ದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ಇದೀಗ ಜಾಮೀನು ಕೋರಿ ಸುಪ್ರೀಂ ಮೊರೆ ಹೋಗಿದ್ದಾರೆ. ಇಷ್ಟು ದಿನ ಟ್ರಯಲ್ ನಡೆಯುತ್ತಿದ್ದ ಸಲುವಾಗಿ ಜಾಮೀನು ಸಲ್ಲಿಸುವ ಸಾಹಸಕ್ಕೆ ಹೋಗಿರಲಿಲ್ಲ. ಇದೀಗ ಸುಪ್ರೀಂ ಕೋರ್ಟ್ ಗೆ ಜಾಮೀನು ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೆ.
ಈ ಅರ್ಜಿಯ ವಿಚಾರಣೆಯನ್ನು ಮೇ 4ರಂದು ನಡೆಸಲು ಸುಪ್ರೀಂ ಕಾಯ್ದಿರಿಸಿದೆ. ಈ ಹಿಂದೆ ಜಾಮೀನು ಪಡೆದಿದ್ದ ದರ್ಶನ್, ಮತ್ತೆ ಜಲು ಸೇರುವಂತೆ ಆಗಿತ್ತು. ಇದೀಗ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ದರ್ಶನ್ ಅವರು ಎ2 ಆರೋಪಿ ಸ್ಥಾನದಲ್ಲಿದ್ದಾರೆ. ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಅವರು ಈ ಹಿಂದೆ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ ಟ್ರಯಲ್ ಸಂದರ್ಭದಲ್ಲಿ ಜಾಮೀನು ಸಿಗದ ಕಾರಣ ದರ್ಶನ್ ಪರ ವಕೀಲರು ಈಗ ಜಾಮೀನು ಅರ್ಜಿ ಸಲ್ಲಿಕೆ ಬೇಡ ಎಂಬ ಸಲಹೆಯನ್ನ ನೀಡಿದ್ದರು ಎನ್ನಲಾಗಿದೆ.

ಸದ್ಯ ಎಲ್ಲಾ ಟ್ರಯಲ್ ಮುಗಿದಿದೆ. ಹೀಗಾಗಿ ಜಾಮೀನಿಗೆ ಅರ್ಜಿ ಸಲ್ಲಿಕೆಯನ್ನ ಮಾಡಿದ್ದಾರೆ. ಈ ಮೊದಲು ಮೆಡಿಕಲ್ ಕಂಡೀಷನ್ ಬಗ್ಗೆಯೇ ಕಾರಣ ಹೇಳಿ ಜಾಮೀನು ಪಡೆದಿದ್ದರು. ಸದ್ಯ ಜೈಲಿನಲ್ಲಿಯೇ ಅವರಿಗೆ ಚಿಕಿತ್ಸೆ ನಡೆಯುತ್ತಿದೆ. ಈಗ ಅದೇ ಕಾರಣ ಹೇಳಿ ಜಾಮೀನು ಅರ್ಜಿ ಹಾಕಿದ್ದರೂ, ಕೋರ್ಟ್ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದನ್ನ ನೋಡಬೇಕಿದೆ.



















