Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

SC ಒಳ ಮೀಸಲಾತಿ ಸಭೆಗೆ ಸತೀಶ್ ಜಾರಕಿಹೊಳಿ ಹೋಗ್ತಿರೋದ್ಯಾಕೆ..?

---Advertisement---

ಬೆಂಗಳೂರು: ಎಸ್ಸಿ ಒಳಮೀಸಲಾತಿ ವಿಚಾರ ಸಾಕಷ್ಟು ಚರ್ಚೆಯಲ್ಲಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಸಭೆ ಕರೆದಿದ್ದು, ಒಂದಷ್ಟು ವಿಚಾರಗಳು ಚರ್ಚೆಯಾಗಲಿವೆ. ಆ ಚರ್ಚೆಗೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೋಗ್ತಾ ಇದ್ದು, ಯಾಕೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, ಅವರು ಏನ್ ಮಾಡ್ತಾ ಇದ್ದಾರೆ ಅನ್ನೋದು ನಮಗೂ ಮಾಹಿತಿ ಬೇಕಲ್ಲ. ಏನು, ಎಂಥ ಅಂತ ನೋಡ್ಕೊಂಡು ಬರ್ತೀನಿ ಅಷ್ಟೇ. ಅದು ಅವರಿಗೆ ಸಂಬಂಧ ಪಟ್ಟ ವಿಚಾರ ಒಕೆ. ಆದ್ರೆ ನಮಗೂ ನಾಲೆಡ್ಜ್ ಇರಬೇಕಲ್ಲ. ಏನದು, ಹೇಗೆ ಎಂಬುದು ಅದಕ್ಕೆ ಹೋಗ್ತಾ ಇದ್ದೇನೆ. ಮಾಹಿತಿಯನ್ನ ಪಡೆಯೋದಕ್ಕೆ ಹೋಗ್ತಾ ಇದ್ದೀನಿ. ಹೋದ ಮೇಲೆ ಚರ್ಚೆ ಶುರುವಾಗಬಹುದು ಎಂದಿದ್ದಾರೆ. ದಲಿತ ಸಿಎಂ ವಿಚಾರ ಚರ್ಚೆಗೆ ಬರಬಹುದಾ ಎಂಬ ಪ್ರಶ್ನೆಗೆ ಉತ್ತರಿಸಿ, ನನಗೆ ಗೊತ್ತಿಲ್ಲ. ಅಲ್ಲಿ ಹೋದ ಮೇಲೆ ಅದರ ಬಗ್ಗೆ ಗೊತ್ತಾಗುತ್ತೆ. ನನಗೆ ಏನು ಆಹ್ವಾನ ಬಂದಿಲ್ಲ. ಹೋಗುವುದಕ್ಕೆ ನಮಗೂ ಅಧಿಕಾರ ಇದೆ. ಇಲ್ಲ ಅಂತ ಏನಿಲ್ಲ ಎಂದಿದ್ದಾರೆ.

ಅಹಿಂದ ನಾಯಕರು ಹೈಕಮಾಂಡ್ ಭೇಟಿಯಾಗ್ತಾರೆ ಎಂಬ ಮಾತಿಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ, ಈಗ ಸದ್ಯಕ್ಕೆ ಡೆಲ್ಲಿಗೆ ಹೋಗೋ ಯಾವ ಪ್ಲ್ಯಾನ್ ಕೂಡ ಇಲ್ಲ ಎಂದಿದ್ದಾರೆ. ದೆಹಲಿಯಲ್ಲಿ ನಮ್ಮ ಇಲಾಖೆ ಕೆಲಸ ಇದ್ರೆ ಹೋಗ್ತೇನೆ ಸುಮ್ನೆ ಹೋಗೋದಿಲ್ಲ ಎಂದಿದ್ದಾರೆ. ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರ ಸಿಎಂ ಸ್ಥಾನ ಮಿಸ್ ಆಗಿದ್ದರ ಬಗ್ಗೆ ಮಾತನಾಡಿ, ಈಗಿನದ್ದಲ್ಲ ಅವರ ಹೆಸರು ಬರ್ತಾ ಇರೋದು. 90ನಲ್ಲಿ ಖರ್ಗೆ ಅವರು ಹೋದಾಗಿನಿಂದ ಈ ವಿಚಾರ ಇದೆ. ಅವರು ಅರ್ಹರಿದ್ದರು ಆದರೂ ಸಿಕ್ಕಿಲ್ಲ ಎಂಬ ಚರ್ಚೆ ನಡೀತಾ ಇದೆ. ಅವರಿಗೂ ಅವಕಾಶ ತಪ್ಪಿದೆ. ಸಂದರ್ಭ ಬಂದ ಮೇಲೆ ಬರಬಹುದು ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...