ಬೆಂಗಳೂರು; ಸೋನು ನಿಗಮ್ ಎಂದರೆ ಕನ್ನಡಿಗರ ಅಚ್ಚುಮೆಚ್ಚಿನ ಗಾಯಕರಾಗಿದ್ದಾರೆ. ಅವರ ಧ್ವನಿಯಲ್ಲಿ ಹಾಡು ಕೇಳುವುದೇ ಕನ್ನಡಿಗರಿಗೆ ಖುಷಿಯ ವಿಚಾರ. ಆದ್ರೆ ಈಗ ಅವರೇ ಕನ್ನಡಿಗರೇ ದ್ವೇಷ ಮಾಡುವಂತೆ ಆಗಿದೆ. ಅಂಥ ಮಾತನ್ನ ಹಾಡಿದ್ದಾರೆ. ಕನ್ನಡಿಗರನ್ನ ಕೆಣಕಿದ್ದಾರೆ. ಇದರಿಂದ ಕನ್ನಡದಿಂದಾನೇ ಬ್ಯಾನ್ ಆಗ್ತಾರಾ ಸೋನು ನಿಗಮ್ ಅಂತ ನೋಡಬೇಕಿದೆ.
ಇತ್ತೀಚೆಗೆ ಈಸ್ಟ್ ಪಾಯಿಂಟ್ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್ ಭಾಗಿಯಾಗಿದ್ದರು. ಆಗ ವಿದ್ಯಾರ್ಥಿಯೊಬ್ಬ ಕನ್ನಡದ ಸಾಂಗ್ ಹಾಡುವಂತೆ ಕೇಳಿದ್ದಾನೆ. ಇದಕ್ಕೆ ರೊಚ್ಚಿಗೆದ್ದ ಸೋನು ನಿಗಮ್ ಕನ್ನಡಿಗರನ್ನೆ ಪೆಹಲ್ಗಾಮ್ ದಾಳಿಗೆ ಹೋಲಿಸಿದ್ದಾರೆ. ನಾನು ಬೇರೆ ಭಾಷೆಗಳಲ್ಲಿ ಹಾಡಿದ್ದೇನೆ. ಆದರೆ ದಿ ಬೆಸ್ಟ್ ಸಾಂಗ್ ಆಡಿರೋದು ಕನ್ನಡದಲ್ಲಿಯೆ. ಕರ್ನಾಟಕಕ್ಕೆ ಬರುವಾಗ ತುಂಬಾ ಖುಷಿಯಾಗುತ್ತೆ. ಯಾವುದೇ ಕಾರ್ಯಕ್ರಮಕ್ಕೆ ಹೋದಾಗಲೂ ಕನ್ನಡ ಹಾಡನ್ನ ಹಾಡಿ ಅಂತಾನೇ ಹೇಳ್ತಾರೆ. ಆಗ ಅವರಿಗಾಗಿ ನಾನು ಕನ್ನಡ ಹಾಡು ಹಾಡುತ್ತೇನೆ. ಆದರೆ ಆ ಹುಡುಗ ಕನ್ನಡ ಕನ್ನಡ ಅಂತ ಕಿರುಚಿಕೊಂಡಿದ್ದು ನನಗೆ ಇಷ್ಟವಾಗಲಿಲ್ಲ. ಇದೇ ಕಾರಣದಿಂದ ಪೆಹಲ್ಗಾಮ್ ದಾಳಿಯಾಗಿದ್ದು ಅಂತ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ.

ಈ ಹೇಳಿಕೆ ವೈರಲ್ ಆಗಿರೋ ಕಾರಣ ಸೋನು ನಿಗಮ್ ಅವರನ್ನ ಕನ್ನಡದಿಂದ ಬ್ಯಾನ್ ಮಾಡುವಂತ ಒತ್ತಾಯ ಕೇಳಿ ಬಂದಿದೆ. ಯುವ ಕರ್ನಾಟಕ ವೇದಿಕೆ ಒತ್ತಾಯ ಮಾಡಿದೆ. ಈ ಸಂಬಂಧ ಈಗ ಎಲ್ಲರ ಚಿತ್ತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯತ್ತ ನೆಟ್ಟಿದೆ. ಕನ್ನಡ ನಾಡು, ನುಡಿ ಬಗ್ಗೆ ಈ ರೀತಿಯ ಮಾತುಗಳನ್ನ ಆಡಿದಂತ ಸೋನು ನಿಗಮ್ ಅವರನ್ನು ಬ್ಯಾನ್ ಮಾಡ್ತಾರಾ ಅಂತ ನೋಡಬೇಕಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.
















