ಸುದ್ದಿಒನ್, ಚಿತ್ರದುರ್ಗ, ಮೇ. 22 : ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆಯಿಂದ 7 ಮಂದಿ ಸರ್ಕಾರಿ ಅಭಿಯೋಜಕರುಗಳಿಗೆ ಎಸ್.ಪಿ. ರಂಜಿತ್ ಕುಮಾರ್ ಬಂಡಾರು ಅವರು ಸನ್ಮಾನಿಸಿದರು.
ನಗರದ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ 2026 ನೇ ಸಾಲಿನಲ್ಲಿ ಪ್ರಮುಖ ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸಿ, ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಕಾರ್ಯನಿರ್ವಹಿಸಿದ ಗಣ್ಯರಿಗೆ ಗೌರವಿಸಲಾಯಿತು.
2026 ನೇ ಸಾಲಿನಲ್ಲಿ ಪ್ರಮುಖ ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸಿ, ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಕಾರ್ಯನಿರ್ವಹಿಸಿದ
01. ಘನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಎನ್.ಎಸ್ ಮಲ್ಲಯ್ಯ, ಸರ್ಕಾರಿ ಅಭಿಯೋಜಕರು, ಚಿತ್ರದುರ್ಗ.
02. ಘನ 02 ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಶ್ರೀಮತಿ ನಾಗವೇಣಿ ಕೆ.ಬಿ ವಿಶೇಷ ಸರ್ಕಾರಿ ಅಭಿಯೋಜಕರು ಚಿತ್ರದುರ್ಗ.
03. ಘನ 01 ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಶ್ರೀ ಶಂಶೀರ್ ಆಲಿಖಾನ್ ಸರ್ಕಾರಿ ಅಭಿಯೋಜಕರು ಚಿತ್ರದುರ್ಗ.
04. ಕಾನೂನು ಅಧಿಕಾರಿಗಳು, ಬಾಲ ನ್ಯಾಯಾ ಮಂಡಳಿಯ ಶ್ರೀ ಮಂಜಣ್ಣ ಟಿ. ಕಾನೂನು ಅಧಿಕಾರಿಗಳು (ಕಿರಿಯ) ಚಿತ್ರದುರ್ಗ.
05. ಘನ ಸಿಜೆಎಂ ನ್ಯಾಯಾಲಯ ಚಿತ್ರದುರ್ಗದ ಶ್ರೀ ಮಂಜುನಾಥ್ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು ಚಿತ್ರದುರ್ಗ
06. ಘನ 02 ನೇ ಎ.ಸಿ.ಜೆ & ಜೆ.ಎಂ.ಎಫ್.ಸಿದ ಶ್ರೀ ರಾಜು ಎನ್ ಸಹಾಯಕ ಸರ್ಕಾರಿ ಅಭಿಯೋಜಕರು ಚಿತ್ರದುರ್ಗ.
07. ಘನ ಎಸಿಜೆ & ಜೆ.ಎಂ.ಎಫ್.ಸಿ ಹಿರಿಯೂರು ನ್ಯಾಯಾಲಯ ಶ್ರೀ ಚಿದಾನಂದ ಸಹಾಯಕ ಸರ್ಕಾರಿ ಅಭಿಯೋಜಕರು.
ಸರ್ಕಾರಿ ಅಭಿಯೋಜಕರು, ಮತ್ತು ಸಹಾಯಕ ಸರ್ಕಾರಿ ಅಭಿಯೋಜಕರುಗಳಿಗೆ ಸನ್ಮಾನಿಸಿ ಪ್ರಶಂಸನಾ ಪತ್ರ ನೀಡಿ, ಗೌರವ ಪೂರ್ವಕವಾಗಿ ಅಭಿನಂದಿಸಲಾಯಿತು. ಇನ್ನು ಮುಂದೆಯು ಇದೇ ರೀತಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಕಾರ್ಯನಿರ್ವಹಿಸುತ್ತೀರೆಂದು ಆಶಯ ವ್ಯಕ್ತ ಪಡಿಸಿದರು.










