Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಹಿಳಾ ಅಭಿವೃದ್ಧಿಗೆ ನಬಾರ್ಡ್ ಯೋಜನೆಗಳು ಸಹಕಾರಿ : ಸುರೇದ್ರ ಬಾಬು

---Advertisement---

 

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 08 : ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಾಗಿದ್ದು ನಬಾರ್ಡ್ ನ ಎಲ್ಲಾ ಯೋಜನೆಗಳಲ್ಲಿ ಶೇ.50ರಷ್ಟು ರೈತ ಮಹಿಳೆಯರು ಭಾಗವಹಿಸಿ ಅಭಿವೃದ್ಧಿ ಹೊಂದಬೇಕು ಎಂದು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ (ನಬಾರ್ಡ್) ಕರ್ನಾಟಕ ವಲಯದ ಮುಖ್ಯ ಪ್ರಧಾನ ವ್ಯವಸ್ಥಾಪಕ (ಸಿಜಿಎಂ) ಸುರೇಂದ್ರ ಬಾಬು ಹೇಳಿದರು.

ಅವರು ತಾಲ್ಲೂಕಿನ ಕಲ್ಲೇನಹಳ್ಳಿ, ಸಾಸಲಹಟ್ಟಿ ಮತ್ತು ಬಚ್ಚಬೋರನಹಟ್ಟಿ ಗ್ರಾಮಗಳಲ್ಲಿ ನಬಾರ್ಡ್ ನೆರವಿನಿಂದ ಸ್ಪೀಚ್ ಸಂಸ್ಥೆ ಚಿತ್ರದುರ್ಗರವರು ಅನುಷ್ಠಾನಗೊಳಿಸುತ್ತಿರುವ ಬುಡಕಟ್ಟು ಜನಾಂಗ ಅಭಿವೃದ್ಧಿ ಯೋಜನೆಯಡಿಯಲ್ಲಿ ನಿರ್ಮಾಣ ಮಾಡಿರುವ ತೋಟಗಾರಿಕಾ ತಾಕುಗಳನ್ನು ವೀಕ್ಷಿಸಿದರು. ನಂತರ ಯೋಜನೆಯ ಫಲಾನುಭವಿಗಳೊಂದಿಗೆ ಮಾತನಾಡಿ, ಖುಷ್ಕಿ ಭೂಮಿಯಲ್ಲಿ ತೋಟಗಾರಿಕಾ ಸಸಿಗಳನ್ನು ಉತ್ತಮವಾಗಿ ಬೆಳೆಸಿಕೊಂಡಿರುವ ಎಲ್ಲಾ ರೈತರ ಶ್ರಮ ಶ್ಲಾಘನೀಯ ಎಂದರು. ಯೋಜನಾ ಪ್ರದೇಶದಲ್ಲಿ ಪ್ರತೀ ವರ್ಷವೂ ಬುಡಕಟ್ಟು ದಿನಾಚರಣೆ ಆಚರಿಸಬೇಕು ಹಾಗೂ ಯೋಜನಾ ಪ್ರದೇಶದಲ್ಲಿ ರೈತ ಉತ್ಪಾದಕ ಕಂಪನಿ ಸ್ಥಾಪಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಸುಮಂತ್ ಸಾಹೂ, ಸಹಾಯಕ ಪ್ರಬಂಧಕರು, ವಿನಂತ್.ಕೆ, ಚಿತ್ರದುರ್ಗ ಜಿಲ್ಲಾ ಅಭಿವೃದ್ಧಿ ಪ್ರಬಂಧಕರು, ಡಾ. ಸಂಜಯ್. ಎಂ.ಟಿ, ಪ್ರಾಧ್ಯಾಪಕರು, ಜಿ. ಕೆ.ವಿ.ಕೆ. ಬೆಂಗಳೂರು, ಸಮಿತಿಯ ಅಧ್ಯಕ್ಷರಾದ ಈಶಣ್ಣ, ಸದಸ್ಯರಾದ ಪಾಪಯ್ಯ, ಪ್ರಹ್ಲಾದ, ಸಮಿತಿಯ ಸದಸ್ಯರು ಹಾಜರಿದ್ದರು. ಸ್ಪೀಚ್ ಸಂಸ್ಥೆಯ ಹೆಚ್.ಶೇಷಪ್ಪ, ಎಸ್.ಆರ್. ಸಂತೋಷ್ ರವರು ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...