ಸುದ್ದಿಒನ್, ಚಳ್ಳಕೆರೆ, ಆಗಸ್ಟ್. 18 : ನಗರದ ರವಿಚಂದ್ರನ್ ಹೋಟೆಲ್ ಮಾಲೀಕ, ಕೊರ್ಲಕುಂಟೆ ಗ್ರಾಮದ ನಿವಾಸಿ ಕೆ.ಎಸ್. ವಿಜಯ ಕುಮಾರ್ (40 ವರ್ಷ) ಹೃದಯಾಘಾತದಿಂದ ನಿಧನರಾಗಿದ್ದಾರೆ. ಹಾಸನಂಬ ದೇವರ ದರ್ಶನಕ್ಕೆ ತೆರಳಿದ್ದಾಗ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೆ ವಿಜಯ ಕುಮಾರ್ ಹೃದಯಘಾತದಿಂದ ಮೃತಪಟ್ಟಿದ್ದಾರೆ. ಮೃತರು ಪತ್ನಿ ಸೇರಿದಂತ ಅಪಾರ ಬಂಧುಬಳಗವನ್ನ ಅಗಲಿದ್ದಾರೆ. ಬುಧವಾರ ಸ್ವಗ್ರಾಮ ಕೊರ್ಲಕುಂಟೆಯ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿಸಿವೆ.









