ತುಮಕೂರು: ಲೋಕಸಭಾ ಚುನಾವಣೆಗೆ ಈಗಾಗಲೇ ಪಕ್ಷಗಳು ಸೆಣೆಸಾಟ ನಡೆಸುತ್ತಿವೆ. ಪ್ರಚಾರ, ಟಿಕೆಟ್ ಹಂಚಿಕೆ, ಗೆಲುವಿನ ಲೆಕ್ಕಾಚಾರಗಳು ಶುರುವಾಗಿವೆ. ಈ ಬಾರಿ ಚುನಾವಣೆ ಗೆದ್ದು ಹ್ಯಾಟ್ರಿಕ್ ಬಾರಿಸುವ ಖುಷಿಯಲ್ಲಿ ಪ್ರಧಾನಿ ಮೋದಿ ಇದ್ದರೆ, ಶತಾಯಗತಾಯ ಬಿಜೆಪಿ ಸೋಲಿಸಿ ಪ್ರಧಾನಿ ಹುದ್ದೆ ಅಲಂಕರಿಸುವ ಕನಸ್ಸನ್ನು ಕಾಂಗ್ರೆಸ್ ಕಾಣುತ್ತಿದೆ. ಇದೆಲ್ಲದರ ನಡುವೆ ನೊಣವಿನಕೆರೆ ಸ್ವಾಮೀಜಿ ಅವರು ಶಾಕಿಂಗ್ ಭವಿಷ್ಯ ನುಡಿದಿದ್ದಾರೆ. ಈ ಬಾರಿ ಪ್ರಧಾನಿ ಯಾರಾಗ್ತಾರೆ ಎಂಬುದನ್ನು ಹೇಳಿದ್ದಾರೆ.
ಈ ಬಾರಿಯ ಪ್ರಧಾನಿ ಒಬ್ಬ ಮಹಿಳೆಯಾಗುತ್ತಾರೆ ಎಂಬುದಾಗಿ ತುಮಕೂರಿನ ನೊಣವಿನಕೆರೆ ಯಶ್ವಂತ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಈಗಾಗಲೇ ಎರಡು ಬಾರಿ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಹುದ್ದೆಗೆ ಏರಲ್ಲ ಎಂದಿದ್ದಾರೆ. ಈ ಮೂಲಕ ಈ ಬಾರಿ ಮಹಿಳೆಯೇ ಪ್ರಧಾನಿಯಾಗುವುದು ಎಂದು ಭವಿಷ್ಯ ನುಡಿದಿದ್ದಾರೆ.
ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಮಹಿಳಾ ಪ್ರಧಾನಿಯಾಗಿ ಪ್ರಿಯಾಂಕಾ ಗಾಂಧಿ ದೇಶದ ಗದ್ದುಗೆ ಏರಲಿದ್ದಾರೆ. ಒಬ್ಬ ಸ್ತ್ರಿ ಪುರುಷನ ಎದುರು ದುರ್ಗಿಯಾಗಿ ನಿಂತು, ಪುರುಷನಿಗೆ ಭಯ ಹುಟ್ಟಿಸಿ, ತಾನೇ ಅಧಿಕಾರವನ್ನು ಮಾಡುತ್ತಾಳೆ. ತಾವು ಗೆದ್ದ ನಂತರ ತಾಯಿಮಮತೆಯಿಂದ ಆ ಅಧಿಕಾರವನ್ನು ಪರರಿಗೆ ಬಿಟ್ಟುಕೊಡುತ್ತಾಳೆ ಎಂದು ಹೇಳಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುತ್ತದೆ, 135 ಕ್ಷೇತ್ರಗಳನ್ನು ಗೆಲ್ಲುತ್ತದೆ ಎಂದು ನಿಖರವಾಗಿ ಭವಿಷ್ಯ ನುಡಿದಿದ್ದರು. ಅದು ಸತ್ಯ ಕೂಡ ಆಗಿತ್ತು. ಅದಷ್ಟೇ ಅಲ್ಲ ತೆಲಂಹಾಣದ ರಾಜಕೀಯ ಭವಿಷ್ಯ ಸೇರಿದಂತೆ ನೊಣವಿನಕೆರೆ ಸ್ವಾಮೀಜಿ ನುಡಿದಿದ್ದ ಭವಿಷ್ಯ ನಿಜವಾಗಿದೆ.
(ತಾಂತ್ರಿಕ ಸಮಸ್ಯೆಯಿಂದ ನೊಣವಿನಕೆರೆ ಸ್ವಾಮೀಜಿ ಸುದ್ದಿಗೆ ಬೇರೆ ಸ್ವಾಮೀಜಿಯ ಫೋಟೋ ಅದಲು-ಬದಲು ಆಗಿತ್ತು. ಈ ಪ್ರಮಾದಕ್ಕೆ ವಿಷಾದಿಸುತ್ತೇವೆ.)
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












