ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಜೂ.12 :
ಸಾಮಾಜಿಕ ಸಂಘರ್ಷ ಸಮಿತಿ, ಜನತಂತ್ರ ಆಂದೋಲನವತಿಯಿಂದ ಪ್ರೊ. ಬಿ. ಕೃಷ್ಣಪ್ಪನವರ ಜನ್ಮದಿನ – ಶೋಷಿತರ ಪರ್ಯಾಯ ರಾಜಕೀಯ ಶೋಧನಾ ದಿನ ಕಾರ್ಯಕ್ರಮದ ಅಂಗವಾಗಿ ಮುಕ್ತ ಸಂವಾದಗಳನ್ನು ಜೂ. 14ರ ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ನಗರದ ಸ್ಟೇಡಿಯಂ ರಸ್ತೆಯ ವೀರಸೌಧ ಆವರಣದಲ್ಲಿನ ಪ್ರಗತಿ ಈವೆಂಟ್ ಹಾಲ್‍ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನವಯಾನ ಬುದ್ದ ಧಮ್ಮ ಸಂಘದ ಉಪಾಸಕರಾದ ರಾಮು ಗೋಸಾಯಿ ತಿಳಿಸಿದ್ದಾರೆ.
ಭಾನುವಾರ ದ.ಸಂ.ಸ. ಸಂಸ್ಥಾಪಕರಾದ ಪ್ರೊ| ಬಿ. ಕೃಷ್ಣಪ್ಪರವರ ಜನ್ಮದಿನವನ್ನು ಶೋಷಿತರ ಪರ್ಯಾಯ ರಾಜಕೀಯ ಶೋಧನಾ ದಿನವನ್ನಾಗಿ ಆಚರಿಸಲಾಗುತ್ತಿದೆ ಇದರಲ್ಲಿ ಪ್ರೊ| ಬಿ.ಕೆ. ಅವರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಚಿಂತನೆ, ಹೋರಾಟಗಳ ಬಗ್ಗೆ ಮುಕ್ತ ಸಂವಾದಗಳನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರೊ. ಬಿ.ಕೃಷ್ಣಪ್ಪನವರ ಸಾಮಾಜಿಕ ಹೋರಾಟಗಳು ಮುಕ್ತ ಸಂವಾದದಲ್ಲಿ ಸಾಮಾಜಿಕ ಹೋರಾಟಗಳು- ಪ್ರಭಾವ ಇದರ ಬಗ್ಗೆ ರಾಜ್ಯ ಮಟ್ಟದ ಹೋರಾಟಗಳು ವಿಷಯದಡಿಯಲ್ಲಿ ದಲಿತ ಲೇಖಕರಾದ ಡಾ.ಸೋಮಶೇಖರ್ ವಿಷಯ ಮಂಡನೆಯನ್ನು ಮಾಡಿದರೆ ಎಸ್ಸಿ, ಎಸ್ಟಿ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಚಿಕ್ಕಣ್ಣ ಪೂರಕ ಮಾತುಗಳನ್ನಾಡುವರು.
ಹೆಂಡ ಬೇಡ ಹೋಬಳಿಗೊಂದು ವಸತಿ ಶಾಲೆ ಹೋರಾಟದ ಬಗ್ಗೆ ದಾವಣಗೆರೆ ವಿವಿಯ ಅರ್ಥಶಾಸ್ತ್ರ ವಿಭಾಗದ ಡಾ.ಗೀರೀಶ್ ವಿಷಯವನ್ನು ಮಂಡಿಸಿದರೆ ಎಸ್ಸಿ, ಎಸ್ಟಿ ನೌಕರರ ಒಕ್ಕೂಟದ ಪ್ರಧಾನ ಕಾರ್ಯ ದರ್ಶಿ ಶಂಕರ್ ಪೂರಕ ಮಾತುಗಳನ್ನಾಡಲಿದ್ದಾರೆ. ಅಧ್ಯಕ್ಷತೆಯನ್ನು ಎಸ್ಸಿ, ಎಸ್ಟಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷರಾದ ಪ್ರೋ.ಹಿರೇಹಳ್ಳಿ ಮಲ್ಲಿಕಾರ್ಜನ್ ವಹಿಸಲಿದ್ದಾರೆ. ಪ್ರೊ. ಬಿ,ಕೃಷ್ಣಪ್ಪರವರ ಪರ್ಯಾಯ ರಾಜಕೀಯ ಶೋಧನಾ ಚಿಂತನೆಯ ಬಗ್ಗೆ ಸಾಗರದ ಆಂಗ್ಲಭಾಷಾ ಸಹ ಪ್ರಾಧ್ಯಾಪಕರಾದ ಡಾ.ಬಿ.ಎಲ್.ರಾಜು ವಿಷಯ ಮಂಡಿಸಲಿದ್ದಾರೆ. ರಾಣೇಬೆನ್ನೂರಿನ ಜಿ.ಎಫ್.ಸಿ. ಕನ್ನಡ ವಿಭಾಗದ ಸಹ ಪ್ರಾದ್ಯಾಪಕರಾದ ಡಾ.ವೆಂಕಟೇಶ ಪೂರಕ ಮಾತುಗಳನ್ನಾಡಲಿದ್ದಾರೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಜನತಂತ್ರ ಉಳಿಸಿ ಆಂದೋಲನದ ರಾಜ್ಯಾಧ್ಯಕ್ಷರಾದ ಪ್ರೋ.ಸಿ.ಕೆ.ಮಹೇಶ್ ವಹಿಸಲಿದ್ದಾರೆ. ಸಮಾರೋಪ ನುಡಿಗಳನ್ನು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‍ನ ಸದಸ್ಯರಾದ ಪ್ರೊ. ಮಲ್ಲಿಕಾರ್ಜನ ಹಲಸಂಗಿ ಆಡಲಿದ್ದಾರೆ. ನಿವೃತ್ತ ನ್ಯಾಯಾಧೀಶರಾದ ಕೆಗಬಾಲಯ್ಯ, ಹೆಚ್.ಸಿ. ಶ್ಯಾಮ್ ಪ್ರಸಾದ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















