Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬ್ಯಾಂಕ್‌ಗೆ 4.15 ಲಕ್ಷ ರೂ. ದಂಡ ವಿಧಿಸಿದ ದಾವಣಗೆರೆ ಜಿಲ್ಲಾ ಗ್ರಾಹಕರ ಆಯೋಗ

---Advertisement---

 

ದಾವಣಗೆರೆ, ಏಪ್ರಿಲ್‌, 23 :  ಗೃಹ ಸಾಲದ ಮೂಲ ದಾಖಲೆಗಳನ್ನು ಹಿಂತಿರುಗಿಸುವಲ್ಲಿ ನಿರ್ಲಕ್ಷ್ಯ ತೋರಿದ ಕೆನರಾ ಬ್ಯಾಂಕ್‌ಗೆ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಒಟ್ಟು 4,15,000 ರೂ.ಗಳ ಪರಿಹಾರ ಪಾವತಿಸುವಂತೆ ಮಹತ್ವದ ಆದೇಶ ನೀಡಿದೆ.

 

ನಗರದ ಶ್ರೀಮತಿ ಮಂಜುಳಾ ಕೆ.ಬಿ. ಅವರು ಕೆನರಾ ಬ್ಯಾಂಕ್‌ನಲ್ಲಿ ತಮ್ಮ ಮನೆಯ ಮೂಲದಾಖಲೆಗಳನ್ನು ಅಡಮಾನವಿಟ್ಟು 21,50,000 ರೂ.ಗಳ ಗೃಹ ಸಾಲ ಪಡೆದಿದ್ದರು. 2024 ರ ಸೆಪ್ಟೆಂಬರ್‌ 11‌ರಂದು ಅವರು  ಸಾಲದ ಸಂಪೂರ್ಣ ಮೊತ್ತವನ್ನು ಮರುಪಾವತಿಸಿ, ಸಾಲದ ಖಾತೆಯನ್ನು ರದ್ದುಗೊಳಿಸಿರುತ್ತಾರೆ.  ಸಾಲ ತೀರಿಸಿದ ನಂತರ ತಮ್ಮ ಮೂಲ  ದಾಖಲೆಗಳನ್ನು ಹಿಂಪಡೆಯಲು ಬ್ಯಾಂಕ್‌ಗೆ ಮನವಿ ಸಲ್ಲಿಸಿದಾಗ, ಬ್ಯಾಂಕ್ ಅಧಿಕಾರಿಗಳು ಸದರಿ ದಾಖಲೆಗಳು ಕಳೆದುಹೋಗಿವೆ ಎಂದು ತಿಳಿಸಿ ಕೇವಲ ದೃಢೀಕೃತ ಪ್ರತಿಗಳನ್ನು ನೀಡುವುದಾಗಿ ಹೇಳಿದ್ದರು.

 

ಬ್ಯಾಂಕ್‌ನ ಈ ಬೇಜವಾಬ್ದಾರಿತನದಿಂದ ನೊಂದ ಗ್ರಾಹಕರು, ಅಸಲು ದಾಖಲೆಗಳಿಲ್ಲದೆ ಭವಿಷ್ಯದಲ್ಲಿ ಆಸ್ತಿಯ ಮೌಲ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಜಿಲ್ಲಾ ಗ್ರಾಹಕ ಆಯೋಗದ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ  ಗ್ರಾಹಕ ಆಯೋಗದ ಅಧ್ಯಕ್ಷರಾದ ಕುಮಾರಿ ಹೆಚ್.ಎನ್. ಮೀನಾ ಹಾಗೂ ಸದಸ್ಯರಾದ ತ್ಯಾಗರಾಜನ್ ಸಿ.ಎಸ್. ಅವರನ್ನೊಳಗೊಂಡ ಪೀಠವು ಬ್ಯಾಂಕ್‌ನ ಸೇವೆಯಲ್ಲಿ ಗಂಭೀರ ಲೋಪವಿರುವುದನ್ನು ಎತ್ತಿ ಹಿಡಿದಿದೆ. ಆಯೋಗವು ಏಪ್ರಿಲ್‌ 21 ರಂದು ಕಳೆದುಹೋದ ಅಸಲು ದಾಖಲೆಗಳ
ಬದಲಾಗಿ ದೂರುದಾರರಿಗೆ 4,00,000 ರೂ.ಗಳನ್ನು ವಾರ್ಷಿಕ ಶೇ. 8 ರಷ್ಟು ಬಡ್ಡಿಯೊಂದಿಗೆ ಪಾವತಿಸಬೇಕು.

 

ದೂರುದಾರರಿಗೆ ಉಂಟಾದ ಮಾನಸಿಕ ಯಾತನೆ ಹಾಗೂ ದೂರಿನ ವೆಚ್ಚಕ್ಕಾಗಿ ಹೆಚ್ಚುವರಿ 15,000 ರೂ.ಗಳನ್ನು ನೀಡಬೇಕು. ಮತ್ತು ಆದೇಶ ಹೊರಬಂದ ಒಂದು ತಿಂಗಳ ಒಳಗಾಗಿ ಈ ಒಟ್ಟು ಮೊತ್ತವನ್ನು ದೂರುದಾರರಿಗೆ ಪಾವತಿಸಲು ಬ್ಯಾಂಕ್‌ಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್‌ ಹಾಗೂ ಸಹಾಯಕ ಆಡಳಿತಾಧಿಕಾರಿ ಪದ್ಮ ಪಿ.ಎಸ್‌ ರವರು ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...