Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪಿಯು ಕಾಲೇಜು ಉಪನ್ಯಾಸಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕೆಂಚವೀರಪ್ಪ ಆಯ್ಕೆ: ಪತಂಜಲಿ ಯೋಗ ಪರಿವಾರದಿಂದ ಸನ್ಮಾನ

---Advertisement---

 

ಸುದ್ದಿಒನ್, ಚಿತ್ರದುರ್ಗ, ಜೂನ್‌. 09 :  ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಅಭೂತಪೂರ್ವ ಗೆಲುವು ಸಾಧಿಸಿದ ಯೋಗಗುರು ಕೆಂಚವೀರಪ್ಪ ಅವರನ್ನು ಧವಳಗಿರಿ ನಾಗರಿಕರು ಹಾಗೂ ಪತಂಜಲಿ ಯೋಗ ಪರಿವಾರದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

 

ನಗರದ ಹೊಳಲ್ಕೆರೆ ರಸ್ತೆಯ ಜ್ಞಾನಭಾರತಿ ಶಾಲೆಯ ಯೋಗ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಯೋಗ ಬಂಧುಗಳು ಒಗ್ಗೂಡಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಜೆ.ಎಸ್. ಗುರುಮೂರ್ತಿ ಅವರು, ಕೆಂಚವೀರಪ್ಪನವರ ಸರಳತೆ, ಸ್ನೇಹಪರತೆ ಹಾಗೂ ಸಮಾಜಕ್ಕೆ ಶ್ರಮಿಸುವ ಅರ್ಪಣಾ ಮನೋಭಾವವೇ ಅವರ ಈ ಯಶಸ್ಸಿಗೆ ಕಾರಣ ಎಂದು ಶ್ಲಾಘಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆಂಚವೀರಪ್ಪನವರು, ನನಗೆ ಸಿಕ್ಕಿರುವ ಈ ಅಧಿಕಾರ, ಜಯ ಹಾಗೂ ಸನ್ಮಾನಗಳಿಗಿಂತಲೂ ಯೋಗ ಬಂಧುಗಳೊಂದಿಗೆ ನಾನು ಹೊಂದಿರುವ ಒಡನಾಟವೇ ಅತ್ಯಂತ ಅಮೂಲ್ಯವಾದುದು ಎಂದು ನುಡಿದರು.  ಈ ಸಂದರ್ಭದಲ್ಲಿ ಶಶಿಕಿರಣ್, ಜಿ.ಎಮ್. ಲವಕುಮಾರ್, ಕಾಂತಣ್ಣ, ರಂಗನಾಯಕ್, ಹೇಮಣ್ಣ, ಯೋಗ ರಘು, ಶ್ರೀಕಾಂತ್, ಜಯಣ್ಣ, ಹರೀಶ್ ಹಾಗೂ ಮಹಿಳಾ ಮುಖಂಡರಾದ ಮಾಲಾ, ವಿಜಯಲಕ್ಷ್ಮೀ, ಲತಾ, ರತ್ನಮ್ಮ, ಸುಧಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now