Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸ್ಟೇರಿಂಗ್ ಹಿಡಿದ ಮಾದಾರ ಚನ್ನಯ್ಯ ಶ್ರೀಗಳು: ಸದ್ಗುರುಗಳನ್ನು ಕಾರಿನಲ್ಲಿ ಕೂರಿಸಿಕೊಂಡು ಡ್ರೈವಿಂಗ್ ಮಾಡಿದ ಸ್ವಾಮೀಜಿ!

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಜು. 01: ಈಶಾ ಫೌಂಡೇಶನ್‍ನ ಜಗ್ಗಿ ಸದ್ಗುರು ಶ್ರೀಗಳನ್ನ ಕಾರಿನಲ್ಲಿ ಕೂರಿಸಿಕೊಂಡ ಮಾದಾರ ಚನ್ನಯ್ಯ ಶ್ರೀಗಳು ಖುದ್ದು ಕಾರು ಚಲಾಯಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಈಶಾ ಫೌಂಡೇಶನ್‍ನ ಸಂಸ್ಥಾಪಕರಾದ ಜಗ್ಗಿ ವಾಸುದೇವ ಸದ್ಗುರು ಶ್ರೀಗಳು ಉಪನ್ಯಾಸ ಕಾರ್ಯಕ್ರಮ ನಿಮಿತ್ತ ಮಾದಾರ ಚನ್ನಯ್ಯ ಗುರುಪೀಠಕ್ಕೆ ಆಗಮಿಸಿದ್ದು ಕಾರ್ಯಕ್ರಮ ಮುಗಿದ ಬಳಿಕ ಮುಂದಿನ ಕಾರ್ಯಕ್ರಮಕ್ಕೆ ಕೊಪ್ಪಳಕ್ಕೆ ತೆರಳಬೇಕಿದ್ದು ಹೆಲಿಪ್ಯಾಡ್‍ಗೆ ತೆರಳಲು ಸದ್ಗುರು ಶ್ರೀಗಳು ಸಿದ್ದರಾಗಿದ್ದರು. ಈ ವೇಳೆ ಇನ್ನೋವಾ ಕಾರು ಹತ್ತಿ ಕೂತ ಸದ್ಗುರು ಶ್ರೀಗಳನ್ನು ಖುದ್ದು ಹೆಲಿಪ್ಯಾಡ್‍ಗೆ ಬಿಡಲು ಮಾದಾರ ಗುರುಪೀಠದ ಬಸವ ಮಾದಾರ ಚನ್ನಯ್ಯ ಶ್ರೀಗಳು ಹೊರಟಿದ್ದು ವಿಶೇಷವಾಗಿತ್ತು.
ಇನ್ನೋವಾ ಕಾರು ಚಾಲಕನ ಜಾಗದಲ್ಲಿ ಕೂತು ಸ್ಟೇರಿಂಗ್ ಹಿಡಿದು ಖುದ್ದು ತಾವೆ ಕಾರು ಚಲಾಯಿಸಿದ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ಡ್ರೈವಿಂಗ್ ಮಾಡಿ ಹೆಲಿಪ್ಯಾಡ್‍ನವರೆಗೆ ಕಾರು ಚಲಾಯಿಸಿ ಕೊಂಡು ಹೋಗಿ ಎಲ್ಲರ ಗಮನ ಸೆಳೆದಿದ್ದು ಹೆಲಿಪ್ಯಾಡ್‍ನವರೆಗೆ ಡ್ರೈವಿಂಗ್ ಮಾಡಿ ಸದ್ಗುರು ಶ್ರೀಗಳನ್ನ ಬೀಳ್ಕೊಟ್ಟು ಬಂದಿದ್ದು ಡ್ರೈವಿಂಗ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಮುರುಘಾ ಮಠದ ಹೆಲಿಪ್ಯಾಡ್‍ಗೆ ಬಂದಿಳಿದ ಸದ್ಗುರು ಶ್ರೀಗಳಿಗೆ ಮಾದಾರ ಚನ್ನಯ್ಯ ಶ್ರೀಗಳಿಂದ ಮಾದಾರ  ಗುರುಪೀಠದಲ್ಲಿ ಅದ್ದೂರಿ ಸ್ವಾಗತ ಮಾಡಿದರೆ ಮಾದಾರ ಚನ್ನಯ್ಯ ಶ್ರೀಮಠದ ಕೈತೋಟವನ್ನು ಸದ್ಗುರು ಶ್ರೀಗಳು ವೀಕ್ಷಿಸಿದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now