ಸುದ್ದಿಒನ್, ಚಳ್ಳಕೆರೆ, ಮೇ. 21 : ಹಿರಿಯ ಗಾಂಧಿವಾದಿ, ನಡೆದಾಡುವ ಸಂತ ಎಂದೇ ಖ್ಯಾತರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ, ಶ್ವೇತವಸ್ತ್ರಧಾರಿ ಶಿಕ್ಷಕ ಬೆಳಗೆರೆ ಕೃಷ್ಣಶಾಸ್ತ್ರಿ ಅವರ 111 ನೇ ಜಯಂತ್ಯುತ್ಸವನ್ನು ಎರಡು ದಿನಗಳ ಕಾಲ ಆಚರಣೆ ಮಾಡಲಾಗುತ್ತದೆ.
ತಾಲ್ಲೂಕಿನ ಬೆಳೆಗೆರೆ ಗ್ರಾಮದಲ್ಲಿ ಅವರ ಸ್ಮಾರಕದ ಗಡಿಸಲಿನಲ್ಲಿ ನಾಳೆ(ಮೇ. 22 ರಂದು ಬೆಳಗ್ಗೆ 10-30) ಸರ್ವ ಸಿಬ್ಬಂದಿಗಳು ಶಾಸ್ತ್ರೀಜಿಯವರಿಗೆ ಮಾಲಾರ್ಪಣೆ ಮಾಡಿ ನುಡಿನಮನ ಸಲ್ಲಿಸುತ್ತಾರೆ. ಜೊತೆಗೆ ಉಪಸ್ಥತರೆಲ್ಲರೂ ಶಾಸ್ತ್ರಿಗಳು ಉದ್ದೇಶಿಸಿದಂತೆ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಅರ್ಥಪೂರ್ಣವಾಗಿ, ಆಚರಿಸುವ ಸಂಕಲ್ಪ ದೀಕ್ಷಿತರಾಗುತ್ತಾರೆ.
ಮೇ. 24 ರಂದು ದಾವಣಗೆರೆಯಲ್ಲಿ ಶಾಸ್ತ್ರೀಯವರ ಕರ್ಮಶೀಲತೆಗೆ 1990ರ ದಶಕದ ನಂತರ ಒಂದು ಆರ್ಥಿಕ ಹಾಗೂ ಸಾತ್ವಿಕ ಚೈತನ್ಯ ಒದಗಿಸಿದ್ದು ದಾವಣಗೆರೆಯ ಅಭಿಮಾನಿಗಳ ಬಳಗ. ಹಾಗಾಗಿ ಶಾಸ್ತ್ರೀಜಿಯವರಿಗೆ ಅದು ಅತ್ಯಂತ ಆತ್ಮೀಯ ತಾಣವಾಗಿತ್ತು. ಆದ್ದರಿಂದ ಅವರಿಗೆ ಸಂಬಂಧಿಸಿದ ಅನೇಕ ಪ್ರಮುಖ ಕಾರ್ಯಕ್ರಮಗಳಾದ ʼನಾನಿದ್ದೂ ನನ್ನದೇನಿಲ್ಲʼ, ಪುಸ್ತಕ ಬಿಡುಗಡೆ ಸೇರಿದ ಅವರ ನೂರು ವರ್ಷದ ವರ್ಧಂತಿಯ ಆಚರಣೆ, ಅವರ ಸಮಗ್ರ ಸಾಹಿತ್ಯವನ್ನೊಳಗೊಂಡ ʼನೂರರ ನೆನಪುʼ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಶಾರದಾಮಂದಿರ ವಿದ್ಯಾಸಂಸ್ಥೆ (ರಿ)ಯ ಕಾರ್ಯಕಾರಿ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.




















