ಸುದ್ದಿಒನ್, ರಾಣೆಬೆನ್ನೂರು, ಆಗಸ್ಟ್. 03 : ನಗರದ ಮೃತ್ಯುಂಜಯ ನಗರದ ವಾಸಿ ತುರುಕಾಣಿ ಶಿವಯೋಗೆಪ್ಪ (83 ವರ್ಷ) ಇಂದು ಬೆಳಿಗ್ಗೆ ನಿಧನರಾದರು. ಮೃತರು ಓರ್ವ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯನ್ನು
ಮಧ್ಯಾಹ್ನ 3 ಗಂಟೆಗೆ ಸ್ವಗ್ರಾಮವಾದ ಬೂದನೂರುನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.









