Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಯಲಹಂಕದ ವಾರ್ಡ್ ಒಂದಕ್ಕೆ ಡಿಕೆ ಶಿವಕುಮಾರ್ ಮಗನ ಹೆಸರನ್ನಿಟ್ಟರಾ..? ಏನ್ ಸಾಧನೆ ಅಂತ ಕೇಳ್ತಿದ್ದಾರೆ..!

---Advertisement---

ಬೆಂಗಳೂರು: ಸಾಧನೆ ಮಾಡಿದವರು, ಸಮಾಜ ಸೇವಕರ ಹೆಸರುಗಳನ್ನ ರಸ್ತೆಗಳಿಗೆ ಇಡುವುದು ಸಾಮಾನ್ಯ. ಅದು ಅವರಿಗೆ ಗೌರವ ಸೂಚಿಸಿದಂತೆ. ಆದರೆ ಯಲಹಂಕದ 3ನೇ ವಾರ್ಡ್ ಗೆ ಮರುನಾಮಕರಣ ಮಾಡಲಾಗಿದೆ. ಆ ಹೆಸರೆ ಈಗ ಸುದ್ದಿಗೆ ಕಾರಣವಾಗಿದೆ. ಬಿಬಿಎಂಪಿ ಈಗ ಜಿಬಿಎ ಆಗಿದೆ. ಜಿಬಿಎ ಆದ್ಮೇಲೆ ಕೆಲ ವಾರ್ಡ್ ಗಳ ಹೆಸರನ್ನು ಮರುನಾಮಕರಣ ಮಾಡಲಾಗಿದೆ.

ಮೂರನೇ ವಾರ್ಡ್ ಗೆ ಆಕಾಶ್ ಎಂಬ ಹೆಸರನ್ನ ಇಡಲಾಗಿದೆ. ಈ ಹೆಸರಿನ ಬಗ್ಗೆ ಪ್ರಶ್ನೆ ಮಾಡಿರುವ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಪ್ರಶ್ನೆ ಮಾಡಿದ್ದಾರೆ. ಆ ಸುತ್ತಮುತ್ತ ಆಕಾಶ್ ಹೆಸರಿನ ಸಾಧಕರು ಇಲ್ವೆ ಇಲ್ಲ. ನನಗೆ ಬಂದ ಮಾಹಿತಿಯ ಪ್ರಕಾರ ಅದು ಡಿಕೆ ಶಿವಕುಮಾರ್ ಅವರ ಮಗನ ಹೆಸರು. ಈ ರೀತಿಯ ಕೆಲಸಗಳಿಗೆಲ್ಲ ಡಿಕೆ ಶಿವಕುಮಾರ್ ಒಪ್ಪುವುದು ಇಲ್ಲ. ಹಾಗಾದ್ರೆ ಆಕಾಶ್ ಎಂಬುವವರು ಯಾರು..? ಒಂದು ವೇಳೆ ನನಗೆ ಬಂದ ಮಾಹಿತಿಯೇ ಸತ್ಯವಾದರೆ ಕೂಡಲೇ ಹೆಸರನ್ನ ಬದಲಾಯಿಸಿ ಎಂದು ಆಗ್ರಹಿಸಿದ್ದಾರೆ.

ಮೂರನೇ ವಾರ್ಡ್ ಗೆ ಆಕಾಶ್ ಎಂಬ ಹೆಸರನ್ನು ಬದಲಾಯಿಸಿ, ವೆಂಕಟಾಲ್ ಅಥವಾ ಮಾರುತಿ ನಗರ ಎಂದು ಮರು ನಾಮಕರಣ ಮಾಡಿ. ಎರಡನೇ ವಾರ್ಡ್ ಹೆಸರನ್ನು ಬದಲಾಯಿಸಿ ಎಂದು ಒತ್ತಾಯಿಸಿರುವ ವಿಶ್ವನಾಥ್, ಈ ಆಕಾಶ್ ಯಾರು..? ಏನು ಸಾಧನೆ ಮಾಡಿದ್ದಾರೆ..? ನಮಗೂ ಗೊತ್ತಿಲ್ಲ. ಅಲ್ಲದೆ ಈ ಆಕಾಶ್, ಡಿಕೆ ಪುತ್ರ ಆಕಾಶ್ ಇಬ್ಬರು ಒಬ್ಬರೇನಾ..? ಅದು ಕ್ಲಾರಿಟಿ ಇಲ್ಲ. ಮೊದಲು ಇದಕ್ಕೆ ಕ್ಲಾರಿಟಿ ಕೊಡಿ, ಇಲ್ಲ ಹೆಸರು ಬದಲಾಯಿಸಿ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now