ಹಾಸನ: ವಿದ್ಯಾನಗರದಲ್ಲಿ ಇರುವ ಯಶ್ ಅವರ ತಾಯಿಯ ನಿವೇಶನದ ಪಕ್ಕದಲ್ಲಿಯೇ ಹಾಕಲಾಗಿದ್ದ ಕಾಂಪೌಂಡ್ ಅನ್ನು ತೆರವು ಮಾಡಲಾಗಿದೆ. ಹಾಕಿದ್ದ ಶೆಡ್ಡ ಹಾಗೂ ಕಾಂಪೌಂಡ್ ಅನ್ನು ತೆರವು ಮಾಡಲಾಗಿದೆ. ಕಟ್ಟಾಯ ಹೋಬಳಿ ದೋರ್ನಳ್ಳಿ ಗ್ರಾಮದ ದೇವರಾಜು ಎಂಬುವವರು, ಈ ಜಾಗದ ಮೂಲ ಮಾಲೀಕರಾಗಿರುವ ಲಕ್ಷ್ಮಮ್ಮ ಎಂಬುವವರು ತನ್ನ ಹೆಸರಿಗೆ ಜಿಪಿಎ ಮಾಡಿಕೊಟ್ಟಿದ್ದಾರೆ. ಈ ನಿವೇಶನಕ್ಕೆ ಸಂಬಂಧಿಸಿದ ಕೇಸ್ ತನ್ನಂತೆ ಆಗಿದೆ ಎಂದು ನಿನ್ನೆ ಅಕ್ರಮವಾಗಿ ನಿರ್ಮಾಣವಾಗಿದ್ದ ಕಾಂಪೌಂಡ್ ಅನ್ನು ತೆರವು ಮಾಡಿಸಿದ್ದರು.
ಸದ್ಯಕ್ಕೆ ಯಶ್ ಅವರ ತಾಯಿ ಮನೆಗೆ ಹೋಗಬೇಕಿದ್ದ ರಸ್ತೆಯನ್ನ ಕ್ಲೋಸ್ ಮಾಡಿಸಲಾಗಿದೆ. ಅಂದ್ರೆ ಪಕ್ಕದಲ್ಲೂ ಒಂದು ದಾರಿಯನ್ನ ನಿರ್ಮಾಣ ಮಾಡಿಕೊಂಡಿದ್ದರು. ಈಗ ಮನೆಯ ಮುಂದಿನ ದಾರಿ ಮಾತ್ರ ಇದೆ. ಪಕ್ಕದ ದಾರಿಯನ್ನ ಬಂದ್ ಮಾಡಿಸಿ, ತಂತಿ ಬೇಲಿ ಹಾಕಿಕೊಳ್ಳಲಾಗಿದೆ. 1500 ಚದುರ ಅಡಿಯ ಜಾಗವನ್ನ ಒತ್ತುವರಿ ಮಾಡಲಾಗಿತ್ತು. ಹಾಸನ 4ನೇ ಹೆಚ್ಚುವರಿ ಜಿಎಂಎಫ್ ನ್ಯಾಯಾಲಯದಿಂದ ಆದೇಶ ಬಂದಿತ್ತು.
ಕೇಸ್ ದೇವರಾಜ್ ಅವರ ಪರವಾಗಿದ್ದು, ತನ್ನ ಸಂಗಡಿಗರೊಂದಿಗೆ ಬಂದು ತೆರವು ಮಾಡಿದ್ದಾರೆ. ಅತ್ತ ಪುಷ್ಪಾ ಅವರ ಚಿಕ್ಕಮ್ಮನ ಮಗ ಕೂಡ ದೂರು ನೀಡಿದ್ದಾರೆ. ದೇವರಾಜ್ ಗೂ ಈ ಆಸ್ತಿಗೂ ಸಂಬಂಧವಿಲ್ಲ. ನಮಗೆ ಜೀವ ಬೆದರಿಕೆ ಇದೆ. ರಕ್ಷಣೆ ನೀಡಬೇಕೆಂದು ಕೋರಿ ಬಡಾವಣೆ ಠಾಣೆಗೆ ದೂರು ನೀಡಲಾಗಿದೆ. ಎರಡು ಕಡೆಯಿಂದ ದೂರು ಬಂದ ಹಿನ್ನೆಲೆ ಪೊಲೀಸರು ಇಬ್ಬರಿಗೂ ನೋಟೀಸ್ ನೀಡಿದ್ದು, ಗಲಾಟೆ ಮಾಡಿಕೊಳ್ಳದಂತೆ ಎಚ್ಚರಿಕೆವಹಿಸಿದ್ದಾರೆ. ಕೋರ್ಟ್ ಆದೇಶದಂತೆ ನಡೆದುಕೊಳ್ಳಲು ಸೂಚನೆ ನೀಡಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.























