Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು 7ನೇ ಮಹಡಿಯ ಗ್ರಿಲ್ ಏರಿ ರಕ್ಷಿಸಿದ ಪೊಲೀಸ್ ; ವಿಡಿಯೋ ವೈರಲ್!

---Advertisement---

ಸೂರತ್: ತನ್ನ ಪ್ರಾಣವನ್ನು ಪಣಕ್ಕಿಟ್ಟು, 7ನೇ ಮಹಡಿಯ ಕಟ್ಟಡದ ಹೊರಗಿನ ಗ್ರಿಲ್ ಮೂಲಕ ಹತ್ತಿ ಹೋಗಿ, ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಸೂರತ್ ಪೊಲೀಸ್ ಕಾನ್ಸ್ಟೆಬಲ್ ಒಬ್ಬರು ಸಿನಿಮೀಯ ಶೈಲಿಯಲ್ಲಿ ರಕ್ಷಿಸಿರುವ ರೋಮಾಂಚನಕಾರಿ ಘಟನೆ ಗುಜರಾತ್ನ ಸೂರತ್ ನಗರದ ಲಸ್ಕಾನಾ ಪ್ರದೇಶದಲ್ಲಿ ನಡೆದಿದೆ.

ಜೂನ್ 8ರ ಸಾಯಂಕಾಲ ಸೂರತ್ ಪೊಲೀಸ್ ನಿಯಂತ್ರಣ ಕೊಠಡಿಗೆ (Control Room) ಕಂಗಾಲಾಗಿದ್ದ ಮಹಿಳೆಯೊಬ್ಬರಿಂದ ತುರ್ತು ಕರೆ ಬಂದಿತ್ತು. ತನ್ನ ಪತಿ ವಿಷಕಾರಿ ವಸ್ತುವನ್ನು ಸೇವಿಸಿ, ಒಳಗಿನಿಂದ ರೂಮ್ ಲಾಕ್ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆ ಎಂದು ಆಕೆ ತಿಳಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಲಸ್ಕಾನಾ ಪೊಲೀಸ್ ಠಾಣೆಯ 112 ಪಿಸಿಆರ್ (PCR) ವಾಹನ, ಅಗ್ನಿಶಾಮಕ ದಳ ಮತ್ತು ಆಂಬ್ಯುಲೆನ್ಸ್ ತಕ್ಷಣವೇ ಸ್ಥಳಕ್ಕೆ ಧಾವಿಸಿದವು. ಆದರೆ, ಫ್ಲ್ಯಾಟ್ ಒಳಗಿನಿಂದ ಲಾಕ್ ಆಗಿದ್ದರಿಂದ ಪೊಲೀಸರಿಗೆ ಒಳಗೆ ಪ್ರವೇಶಿಸುವುದು ದೊಡ್ಡ ಸವಾಲಾಗಿತ್ತು.

ಸಮಯ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸ್ ಕಾನ್ಸ್ಟೆಬಲ್ ಶೈಲೇಶ್ ಚುಡಾಸಮಾ ಮತ್ತು ಡ್ರೈವರ್ ಕೃಪಾಲ್ ಸಿಂಗ್ ಗೋಹಿಲ್ ತಕ್ಷಣವೇ ಕಾರ್ಯಾಚರಣೆಗೆ ಇಳಿದರು. ಪಕ್ಕದ ಮನೆಯ ಫ್ಲ್ಯಾಟ್ಗೆ ತೆರಳಿದ ಕಾನ್ಸ್ಟೆಬಲ್ ಶೈಲೇಶ್, 7ನೇ ಮಹಡಿಯ ಬಾಲ್ಕನಿಯ ಹೊರಗಿನ ಗ್ರಿಲ್ ಹಿಡಿದು ಪ್ರಾಣದ ಹಂಗು ತೊರೆದು ಪಕ್ಕದ ಫ್ಲ್ಯಾಟ್ಗೆ ದಾಟಿದ್ದಾರೆ.

ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ನಾನು ಗ್ರಿಲ್ ಮೂಲಕ ಒಳಗೆ ಪ್ರವೇಶಿಸಿದಾಗ ಆತ ವಿಷ ಸೇವಿಸಿ ವಾಂತಿ ಮಾಡಿಕೊಳ್ಳುತ್ತಿದ್ದ. ತಕ್ಷಣವೇ ಆತನನ್ನು ನಿಯಂತ್ರಣಕ್ಕೆ ಪಡೆದು, ಆತನ ಬಳಿಯಿದ್ದ ಉಳಿದ ವಿಷಕಾರಿ ವಸ್ತುವನ್ನು ಕಿತ್ತುಕೊಂಡೆ” ಎಂದು ಕಾನ್ಸ್ಟೆಬಲ್ ಶೈಲೇಶ್ ಚುಡಾಸಮಾ ಘಟನೆಯನ್ನು ನೆನೆದಿದ್ದಾರೆ.

ಪ್ರತಿ ಕ್ಷಣವೂ ಅಮೂಲ್ಯವಾಗಿದ್ದರಿಂದ, ಪೊಲೀಸರು ಆಂಬ್ಯುಲೆನ್ಸ್ ಬರುವವರೆಗೆ ಕಾಯದೆ ತಾವೇ ಆ ವ್ಯಕ್ತಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲು ಹೊರಟರು. ಮಾರ್ಗಮಧ್ಯದಲ್ಲೇ ಆಂಬ್ಯುಲೆನ್ಸ್ ಸಿಕ್ಕಿದ್ದರಿಂದ, ತಕ್ಷಣವೇ ಆತನನ್ನು ಅದಕ್ಕೆ ಶಿಫ್ಟ್ ಮಾಡಿ ಕಾಮ್ರೇಜ್ನ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಆ ವ್ಯಕ್ತಿ ಗುಣಮುಖನಾಗುತ್ತಿದ್ದಾನೆ ಎಂದು ತಿಳಿದುಬಂದಿದೆ. ರಕ್ಷಣೆಗೊಳಗಾದ ವ್ಯಕ್ತಿ ಸೂರತ್ನ ವಜ್ರ ಕತ್ತರಿಸುವ ಮತ್ತು ಪಾಲಿಶ್ ಮಾಡುವ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಈ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಗುಜರಾತ್ನ ಗೃಹ ಸಚಿವ (ರಾಜ್ಯ ದರ್ಜೆ) ಹರ್ಷ್ ಸಂಘವಿ ಅವರು ಪೊಲೀಸರ ಈ ಮಾನವೀಯ ಮತ್ತು ಧೈರ್ಯದ ಕೆಲಸವನ್ನು ಶ್ಲಾಘಿಸಿ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

“ಇದೇ ನೋಡಿ ಸೂರತ್ ಪೊಲೀಸರ ಮಾನವೀಯ ಮುಖ! ಸೂರತ್ನ ಲಸ್ಕಾನಾ ಪ್ರದೇಶದಲ್ಲಿ ಮಾನಸಿಕ ಒತ್ತಡದಿಂದ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನಿಗೆ ಸೂರತ್ ಪೊಲೀಸರು ಮರುಜನ್ಮ ನೀಡಿದ್ದಾರೆ. ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸಿದ ಸೂರತ್ ಪೊಲೀಸ್ ಪಿಸಿಆರ್ ತಂಡದ ಸಿಬ್ಬಂದಿಗೆ ಅಭಿನಂದನೆಗಳು” ಎಂದು ಅವರು ಬರೆದುಕೊಂಡಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now