ಹಾಸನ: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ ಗೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಈಗಾಗಲೇ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಜೆಡಿಎಸ್ ನಾಯಕರ ಹೆಸರುಗಳನ್ನು ಉಲ್ಲೇಖ ಮಾಡಲಾಗಿದೆ. ಅದರಲ್ಲೂ ಜೆಡಿಎಸ್ ಶಾಸಕ ಸ್ವರೂಪ್ ಪ್ರಕಾಶ್ ಅವರ ಸಂಬಂಧಿಯ ಹೆಸರು ಕೂಡ ಇದೆ. ಈ ಸಂಬಂಧ ಶಾಸಕ ಸ್ವರೂಪ್ ಪ್ರಕಾಶ್ ಪ್ರತಿಕ್ರಿಯೆ ನೀಡಿದ್ದಾರೆ.
ಸ್ವರೂಪ್ ಪ್ರಕಾಶ್ ಅವರ ಚಿಕ್ಕಪ್ಪನ ಮಗ ಆಗಿರಬಹುದು ಅಥವಾ ಕಾರ್ಯಕರ್ತರಾಗಿರಬಹುದು ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಅನ್ನು ಹರಿಬಿಟ್ಟಿದ್ದಾರೆ ಎಂಬ ಸುದ್ದಿಯನ್ನ ನಾನು ನೋಡ್ತಾ ಇದ್ದೆ. ಖಂಡಿತವಾಗಲು ಇದು ಸತ್ಯಕ್ಕೆ ದೂರವಾದಂತ ವಿಚಾರ. ತಮ್ಮ ಮೂಲಕ ಸರ್ಕಾರಕ್ಕೆ ಮತ್ತು ಎಸ್ಐಟಿ ತನಿಖಾ ತಂಡಕ್ಕೂ ಕೇಳಲು ಬಯಸುತ್ತೇನೆ, ಸತ್ಯಾಸತ್ಯತೆಯನ್ನ ಹೊರಗೆ ತರ್ತೀವಿ ಅಂತ ಎಸ್ಐಟಿ ತಂಡ ಏನು ತನಿಖೆ ಮಾಡಿದ್ರು, ಹಲವಾರು ಪ್ರಮುಖರು ಮತ್ತು ಪ್ರಭಾವಿಗಳನ್ನ ಯಾಕೆ ಕೈ ಬಿಟ್ಟಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಎ1 ನವೀನ್ ನನ್ನ ಮಂಪರು ಪರೀಕ್ಷೆಗೆ ಒಳಪಡಿಸಿದ್ರೆ ಪೆನ್ ಡ್ರೈವ್ ಹಂಚಿಕೆ ಮಾಡುವ ವಿಚಾರದಲ್ಲಿ ಯಾರ್ಯಾರು ಪ್ರಭಾವಿಗಳಿದ್ದರು ಎಂಬುದು ತಿಳಿಯುತ್ತೆ. ಈ ಬಗ್ಗೆ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸಬೇಕು. ಸರ್ಕಾರ ಲೋಕಸಭೆ ಚುನಾವಣೆಯನ್ನ ಗೆಲ್ಲೋದಕ್ಕೆ ಯಾವ ರೀತಿಯ ವಾಮಮಾರ್ಗ ಹಿಡಿದರು ಎಂಬುದು ತಮಗೆ ಗೊತ್ತಿದೆ. ಈಗ ಈ ಕೇಸಲ್ಲಿ ಪ್ರಭಾವಿ ನಾಯಕರನ್ನು ಕೈ ಬಿಟ್ಟು ಜೆಡಿಎಸ್ ನವರನ್ನ ತಮ್ಮ ಸಂಬಂಧಿಯನ್ನು ಸೇರಿ ಕಾರ್ಯಕರ್ತರನ್ನು ಸೇರಿಸಿ ತಂದಿರೋದು ನಮಗೂ ಬೇಸರ ತರಿಸಿದೆ. ಕೇಸನ್ನು ದಿಕ್ಕು ತಪ್ಪಿಸಲು ಈ ಕೆಲಸ ಮಾಡಿದ್ದಾರೆ ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











