ಮೈಸೂರು: ರೈಲ್ವೆಗೆ ಸಂಬಂಧಿಸಿದಂತ ಪರೀಕ್ಷೆಗಳು ಕನ್ನಡದಲ್ಲಿ ಇರದೆ ಇರುವುದಕ್ಕೆ ಅದೆಷ್ಟೊ ವಿದ್ಯಾರ್ಥಿಗಳು ಇದರಿಂದ ಹೊರಗುಳಿದಿದ್ದಾರೆ. ಈ ಬಗ್ಗೆ ಕೇಂದ್ರ ರೈಲ್ವೆ ಸಚಿವ ವಿ ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ರೈಲ್ವೆ ಇಲಾಖೆಯಲ್ಲಿ ಸ್ಪಿಕ್ ಅಂತ ಇದೆ. ಎಲ್ಲೆಲ್ಲಿ ತೊಂದರೆಗಳಿವೆ, ಏನಿದೆ ಎಂಬುದೆಲ್ಲವನ್ನು ತಿಳಿಯುವುದಕ್ಕೇನೆ ಇರೋದು. ಟ್ರೈನ್ ಏನಿದ್ದರು ಟ್ರ್ಯಾಕ್ ಮೇಲೆ ಹೋಗಬೇಕಿದೆ. ಅನುಭವ ಜಾಸ್ತಿ ಇರೋದ್ರಿಂದ ಅದರ ಉಪಯೋಗ ಪಡೀತಾ ಇದ್ದೀವಿ ಅಂತ ರೈಲ್ವೆ ಬಗ್ಗೆ ತಿಳಿಸಿದ್ದಾರೆ.
ಕುಮಾರಸ್ವಾಮಿ ಅವರು ಕಳೆದ ಎರಡ್ಮೂರು ತಿಂಗಳಿನಿಂದ ಪತ್ರ ಬರೆದಿದ್ದರು. ಎಲ್ಲಾ ಒಟ್ಟಿಗೆ ಹೋಗೋಣಾ ಅಂತ. ಹೀಗಾಗಿ ಒಟ್ಟಿಗೆ ಹೋಗ್ತಾ ಇದ್ದೀವಿ. ಸಾಮಾನ್ಯ ಜನರ ಪ್ರಯಣದಲ್ಲಿ ರೈಲ್ವೆ ಅತ್ಯುತ್ತಮವಾದ ಕೆಲಸ ಮಾಡ್ತಾ ಇದೆ. ನಾನು ನಾಲ್ಕಲ್ಲ 1 ಸಾವಿರದ 900 ಕೋಟಿಯಲ್ಲಿ 61 ರೈಲ್ಷೆ ನಿಲ್ದಾಣಗಳು ಅಪ್ ಗ್ರೇಡ್ ಆಗ್ತಾ ಇದೆ. ಅದರೊಳಗೆ ಈಗಾಗಲೇ 23 ಮುಗಿದಿದೆ. ಇನ್ನಷ್ಟು ತೆಗೆದುಕೊಳ್ತಾ ಇದ್ದೇವೆ ಎಂದಿದ್ದಾರೆ.

ಇದೇ ವೇಳೆ ರೈಲ್ವೆ ಪರೀಕ್ಷೆಗಳು ಕನ್ನಡದಲ್ಲಿ ಆಗುತ್ತಿರುವ ಬಗ್ಗೆ ಮಾತನ್ನಾಡಿ, ಅವೆಲ್ಲವೂ ಕೂಡ ಚರ್ಚೆಯಲ್ಲಿದೆ. ಕನ್ನಡದಲ್ಲಿ ಎಕ್ಸಾಂ ಬರೆದು ಪಾಸಾಗುವುದಕ್ಕೆ ಈಗಾಗಲೇ ಪ್ರಾವಿಷನ್ ಆಗಿದೆ. ಇವರು ಕೇಳ್ತಾ ಇರೋದು ಡಿಪಾರ್ಟ್ಮೆಂಟ್ ನಲ್ಲಿ ಪ್ರಮೋಷನ್ ವಿಚಾರ. ಅದು ಚರ್ಚೆ ನಡೀತಾ ಇದೆ, ಚರ್ಚೆ ಆದ್ಮೇಲೆ ಏನಾಗುತ್ತೆ ಎಂಬುದನ್ನು ನೋಡೋಣಾ ಎಂಬ ಮಾತನ್ನ ಹೇಳಿದ್ದಾರೆ. ಇಂದು ಸೋಮಣ್ಣ ಅವರ ಜೊತೆಗೆ ಕೇಂದ್ರ ಸಚಿವ ಕುಮಾರಸ್ವಾಮಿ, ಸಂಸದ ಯದುವೀರ್ ಒಡೆಯರ್ ಅವರು ಕೂಡ ಸಾಥ್ ನೀಡಿದ್ದಾರೆ. ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ಮತ್ತಷ್ಟು ಯೋಜನೆಗಳನ್ನು ತರಲು ವಿ ಸೋಮಣ್ಣ ತಯಾರಿ ನಡೆಸಿದ್ದಾರೆ.
















