ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಮಾ, 01: ದ್ವಿತೀಯ ಪಿಯುಸಿ ಪರೀಕ್ಷೆ ವೇಳೆ ಮಕ್ಕಳಿಗೆ ಸಂಸದ ಕಾರಜೋಳ ಶುಭ ಹಾರೈಕೆ ಸಂಭಂಧಪಟ್ಟಂತೆ ಕಾಲೇಜಿನ ಬಳಿ ಸಂಸದ ಕಾರಜೋಳ ಭೇಟಿ ಕೊಟ್ಟಿದ್ದಕ್ಕೆ ಪ್ರಾಂಶುಪಾಲರಿಗೆ ನೋಟೀಸ್ ಜಾರಿ ಮಾಡಿರುವುದನ್ನು ಜಿಲ್ಲಾ ಭಂಜಾರ
(ಲಂಭಾಣಿ) ಸಮಾಜ ತೀವ್ರವಾಗಿ ಖಂಡಿಸಿದ್ದು ನೋಟಿಸ್ ನೀಡಿದ ಪಿಯು ಡಿಡಿಯನ್ನು ಅಮಾನತು ಮಾಡುವಂತೆ ಸರ್ಕಾರವನ್ನು ಅಧ್ಯಕ್ಷರಾದ ಸತೀಶ್ ಕುಮಾರ್ ಆಗ್ರಹಿಸಿದ್ದಾರೆ.


ಚಿತ್ರದುರ್ಗ ನಗರದಲ್ಲಿ ಇರುವ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ನಿನ್ನೆಯಿಂದ ಪ್ರಾರಂಭವಾದ ಪಿಯು ಪರೀಕ್ಷೆ ಗೆ ಸಂಸದರಾದ ಗೋವಿಂದ ಕಾರಜೋಳರವರು ಶುಭ ಕೋರಲು ಆಗಮಿಸಿದ್ದು ಈ
ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಪ್ರಾಂಶು
ಪಾಲರಿಗೆ ಎನ್.ದೊಡ್ಡಪ್ಪಗೆ ನೋಟೀಸ್ ನೀಡಲಾಗಿದೆ.
ಪರೀಕ್ಷಾ ನಿಯಮಾವಳಿಗಳ ಉಲ್ಲಂಘನೆ ಇಲಾಖೆಗೆ ಮುಜುಗರ ಎಂದು ಕಾರಣ ಕೇಳಿ ನೋಟೀಸ್ ನೀಡಿದ್ದು, ನಿಷೆದಾಜ್ಞೆ ಹಾಗೂ ಅನಧಿಕೃತ ಪ್ರವೇಶ ಹಿನ್ನೆಲೆ ಪ್ರಾಂಶು
ಪಾಲರಿಗೆ ನೋಟೀಸ್ ನೀಡಲಾಗಿದೆ.
ಸಂಸದ ಕಾರಜೋಳ ನಿಷೇದಾಜ್ಞೆ ಉಲ್ಲಂಘಿಸಿ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದಕ್ಕೆ ನೋಟೀಸ್ ನ್ನು ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ವತಿಯಿಂದ ನೋಟೀಸ್ ನೀಡಲಾಗಿದೆ.
ಉಪನಿರ್ದೇಶಕರಿಂದ ಕಾಲೇಜು ಪ್ರಾಂಶುಪಾಲ ದೊಡ್ಡಪ್ಪ ಗೆ ನೋಟೀಸ್ ಜಾರಿ ಮಾಡಿದ್ದಕ್ಕೆPU DDಯ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಕಿಡಿಕಾರಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










