Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಾಟ್ಸಾಪ್, ಟೆಲಿಗ್ರಾಮ್ ಗಳಲ್ಲಿ ‘ಗ್ಯಾರಂಟಿ ರಿಟರ್ನ್ಸ್’ ಆಮಿಷ; ವಂಚನೆಗಳ ಬಗ್ಗೆ ಗೃಹ ಸಚಿವಾಲಯ ಎಚ್ಚರಿಕೆ!

---Advertisement---

ದೆಹಲಿ: ವಾಟ್ಸಾಪ್ ಮತ್ತು ಟೆಲಿಗ್ರಾಮ್ ನಂತಹ ಸಾಮಾಜಿಕ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಭಾರೀ ಲಾಭ ಹಾಗೂ ಗ್ಯಾರಂಟಿ ರಿಟರ್ನ್ಸ್ ಆಮಿಷ ಒಡ್ಡಿ ಹಣ ಲೂಟಿ ಮಾಡುತ್ತಿರುವ ಸೈಬರ್ ಅಪರಾಧಿಗಳ ಜಾಲದ ಬಗ್ಗೆ ದೇಶದ ನಾಗರಿಕರು ಜಾಗರೂಕರಾಗಿರಬೇಕು ಎಂದು ಗೃಹ ಸಚಿವಾಲಯದ ಅಡಿಯಲ್ಲಿ ಬರುವ ‘ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್’ (I4C) ತಜ್ಞರು ತೀವ್ರ ಎಚ್ಚರಿಕೆ ನೀಡಿದ್ದಾರೆ.

ಸೈಬರ್ ತಜ್ಞರ ಪ್ರಕಾರ, ವಂಚಕರು ಮೊದಲು ವಾಟ್ಸಾಪ್ ಅಥವಾ ಟೆಲಿಗ್ರಾಮ್ನಲ್ಲಿ ನಕಲಿ ಹೂಡಿಕೆ ಗ್ರೂಪ್ಗಳನ್ನು ರಚಿಸುತ್ತಾರೆ. ನಂತರ ತಾವು ಪ್ರಮುಖ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು ಅಥವಾ ಶೇರು ಮಾರುಕಟ್ಟೆಯ ತಜ್ಞರೆಂದು ಪರಿಚಯಿಸಿಕೊಂಡು, ಸಾರ್ವಜನಿಕರಿಗೆ “ವಿಐಪಿ ಸ್ಟಾಕ್ ಟಿಪ್ಸ್” (VIP Stock Tips) ನೀಡಲು ಆರಂಭಿಸುತ್ತಾರೆ.

ಬಳಿಕ, ಅಧಿಕೃತ ಆ್ಯಪ್ ಸ್ಟೋರ್ಗಳ ಬದಲು ಖಾಸಗಿ ಲಿಂಕ್ಗಳ ಮೂಲಕ ನಕಲಿ ಟ್ರೇಡಿಂಗ್ ಆಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡುವಂತೆ ಪ್ರೇರೇಪಿಸುತ್ತಾರೆ. ಈ ನಕಲಿ ಆ್ಯಪ್ಗಳಲ್ಲಿ ಹೂಡಿಕೆದಾರರಿಗೆ ಸುಳ್ಳು ಲಾಭದ ಅಂಕಿ-ಅಂಶಗಳನ್ನು ತೋರಿಸಿ, ಅವರು ಮತ್ತಷ್ಟು ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವಂತೆ ನಂಬಿಸಲಾಗುತ್ತದೆ.

ಯಾವಾಗ ಹೂಡಿಕೆದಾರರು ತಮಗೆ ಬಂದ ಲಾಭದ ಹಣವನ್ನು ಹಿಂಪಡೆಯಲು (Withdraw) ಪ್ರಯತ್ನಿಸುತ್ತಾರೋ, ಆಗ ವಂಚಕರು ತಮ್ಮ ಅಸಲಿ ಮುಖವಾಡ ಕಳಚುತ್ತಾರೆ. “ನಿಮ್ಮ ಖಾತೆಯನ್ನು ಫ್ರೀಜ್ ಮಾಡಲಾಗಿದೆ, ಹಣ ಬಿಡುಗಡೆ ಮಾಡಲು ತೆರಿಗೆ, ಪ್ರೊಸೆಸಿಂಗ್ ಫೀಸ್ ಅಥವಾ ವೆರಿಫಿಕೇಶನ್ ಚಾರ್ಜ್ ಪಾವತಿಸಬೇಕು” ಎಂದು ಹೇಳಿ ಮತ್ತಷ್ಟು ಹಣವನ್ನು ಪೀಕುತ್ತಾರೆ. ಆದರೆ, ಕೊನೆಗೆ ಹೂಡಿಕೆದಾರರಿಗೆ ಒಂದು ರೂಪಾಯಿಯೂ ಸಿಗದೆ ಕೈ ಸುಟ್ಟುಕೊಳ್ಳಬೇಕಾಗುತ್ತದೆ.

ಯಾವುದೇ ನಿಜವಾದ ಶೇರು ಬ್ರೋಕರ್ ಅಥವಾ ಹಣಕಾಸು ಸಂಸ್ಥೆಯು ಗ್ರಾಹಕರು ತಮ್ಮದೇ ಹಣವನ್ನು ಹಿಂಪಡೆಯಲು ಹೆಚ್ಚುವರಿ ಹಣವನ್ನು ಡೆಪಾಸಿಟ್ ಮಾಡುವಂತೆ ಎಂದಿಗೂ ಕೇಳುವುದಿಲ್ಲ.

ಇತ್ತೀಚೆಗೆ ಮುಂಬೈನ ನಿವೃತ್ತ ವಿಜ್ಞಾನಿಯೊಬ್ಬರು ಇದೇ ರೀತಿ ವಾಟ್ಸಾಪ್ ಗ್ರೂಪ್ ಮೂಲಕ ವಂಚನೆಗೆ ಒಳಗಾಗಿದ್ದಾರೆ. ನಕಲಿ ಆ್ಯಪ್ನಲ್ಲಿ ಲಕ್ಷಾಂತರ ರೂಪಾಯಿ ಲಾಭ ತೋರಿಸಿ, ಅವರಿಂದ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡ ವಂಚಕರು, ಕೊನೆಗೆ ಅವರು ಹಣ ಹಿಂಪಡೆಯಲು ಹೋದಾಗ ಖಾತೆಯನ್ನೇ ಬ್ಲಾಕ್ ಮಾಡಿ ವಂಚಿಸಿದ್ದಾರೆ ಎಂದು I4C ವಿಭಾಗ ಉದಾಹರಣೆ ನೀಡಿದೆ.

ಸಾರ್ವಜನಿಕರು ವಹಿಸಬೇಕಾದ ಮುನ್ನೆಚ್ಚರಿಕೆಗಳು

ಅಪರಿಚಿತ ವಾಟ್ಸಾಪ್ ಅಥವಾ ಟೆಲಿಗ್ರಾಮ್ ಗ್ರೂಪ್ ಗಳಲ್ಲಿ ಬರುವ ಹೂಡಿಕೆ ಸಲಹೆಗಳನ್ನು ಕುರುಡಾಗಿ ನಂಬಬೇಡಿ.

ಶೇರು ಮಾರುಕಟ್ಟೆಯ ಹೂಡಿಕೆಗೆ ಮುನ್ನ ಬ್ರೋಕರ್ಗಳು ಮತ್ತು ಟ್ರೇಡಿಂಗ್ ಪ್ಲಾಟ್ ಫಾರ್ಮ್ ಗಳ ಅಧಿಕೃತತೆಯನ್ನು ಕಡ್ಡಾಯವಾಗಿ ಪರಿಶೀಲಿಸಿ.

ಹಣಕಾಸು ಆ್ಯಪ್ ಗಳನ್ನು ಕೇವಲ ಅಧಿಕೃತ ಆ್ಯಪ್ ಸ್ಟೋರ್ ಗಳಿಂದ (Google Play Store ಅಥವಾ Apple App Store) ಮಾತ್ರ ಡೌನ್ ಲೋಡ್ ಮಾಡಿ; ಖಾಸಗಿ ಲಿಂಕ್ ಗಳನ್ನು ಕ್ಲಿಕ್ ಮಾಡಬೇಡಿ.

“ಗ್ಯಾರಂಟಿ ರಿಟರ್ನ್ಸ್” ಅಥವಾ “ಖಾತರಿ ಲಾಭ” ಎಂಬ ಆಮಿಷಗಳೇ ಸೈಬರ್ ವಂಚನೆಯ ಮೊದಲ ಸೂಚನೆ ಎಂಬುದನ್ನು ನೆನಪಿಡಿ.

ವಂಚನೆಗೊಳಗಾದರೆ ತಕ್ಷಣ ಏನು ಮಾಡಬೇಕು?
ಒಂದು ವೇಳೆ ನೀವು ಇಂತಹ ಸೈಬರ್ ವಂಚನೆಗೆ ಒಳಗಾಗಿದ್ದರೆ ಅಥವಾ ಸಂಶಯಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ, ತಕ್ಷಣವೇ ‘ರಾಷ್ಟ್ರೀಯ ಸೈಬರ್ ಕ್ರೈಮ್ ಹೆಲ್ಪ್ಲೈನ್’ ಸಂಖ್ಯೆ 1930 ಗೆ ಕರೆ ಮಾಡಿ ದೂರು ನೀಡಬಹುದು. ಅಥವಾ cybercrime.gov.in ಅಧಿಕೃತ ವೆಬ್ಸೈಟ್ ಮೂಲಕ ದೂರನ್ನು ದಾಖಲಿಸಬಹುದು. ತಕ್ಷಣವೇ ದೂರು ನೀಡುವುದರಿಂದ ಕಳೆದುಹೋದ ಹಣವನ್ನು ವಾಪಸ್ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now