ಬೆಂಗಳೂರು: ಶಾಸಕ ವಿನಯ್ ಕುಲಕರ್ಣಿ ಅಪರಾಧಿ ಸ್ಥಾನದಲ್ಲಿದ್ದು, ಈಗಾಗಲೇ ಜೀವಾವಧಿ ಶಿಕ್ಷೆಗೂ ಗುರಿಯಾಗಿದ್ದಾರೆ. ಯಾರೇ ಶಾಸಕರಾದರೂ, ಸಚಿವರಾದರೂ ಎರಡು ವರ್ಷಕ್ಕಿಂತ ಮೇಲ್ಪಟ್ಟು ಶಿಕ್ಷೆಗೆ ಗುರಿಯಾದರೆ ಅವರ ಸ್ಥಾನ ಅನರ್ಹಗೊಳ್ಳುತ್ತದೆ. ಆದರೆ ಶಾಸಕ ವಿನಯ್ ಕುಲಕರ್ಣಿ ವಿಷಯದಲ್ಲಿ ರಾಜ್ಯಪಾಲರು ಇನ್ನು ಆ ನಿರ್ಧಾರ ತೆಗೆದುಕೊಂಡಿಲ್ಲ. ಇದರ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅವರು ಹೇಳಿದ್ದು ಹೀಗೆ.
ಅದು ಪ್ರೊಸೂಜರ್. ಸ್ಪೀಕರ್ ಹಾಗೂ ರಾಜ್ಯಪಾಲರಿಗೆ ಬಿಟ್ಟಿರುವುದು. ಕಾನೂನು ವ್ಯವಸ್ಥೆಯಲ್ಲಿ ಯಾವ ರೀತಿ ಮಾಡಬೇಕು ಅದನ್ನು ನಿಯಮಾನುಸಾರ ಮಾಡ್ತಾರೆ. ಒಂದು ದಿನ ತಡವಾಗಬಹುದು, ಎರಡು ದಿನ ತಡವಾಗಬಹುದು. ಅದನ್ನ ಯಾರು ಕೂಡ ಉಲ್ಲಂಘನೆ ಮಾಡುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ.

ಹುದ್ದೆಗಳ ನೇಮಕಾತಿ ಬಗ್ಗೆ ಮಾತನ್ನಾಡಿ, ನಾವೂ 56 ಸಾವಿರ ಹುದ್ದೆಗಳ ನೇಮಕಾತಿ ಮಾಡಬೇಕು ಅಂತ ಇದ್ದಾರೆ. ಈ ಅಧಿಸೂಚನೆಯಾದ ನಂತರವೆ ನೋಟಿಫಿಕೇಷನ್ಸ್ ಗಳನ್ನು ಎಲ್ಲಾ ಇಲಾಖೆಗಳು ಮಾಡುತ್ತವೆ. ತೀರ್ಮಾನ ಆಗಿದೆ, ತೀರ್ಮಾನಕ್ಕೆ ತಕ್ಕ ಹಾಗೇ ಅಧಿಸೂಚನೆಯನ್ನು ಮಾಡಿದ್ದಾರೆ. ನಮ್ಮ ಇಲಾಖೆಯಲ್ಲಿಯೇ 8 ಸಾವಿರ ಸಿಬ್ಬಂದಿ ನೇಮಕಾತಿ ಮಾಡುವುದಕ್ಕೆ ಪ್ರಸ್ತಾವನೆ ಇದೆ.
ಈಗ ನಾವೂ ಕೂಡ ತಕ್ಷಣಕ್ಕೆ ನೋಟಿಫಿಕೇಷನ್ ಮಾಡ್ತೇವೆ. ಹಣಕಾಸು ಇಲಾಖೆ ಅವರು ಮಾರ್ಗದರ್ಶನ ನೀಡಿದ್ದಾರೆ. ತಕ್ಷಣವೇ ನೋಟಿಫಿಕೇಷನ್ ಮಾಡುತ್ತೇವೆ ಎಂಬ ಮಾತನ್ನ ಹೇಳಿದ್ದಾರೆ. ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿಗಾಗಿ ಕಾಯ್ತಾ ಇರುವವರು ಒಬ್ಬರಿಬ್ಬರಲ್ಲ. ಲಕ್ಷಾಂತರ ಮಂದಿ ಪರೀಕ್ಷೆಯನ್ನು ಬರೆದು ನೇಮಕಾತಿ ನೊಟಿಫಿಕೇಷನ್ ಗೆ ಕಾಯ್ತಿದ್ದಾರೆ. ಪರಮೇಶ್ವರ್ ಅವರು ಹೇಳಿದಂತೆ ಆದಷ್ಟು ಬೇಗ ನೋಟಿಫಿಕೇಷನ್ ಹೊರಡಿಸಿದರೆ ಅಭ್ಯರ್ಥಿಗಳಿಗೂ ಖುಷಿಯಾಗಲಿದೆ.





















