Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭವಿಷ್ಯದಲ್ಲಿ ದರ್ಶನ್ ರಾಜಕೀಯಕ್ಕೆ ಬರ್ತಾರಾ..? ಅದನ್ನ ಸೆಲೆಬ್ರಿಟಿಗಳು ತೀರ್ಮಾನಿಸ್ತಾರೆ ಎಂದ ದಿನಕರ್..!

---Advertisement---

ಬೆಂಗಳೂರು: ಇಂದು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಂತ ಡೆವಿಲ್ ಸಿನಿಮಾ ರಿಲೀಸ್ ಆಗಿದೆ. ಕಳೆದ ವಾರದಿಂದಾನೂ ಫ್ಯಾನ್ಸ್ ನಿದ್ದೆಗೆಟ್ಟು ತಯಾರಿ ನಡೆಸಿದ್ದರು. ಇಂದು ಸಿನಿಮಾ ನೋಡಿ ಸೆಲೆಬ್ರಿಟಿಗಳ ಮನಸ್ಸು ಸಮಾಧಾನ ಪಟ್ಟುಕೊಂಡಿದೆ. ಡೆವಿಲ್ ಸಿನಿಮಾದಲ್ಲಿ ನಟ ದರ್ಶನ್ ಸಿಎಂ ಆಗಿ, ವಿಲನ್ ಆಗಿ ಅಬ್ಬರಿಸಿದ್ದಾರೆ. ಸದ್ಯ ಜೈಲಿನಲ್ಲಿರುವ ದರ್ಶನ್ ಹೊರಗೆ ಬಂದ್ರೆ ರಾಜಕಾರಣಿ ಆಗ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಇದೆ. ಆ ಪ್ರಶ್ನೆಗೆ ಅವರ ತಮ್ಮ ದಿನಕರ್ ತೂಗುದೀಪ ಉತ್ತರ ನೀಡಿದ್ದಾರೆ.

ಡೆವಿಲ್ ಸಿನಿಮಾ ಚೆನ್ನಾಗಿದೆ. ಕೃಷ್ಣ ಪಾತ್ರಕ್ಕಿಂತ ಡೆವಿಲ್ ಪಾತ್ರ ತುಂಬಾ ಇಷ್ಟ ಆಯ್ತು. ಎರಡು ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾನೆ. 14 ವರ್ಷದ ಹಿಂದೆ ಸಾರಥಿ ಸಿನಿಮಾ ರಿಲೀಸ್ ಮಾಡಿದಾಗ ಭಯ ಇತ್ತು. ಈಗ ಆ ರೀತಿ ಇಲ್ಲ. ದರ್ಶನ್ ಅವರ ಅಭಿಮಾನಿಗಳೇ ಸಿನಿಮಾವನ್ನು ಮೆರೆಸಿದ್ದಾರೆ. ರಿಲೀಸ್ ಗೂ ಮೊದಲೇ ಕಾನ್ಫಿಡೆನ್ಸ್ ಕೊಟ್ಟಿದ್ದರು.

ನಟ ದರ್ಶನ್ ರಾಜಕೀಯಕ್ಕೆ ಬರುವುದನ್ನು ಅವರ ಅಭಿಮಾನಿಗಳು ನಿರ್ಧಾರ ಮಾಡ್ತಾರೆ. ರಾಜಕೀಯಕ್ಕೆ ಇಲ್ಲಿವರೆಗೂ ಯವುದೇ ಆಫರ್ ಬಂದಿರಲಿಲ್ಕ. ಬುಕ್ ಮೈ ಶೋ ನಲ್ಲಿ ನೆಗೆಟಿವ್ ರಿವ್ಯೂವ್ಸ್ ಬರ್ತಾ ಇತ್ತು. ಹಾಗಾಗಿ ಆಫ್ ಮಾಡಿಸಿದ್ದೇವೆ‌. ದುಡ್ಡು ಕೊಟ್ಟು ರೇಟಿಂಗ್ ಮಾಡಿಸುವುದು, ಸಿನಿಮಾದ ಕಲ್ಚರ್ ಹಾಳು ಮಾಡುವ ಕೆಲಸ ನಡೆಯುತ್ತಾ ಇತ್ತು. ನನ್ನ ರಾಯಲ್ ಸಿನಿಮಾಗೂ ಅದೇ ಆಗಿತ್ತು. ಬೇಕು ಅಂತಾನೇ ನೆಗೆಟಿವ್ ಮಾಡಿಸಿದ್ದರು. ನಮ್ಮ ಸೀನಿಯರ್ಸ್ ಶಿವಣ್ಣ, ರಿಷಬ್ ಶೆಟ್ಟಿ ಅವರು ಸಿನಿಮಾಗೆ ವಿಶ್ ಮಾಡಿದ್ದಾರೆ. ಸಾಕಷ್ಟು ಸಿನಿಮಾಗೆ ಬೆಂಬಲ ಸಿಕ್ಕಿದೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now