ಸುದ್ದಿಒನ್,ಬೆಂಗಳೂರು,ಮೇ.27: ರಾಜ್ಯದ ಕಾರ್ಮಿಕ ವರ್ಗದ ದೀರ್ಘಕಾಲದ ಬೇಡಿಕೆಗೆ ಮನ್ನಣೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ವಿವಿಧ ವಲಯಗಳಲ್ಲಿ ದುಡಿಯುವ ಕಾರ್ಮಿಕರ ಕನಿಷ್ಠ ವೇತನವನ್ನು ಸರಾಸರಿ ಶೇ. 60 ರಷ್ಟು ಭಾರಿ ಹೆಚ್ಚಳ ಮಾಡಿ ಆದೇಶಿಸಿದೆ. ರಾಷ್ಟ್ರ ನಿರ್ಮಾಣದಲ್ಲಿ ಹಗಲಿರುಳು ಶ್ರಮಿಸುತ್ತಿರುವ ಕಾರ್ಮಿಕ ವರ್ಗದ ಕಲ್ಯಾಣಕ್ಕೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ
ತಿಳಿಸಿದ್ದಾರೆ.
83ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಲಾಭ
ಸರ್ಕಾರದ ಈ ಮಹತ್ವದ ನಿರ್ಧಾರದಿಂದಾಗಿ ಇ-ಕಾಮರ್ಸ್, ಕೊರಿಯರ್ ಸಂಸ್ಥೆಗಳು, ಖಾಸಗಿ ಶಾಲೆ ಮತ್ತು ಕಾಲೇಜುಗಳ ಬೋಧಕೇತರ ಸಿಬ್ಬಂದಿ, ಆಸ್ಪತ್ರೆಗಳು, ಹೋಟೆಲ್‌ಗಳು, ಆಹಾರ ಸಂಸ್ಕರಣಾ ಘಟಕಗಳು, ಪೆಟ್ರೋಲ್ ಬಂಕ್‌ಗಳು, ಧಾರ್ಮಿಕ ಸಂಸ್ಥೆಗಳು ಹಾಗೂ ಖಾಸಗಿ ಫೈನಾನ್ಸ್ ಕಂಪನಿಗಳು ಸೇರಿದಂತೆ ಒಟ್ಟು 83ಕ್ಕೂ ಅಧಿಕ ಅನುಸೂಚಿತ ಉದ್ಯೋಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಲಕ್ಷಾಂತರ ಕಾರ್ಮಿಕರಿಗೆ ನೇರ ಅನುಕೂಲವಾಗಲಿದೆ.

4ರ ಬದಲಿಗೆ 3 ವಲಯಗಳಾಗಿ ಪುನರ್ವಿಂಗಡಣೆ
ವೇತನ ನಿಗದಿ ಮತ್ತು ಪರಿಷ್ಕರಣೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ಈ ಹಿಂದೆ ಇದ್ದ 4 ವಲಯಗಳ (Zones) ವ್ಯವಸ್ಥೆಯನ್ನು ಬದಲಾಯಿಸಿ, ಈಗ 3 ವಲಯಗಳನ್ನಾಗಿ ಮರುರಚಿಸಲಾಗಿದೆ:
ವಲಯ-1: ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಪ್ರದೇಶಗಳು.
ವಲಯ-2: ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳು.

ವಲಯ-3: ಇನ್ನುಳಿದ ಇತರೆ ಎಲ್ಲಾ ಪ್ರದೇಶಗಳು.
ಪರಿಷ್ಕೃತ ವೇತನದ ವಿವರ
ಹೊಸ ಪರಿಷ್ಕರಣೆಯ ಅನ್ವಯ ವಲಯ ಮೂರರಲ್ಲಿ (Zone 3) ಕಾರ್ಯನಿರ್ವಹಿಸುವ ಕಾರ್ಮಿಕರ ವೇತನ ಶ್ರೇಣಿ ಈ ಕೆಳಗಿನಂತಿರಲಿದೆ:
ಕಾರ್ಮಿಕರ ವರ್ಗ ಪರಿಷ್ಕೃತ ಗರಿಷ್ಠ ವೇತನ

ಕೌಶಲ್ಯರಹಿತ ಕಾರ್ಮಿಕರು (Unskilled) ₹19,300 ರವರೆಗೆ
ಕೌಶಲ್ಯಯುತ ಕಾರ್ಮಿಕರು (Skilled) ₹31,100 ರವರೆಗೆ
ಕನಿಷ್ಟ ವೇತನ ಹೆಚ್ಚಿಸಬೇಕೆಂಬ ಕಾರ್ಮಿಕರ ಬೇಡಿಕೆಗೆ ಮನ್ನಣೆ ನೀಡಿ, ಕಾರ್ಮಿಕರ ಕನಿಷ್ಟ ವೇತನವನ್ನು ಸರಾಸರಿ ಶೇ.60 ರಷ್ಟು ಹೆಚ್ಚಿಸಿದ್ದೇವೆ.
ಇ – ಕಾಮರ್ಸ್, ಕೊರಿಯರ್, ಖಾಸಗಿ ಶಾಲೆ – ಕಾಲೇಜುಗಳ ಬೋಧಕೇತರ ಸಿಬ್ಬಂದಿ, ಆಸ್ಪತ್ರೆ, ಹೋಟೆಲ್, ಆಹಾರ ಸಂಸ್ಕರಣೆ, ಪೆಟ್ರೋಲ್ ಬಂಕ್, ಧಾರ್ಮಿಕ ಸಂಸ್ಥೆಗಳಲ್ಲಿ ದುಡಿಯುವ ಸಿಬ್ಬಂದಿ, ಖಾಸಗಿ… pic.twitter.com/Pyjay0bV9x
— DIPR Karnataka (@KarnatakaVarthe) May 26, 2026
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.



















