Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದರ್ಶನ್ ಫ್ಯಾನ್ಸ್ ಅನ್ನು ಕ್ಷಮಿಸಿದ ರಮ್ಯಾ : ಕೊಟ್ಟ ಸ್ಪಷ್ಟನೆ ಏನು..?

---Advertisement---

ಬೆಂಗಳೂರು: ದರ್ಶನ್ ಅಭಿಮಾನಿಗಳ ಹೆಸರಲ್ಲಿ ಒಂದಷ್ಟು ಜನ ರಮ್ಯಾ ವಿರುದ್ಧವೇ ಕೆಟ್ಟ ಕಮೆಂಟ್ ಗಳನ್ನ ಹಾಕಿ ಜೈಲು ಪಾಲಾಗಿದ್ದರು. ಇದೀಗ ಅವರನ್ನ ಕ್ಷಮಿಸ್ತಾ ಇದ್ದೀನಿ ಅಂತ ರಮ್ಯಾ ಅವರೇ ಹೇಳಿದ್ದಾರೆ.

 

ಇಂದು ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಮ್ಯಾ, ಆರೋಪಿಗಳನ್ನು ನಾನು ಯಾವಾಗಲೋ ಕ್ಷಮಿಸಿದ್ದೇನೆ. ಆದರೆ ಈ ರೀರಿ ಯಾರಿಗೂ ಮಾಡಬಾರದು ಅನ್ನೋದು ನನ್ನ ಉದ್ದೇಶ. ಇದು ಮತ್ತೆ ರಿಪೀಟ್ ಆಗಲ್ಲ ಎಂದು ಭಾವಿಸಿದ್ದೇನೆ. ಅವರಿಗೆ ಶಿಕ್ಷೆ ಕೊಡಬೇಕು ಅನ್ನೋ ಉದ್ದೇಶ ಇರಲಿಲ್ಲ. ಹೆಣ್ಣು ಮಕ್ಕಳ ವಿಚಾರದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಬೇಕಿತ್ತು. ನ್ಯಾಯಾಲಯದ ಮೂಲಕ ಬುದ್ಧಿ ಹೇಲಕಬೇಕಿತ್ತು‌ ಈಗ ಎಲ್ಲರು ಜಾಮೀನಿನ ಮೇಲೆ ಆಚೆ ಬಂದಿದ್ದಾರೆ. ತಪ್ಪು ಮಾಡಿದವರ ಕುಟುಂಬ ನನ್ನ ಕ್ಷಮೆ ಕೇಳುವುದು ಬೇಡ. ನನಗೆ ಕ್ಷಮೆ ಕೇಳುವ ಬದಲು ನಿಮ್ಮ ಮಕ್ಕಳಿಗೆ ಬುದ್ದಿ ಹೇಳಿ. ಫೋನ್ ಇದೆ, ಡೇಟಾ ಇದೆ ಅಂತ ಹೀಗೆ ಮಾಡಬಾರದು ಎಂದಿದ್ದಾರೆ.

ಇನ್ನು ರಮ್ಯಾ ಕೊಟ್ಟ ದೂರಿನ ಆಧಾರದ ಮೇಲೆ ಕೆಟ್ಟ ಕಮೆಂಟ್ ಹಾಕಿದವರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು‌‌. ಕೆಲ ದಿನಗಳ ಬಳಿಕ ಅವರ ಕುಟುಂಬಸ್ಥರು ಕಣ್ಣೀರು ಹಾಕಿದ್ದರು. ತಮ್ಮ ಮನೆಯ ಮಗ ಮಾಡಿದ ತಪ್ಪನ್ನು ಕ್ಷಮಿಸಬೇಕು. ಇಡೀ ಕುಟುಂಬ ಸಂಕಷ್ಟದಲ್ಲಿದೆ. ಹೀಗಾಗಿ ಮಾನವೀಯತೆಯ ದೃಷ್ಟಿಯಿಂದ ಕ್ಷಮಿಸಬೇಕು ಎಂದು ಕೇಳಿಕೊಂಡಿತ್ತು. ಆ ಕುಟುಂಬಗಳ ಕಣ್ಣೀರಿಗೆ ಕರಗಿದ ನಟಿ ರಮ್ಯಾ, ಕಡೆಗೂ ಆರೋಪಿಗಳನ್ನ ಕ್ಷಮಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟ ಕಮೆಂಟ್ ಹಾಕುವವರಿಗೆ ಇದೊಂದು ದೊಡ್ಡ ಪಾಠವಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...