ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿಯ ಪರವಾಗಿ ವಾದ ಮಂಡಿಸಿದ ಮೊದಲ ಮುಖ್ಯಮಂತ್ರಿ ಮಮತ ಬ್ಯಾನರ್ಜಿ ಎಂದು ಸುದ್ದಿಯಾಗುತ್ತಿದೆ. ಆದರೆ ನಮ್ಮ ಕರ್ನಾಟಕದ ಮಾಜಿ ಪ್ರಧಾನಿ ದೇವೇಗೌಡರು 1995ರಲ್ಲಿಯೇ ಅವರು ಸಿಎಂ ಆಗಿದ್ದಾಗ ವಾದ ಮಾಡಿದ್ದರು.
1994ರ ಡಿಸೆಂಬರ್ 11 ರಂದು ವೀರಪ್ಪ ಮೊಯ್ಲಿಯವರು ರಾಜೀನಾನು ನೀಡಿದ ನಂತರ ರಾಜ್ಯದ ಹನ್ನೊಂದನೇ ಮುಖ್ಯಮಂತ್ರಿಯಾಗಿ ದೇವೇಗೌಡರು ಪ್ರಮಾಣವಚನ ಸ್ವೀಕರಿಸಿದರು. ಒಂದು ವರ್ಷ, 172 ದಿನಗಳ ಕಾಲ ಅವರು ಸಿಎಂ ಆಗಿದ್ದರು.ದೇವೆಗೌಡರು ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ರಾಜ್ಯದ ನೀರಾವರಿ ವಿಚಾರಕ್ಕೆ ಸುಪ್ರೀಂಕೋರ್ಟ್ ನಲ್ಲಿ ವಾದ ಮಂಡಿಸಿದ್ದರು.
ಆಂಧ್ರ ಪ್ರದೇಶದಿಂದ ಅಂತರ್ ರಾಜ್ಯ ನದಿನೀರು ಹಂಚಿಕೆ ವಿಷಯಕ್ಕೆ
1995ರಲ್ಲಿ ನಡೆದ ವಿಚಾರಣೆಯ ವೇಳೆ ದೇವೇಗೌಡರು ವಾದ ಮಂಡಿಸಲು ಸುಪ್ರೀಂ ಕೋರ್ಟ್‌ಗೆ ಹೋಗಿರಲಿಲ್ಲ. ಬದಲಿಗೆ, ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯ ವಿಚಾರಣೆಯ ವೇಳೆ ಗ್ಯಾಲರಿಯಲ್ಲಿ ಕೂತು ವಾದ-ಪ್ರತಿವಾದವನ್ನು ಆಲಿಸುತ್ತಿದ್ದರು. ಆಗ ವಕೀಲರ ಡ್ರೆಸ್ ನಲ್ಲಿ ಇಲ್ಲದಿದ್ದರು ದಾಖಲೆ ನೀಡಿ ವಾದ ಮಂಡಿಸಿದರು.
ನ್ಯಾಯಮೂರ್ತಿಗಳ ಪ್ರಶ್ನೆಗೆ ರಾಜ್ಯದ ವಕೀಲರು ಗೊಂದಲಗೊಂಡಾಗ, ಅನುಮತಿಯನ್ನು ಕೊಟ್ಟರೆ, ನೀವು ಕೇಳಿದ ಮಾಹಿತಿಯನ್ನು ನಾನು ಕೊಡುವೆ ಎಂದು ನ್ಯಾಯಪೀಠಕ್ಕೆ ಮನವಿಯನ್ನು ಮಾಡಿ, ಕೋರ್ಟ್ ಅನುಮತಿಯನ್ನು ನೀಡಿದಾಗ ವಕೀಲರ ಡ್ರೆಸ್‌ನಲ್ಲಿ ಇಲ್ಲದಿದ್ದರೂ ದೇವೆಗೌಡರು ಸುಪ್ರೀಂಕೋರ್ಟ್ ನಲ್ಲಿ ನ್ಯಾಯಮೂರ್ತಿಗಳು ಕೇಳಿದ ದಾಖಲೆಯನ್ನು ಸ್ವತಃ ನೀಡಿದರು.

















