Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪದೇ ಪದೇ ಡೆಡ್ಲೈನ್ ಕೊಟ್ಟರೂ ಎತ್ತಿನಹೊಳೆ ಕಾಮಗಾರಿ ವಿಳಂಬ : ಚಿತ್ರದುರ್ಗದ ಕೆರೆಗಳಿಗೂ ಸಮಸ್ಯೆ..!

---Advertisement---

ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜನತೆ ಜಾಯ್ತಿರುವಂತ ಯೋಜನೆ ಎತ್ತಿನಹೊಳೆ ಯೋಜನೆಯಾಗಿದೆ. ಈ ಯೋಜನೆಯಿಂದ ಈ ಭಾಗದ ಜನರಿಗೆ ನೀರಿನ ಸಮಸ್ಯೆ ಬಗೆಹರಿಯಲಿದೆ. ಬಯಲು ಸೀಮೆಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಕೃಷಿಗೆ ನೀರಿನ ಸೌಲಭ್ಯ ಒದಗಿಸುವುದಕ್ಕೆ ಸರ್ಕಾರ ಮಾಡಿರುವಂತ ಯೋಜನೆ ಇದಾಗಿದೆ. ಆದರೆ ಈ ಕಾಮಗಾರಿ ಅದ್ಯಾಕೋ ಏನೋ ನಿಧಾನಗತಿಯಲ್ಲಿ ಸಾಗುತ್ತಿದೆ.

ಸಿಎಂ ಸಿದ್ದರಾಮಯ್ಯ ಅವರು ಈಗ ಮತ್ತೊಂದು ಡೆಡ್ಲೈನ್ ನೀಡಿದ್ದಾರೆ. 2027ರ ಮಾರ್ಚ್ ತಿಂಗಳ ಒಳಗೆ ಈ ಯೋಜನೆಯನ್ನು ಪೂರ್ಣ ಮಾಡಬೇಕೆಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಯಾವುದೇ ನೀರಾವರಿ ಯೋಜನೆಯಾದರೂ ಅದು ಹೇಳಿದ ಕಾಲಮಿತಿಯೊಳಗೆ ಪೂರ್ಣವಾಗುವುದೇ ಇಲ್ಲ. ಆ ಸಾಲಿಗೆ ಇದೀಗ ಎತ್ತಿನ ಹೊಳೆ ಯೋಜನೆಯೂ ಸೇರಿಕೊಂಡಿದೆ. ಹಾಸನ ಜಿಲ್ಲೆಯ ಸಕಲೇಶಪುರದ ಬಳಿ ಕಳೆದ ವರ್ಷ ಡಿಸಿಎಂ ಡಿಕೆ ಶಿವಕುಮಾರ್ ಎತ್ತಿನ ಹೊಳೆ ಯೋಜನೆಯನ್ನು ಉದ್ಘಾಟನೆ ಮಾಡಿದ್ದರು.

ರಾಜ್ಯದಲ್ಲ ಈಗಾಗಲೇ ಮುಂಗಾರು ಶುರುವಾಗಿದೆ. ಪಶ್ಚಿಮ ಘಟ್ಟ ಭಾಗದಲ್ಲಿ ಉತ್ತಮ ಮಳೆಯೂ ಆಗ್ತಾ ಇದೆ. ಎತ್ತಿನಹೊಳೆ ಯೋಜನೆಯಿಂದ ವಾಣಿ ವಿಲಾಸ ಸಾಗರ ಡ್ಯಾಂಗೆ ನೀರಂತೂ ಹರಿದಿಲ್ಲ. ಇದರಿಂದ ಚಿತ್ರದುರ್ಗದ ಕೆರೆಗಳಿಗೂ ಎತ್ತಿನ ಹೊಳೆ ನೀರು ಹರಿದಿಲ್ಲ. ಎತ್ತಿನಹೊಳೆ ಯೋಜನೆಯಡಿ ವರ್ಷಕ್ಕೆ ಬರೋಬ್ಬರಿ 24 ಟಿಎಂಸಿ ನೀರು ಲಭ್ಯವಾಗುತ್ತದೆ ಎಂದುಬಾಂದಾಜಿಸಲಾಗಿತ್ತು. ಅದರಲ್ಲಿ 14 ಟಿಎಂಸಿ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಕೆ ಮಾಡಬೇಕಯ, 9.9 ಟಿಎಂಸಿ ನೀರನ್ನು ಕೆರೆಹಳಿಗೆ ನೀರು ತುಂಬಿಸಬೇಕೆಂದು ನಿರ್ಧರಿಸಲಾಗಿತ್ತು. ಏಳು ಜಿಲ್ಲೆಗಳಿಗೆ ಇದರಿಂದ ಕುಡಿಯುವ ನೀರಿನ ವ್ಯವಸ್ಥೆ ಆಗ್ತಾ ಇತ್ತು. ಆದರೆ ಯೋಜನೆ ವಿಳಂಬ ಆಗ್ತಾ ಇದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment