ಕೆಜಿಎಫ್ ಸರಣಿ ಮುಗಿದ ಮೇಲಂತೂ ಯಶ್ ಮುಂದಿನ ಸಿನಿಮಾಗೆ ಅಭಿಮಾನಿಗಳು ಕಾದಿದ್ದು ಅದೆಷ್ಟೋ. ಕಂಡಕಂಡಲ್ಲಿ, ಸಿಕ್ಕ ಸಿಕ್ಕಲ್ಲಿ ಮುಂದಿನ ಸಿನಿಮಾದ ಅಪ್ಡೇಟ್ ಕೇಳುತ್ತಾ ಇದ್ದರು. ಬರೀ ಯಶ್ ಮಾತ್ರವಲ್ಲ ರಾಧಿಕಾ ಅವರಿಗೂ ಕಾಟ ಕೊಟ್ಟಿದ್ದಾರೆ. ಅಣ್ಣನ ಮುಂದಿನ ಸಿನಿಮಾ ಯಾವಾಗ ಅಂತ ರಾಧಿಕಾ ಹಾಕು ವ ಪೋಸ್ಟರ್ ಗಳಿಗೆಲ್ಲಾ ಕಮೆಂಟ್ ಮೂಲಕ ಪ್ರಶ್ನಿಸಿದ್ದಾರೆ. ಇದೀಗ ಅದಕ್ಕೆ ಕಾಲ ಕೂಡಿ ಬಂದಿದೆ. ಕಡೆಗೂ ಯಶ್ ಸಿನಿಮಾ ಅನೌನ್ಸ್ ಆಗಿದೆ.
ಇಂದು ಯಶ್ 19ನೇ ಸಿನಿಮಾದ ಟೈಟಲ್ ಅನೌನ್ಸ್ ಆಗಿದೆ. ಅದುವೇ ‘ಟಾಕ್ಸಿಕ್’. ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಸಿನಿಮಾದ ಟೈಟಲ್ ಲಾಂಚ್ ಆಗುತ್ತಿದ್ದಂತೆ ಫ್ಯಾನ್ಸ್ ಜೋಶ್ ಜೋರಾಗಿತ್ತು. ಟೈಟಲ್ ಲಾಂಚ್ ಪೋಸ್ಟರ್ ನಲ್ಲಿ ಲುಕ್ ಕೂಡ ರಿವೀಲ್ ಆಗಿದೆ. ಆದರೆ ಸ್ವಲ್ಪೇ ಸ್ವಲ್ಪ ಕಂಡ ಯಶ್ ನೋಟವನ್ನು ಹೆಚ್ಚು ನೋಡುವ ಕಾತುರ ಸಹಜವಾಗಿಯೇ ಹೆಚ್ಚಾಗಿದೆ.
ಟಾಕ್ಸಿಕ್ ಸಿನಿಮಾವನ್ನು ಮಹಿಳಾ ನಿರ್ದೇಶಕಿಯೊಬ್ಬರು ನಿರ್ದೇಶನ ಮಾಡುತ್ತಿದ್ದಾರೆ. ಮಲಯಾಳಂ ಮೂಲದ ನಿರ್ದೇಶಕಿ ಗೀತೂ ಮೋಹನ್ ದಾಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಗೀತೂ ಮೋಹನ್ ದಾಸ್ ಒಂದು ಕಿರುಚಿತ್ರ ಹಾಗೂ ಎರಡು ಫೀಚರ್ ಫಿಲಂಸ್ ಮಾಡಿದ್ದಾರೆ. ಲಾಯರ್ಸ್ ಡೈಸ್ ಎಂಬ ಸಿನಿಮಾಗೆ ಎರಡು ರಾಷ್ಟ್ರ ಪ್ರಶಸ್ತಿ ಲಭಿಸಿವೆ. ಇವರ ನಿರ್ದೇಶನದ ಮೂತನ್ ಸಿನಿಮಾ ಕೂಡ ಹಲವು ಫಿಲ್ಮ ಫೆಸ್ಟಿವಲ್ ಗಳಲ್ಲಿ ಪ್ರಸಾರ ಕಂಡಿದೆ. ಹೀಗಾಗಿ ಇವರು ಯಶ್ 19 ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿರುವುದರಿಂದ ಕುತೂಹಲ ಹೆಚ್ಚಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












