವರಮಹಾಲಕ್ಷ್ಮಿ ಹಬ್ಬದ ಶುಭ ಪ್ರಯುಕ್ತ ನಗರದ ‘ಹೋಟೆಲ್ ದುರ್ಗದ ಸಿರಿ’ಯಲ್ಲಿ ಇದೇ ಜುಲೈ 30 ರಂದು ‘ಅರ್ಬನ್ ಇಂಡಿಯಾ’ ಬೃಹತ್ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ.
ಈ ಮೇಳದಲ್ಲಿ ದೇಶದ ವಿವಿಧ ರಾಜ್ಯಗಳ ಪ್ರಸಿದ್ಧ ಸೀರೆಗಳು, ಕರಕುಶಲ ಹಾಗೂ ಅಲಂಕಾರಿಕ ವಸ್ತುಗಳು, ಗ್ರಾಮೋದ್ಯೋಗ ಉತ್ಪನ್ನಗಳು ಮತ್ತು ಹೆಸರಾಂತ ಬ್ರ್ಯಾಂಡ್ಗಳ ವಿವಿಧ ನಮೂನೆಯ ವಸ್ತುಗಳು ಒಂದೇ ಸೂರಿನಡಿ ಲಭ್ಯವಿರಲಿವೆ.
ವಾರಣಾಸಿಯಲ್ಲಿ ಕೈಮಗ್ಗದಿಂದ ವಿಶೇಷವಾಗಿ ನೇಯ್ದು ತರಲಾದ ಬನಾರಸ್ ರೇಷ್ಮೆ ಹಾಗೂ ಕಾಟನ್ ಸೀರೆಗಳು, ಫ್ಯಾಷನ್ ವಿನ್ಯಾಸಕರ ಫ್ಯಾನ್ಸಿ ಸೀರೆಗಳು ಮತ್ತು ವಿಧವಿಧದ ರೇಷ್ಮೆ ಸೀರೆಗಳು ಇಲ್ಲಿ ಸಿಗಲಿವೆ.ಈ ಉತ್ಪನ್ನಗಳು ರೂ. 1,100 ರಿಂದ ಆರಂಭವಾಗಿ ರೂ. 28,000 ದವರೆಗೆ ಗ್ರಾಹಕರಿಗೆ ಲಭ್ಯವಿರುತ್ತವೆ.
ಬೆಳ್ಳಿ ಹಾಗೂ ವಿವಿಧ ಅಪರೂಪದ ಹರಳುಗಳಿಂದ ಸಿದ್ಧಗೊಂಡ ಆಕರ್ಷಕ ಆಭರಣಗಳು, ಬೆಂಗಳೂರಿನ ಫ್ಯಾಷನ್ ವಿನ್ಯಾಸಕರ ಕುರ್ತಿಗಳು, ಕಾಟನ್ ಸೂಪರ್ ಗಾತ್ರದ ಬೆಡ್ಶೀಟ್ಗಳು, ಡಿಸೈನರ್ ಕೈಚೀಲಗಳು , ಸೌಂದರ್ಯ ವರ್ಧಕ ಸಾಧನಗಳು ಹಾಗೂ ಪ್ರಸಿದ್ಧ ಕಂಪನಿಗಳ ಮಕ್ಕಳ ಉಡುಪುಗಳು ಮಾರಾಟಕ್ಕಿರಲಿವೆ.
ಇದು ಕೇವಲ ಒಂದು ದಿನದ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳವಾಗಿರುವುದರಿಂದ, ಚಿತ್ರದುರ್ಗದ ಜನತೆ ಈ ಸುವರ್ಣಾವಕಾಶವನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಂಸ್ಥೆಯ ಸ್ಥಾಪಕಿ ನಿರಂಜನಿ ರವೀಂದ್ರ ಅವರು ಕೋರಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










