ಸುದ್ದಿಒನ್, ಹಿರಿಯೂರು, ಜುಲೈ. 18 : ಮಾನವನ ಮೆದುಳು ಕೇವಲ ಅಂಗವಲ್ಲ, ಬದಲಿಗೆ ಜಗತ್ತಿನ ಅತ್ಯಂತ ಬಲಿಷ್ಠ ಸೂಪರ್ ಕಂಪ್ಯೂಟರ್‌ಗಳನ್ನೂ ಮೀರಿಸುವ ಅದ್ಭುತ ಸಾಮರ್ಥ್ಯವನ್ನು ಹೊಂದಿದೆ ಎಂದು ಅಂತರಾಷ್ಟೀಯ ಸ್ಮರಣ ಶಕ್ತಿ ತರಬೇತುದಾರ ಡಾ. ಎಂ. ರವಿಪ್ರಸಾದ್ ಸಜ್ಜನ್ ಅಭಿಪ್ರಾಯಪಟ್ಟರು.
ತಾಲೂಕಿನ ಭೀಮನಬಂಡೆ ಗೇಟ್ ಬಳಿ ಇರುವ ಯಾಜ್ಞವಲ್ಕ್ಯ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೋಸ್ಕರ ಹಮ್ಮಿಕೊಂಡಿದ್ದ
ಮಾನವನ ಮೆದುಳು ಒಂದು ಶಕ್ತಿಶಾಲಿ ಕಂಪ್ಯೂಟರ್ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ನೀಡಿ ಮಾತನಾಡಿದರು.
ವಿಜ್ಞಾನಿಗಳ ಅಧ್ಯಯನದ ಪ್ರಕಾರ ಮನುಷ್ಯರ ಮೆದುಳು ಸರಿಸುಮಾರು 2.5 ಪೆಟಾಬೈಟ್‌ಗಳಷ್ಟು ಅಂದರೆ ಸುಮಾರು 2.5 ಮಿಲಿಯನ್ ಜಿಬಿ ಗಳಷ್ಟು ಮಾಹಿತಿಯನ್ನು ಸಂಗ್ರಹಿಸಿಡುವ ಅಪಾರ ಸಾಮರ್ಥ್ಯವನ್ನು ಹೊಂದಿದೆ. ಇದು ಸರಿಸುಮಾರು 3 ಮಿಲಿಯನ್ ಗಂಟೆಗಳ ಹೆಚ್‌ಡಿ ವಿಡಿಯೋ ಸಂಗ್ರಹ ಮತ್ತು 340 ವರ್ಷಗಳಿಗೂ ಹೆಚ್ಚು ಕಾಲ ನಿರಂತರ ವಿಡಿಯೋ ಪ್ಲೇಬ್ಯಾಕ್‌ಗೆ ಸಮಾನವಾಗಿದೆ ಎಂಬ ಮಾಹಿತಿ ವರದಿಯಾಗಿದೆ. ಮಾನವನ ಮೆದುಳನ್ನು ಅತ್ಯಂತ ಶಕ್ತಿಶಾಲಿ ಕಂಪ್ಯೂಟರ್ ಎಂದು ಕರೆಯಲಾಗುತ್ತದೆ ಎಂದರು .
ನಮ್ಮ ಮೆದುಳಿನಲ್ಲಿ ಸರಿಸುಮಾರು 86 ಶತಕೋಟಿ ನರಕೋಶಗಳಿವೆ. ಪ್ರತಿಯೊಂದು ನರಕೋಶವು ಸಿನಾಪ್ಸಸ್ ಎಂದು ಕರೆಯಲ್ಪಡುವ ಸಾವಿರಾರು ಸಂಪರ್ಕಗಳನ್ನು ಹೊಂದಿದೆ. ನಮ್ಮ ಮೆದುಳಿನಲ್ಲಿ ಅಗಾಧ ಶಕ್ತಿ ಸಾಮರ್ಥ್ಯವಿದ್ದರೂ ಮೆದುಳಿನ ಸಂಪೂರ್ಣ ಉಪಯೋಗ ಪಡೆಯುತ್ತಿಲ್ಲ. ವಿದ್ಯಾರ್ಥಿಗಳು ಮೆದುಳನ್ನು ಸಮರ್ಥವಾಗಿ ಬಳಸಿಕೊಳ್ಳುವುದರ ಮೂಲಕ ಉನ್ನತ ಸಾಧನೆಯ ಯಶಸ್ವಿ ಹೊಂದಬಹುದು ಎಂದರು.
ಶಾಲೆಯ ಆಡಳಿತಾಧಿಕಾರಿ ಶ್ರೀನಿವಾಸ್‌ಮೂರ್ತಿ ರವರು ಮಾತನಾಡಿ ಡಾ. ರವಿಪ್ರಸಾದ್ ಸಜ್ಜನ್ ರವರು ವಿಶ್ವಮಟ್ಟದಲ್ಲಿ ವರ್ಲ್ಡ್ ಮೆಮೋರಿ ಮ್ಯಾನ್ ಎಂದು ಪ್ರಸಿದ್ಧರಾಗಿದ್ದಾರೆ. ಡಾ. ಸಜ್ಜನ್ ರವರು ಸೃಜನಾತ್ಮಕ ಸ್ಮರಣಶಕ್ತಿ ಮತ್ತು ವ್ಯಕ್ತಿತ್ವ ವಿಕಸನ ಕ್ಷೇತ್ರದಲ್ಲಿ ವಿಶೇಷ ಪಾಂಡಿತ್ಯವನ್ನು ಪಡೆದಿದ್ದು, ದೇಶದಾದ್ಯಂತ ಇವರು ನೀಡಿರುವ ಉಪನ್ಯಾಸ ಹಾಗೂ ಕಾರ್ಯಾಗಾರಗಳಿಂದ 4 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಂಡಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ವೇಣುಕುಮಾರ್, ನವೀನ್‌ಪ್ರಭು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










